ದಾಖಲೆ ಬರೆದ ದಾಮಿನಿ
ಕರ್ನಾಟಕದ ಭರವಸೆಯ ಈಜುಗಾರ್ತಿ ದಾಮಿನಿ ಕೆ.ಗೌಡ, ರಾಜ್ಯ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ...

ಬೆಂಗಳೂರು: ಕರ್ನಾಟಕದ ಭರವಸೆಯ ಈಜುಗಾರ್ತಿ ದಾಮಿನಿ ಕೆ.ಗೌಡ, ರಾಜ್ಯ ಸಬ್ ಜ್ಯೂನಿಯರ್ ಮತ್ತು ಜ್ಯೂನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ದಾಖಲೆ ಬರೆದಿದ್ದಾರೆ.
ಬಸವನಗುಡಿ ಈಜು ಕೇಂದ್ರದಲ್ಲಿ ಸೋಮವಾರ ಆರಂಭವಾದ ಮಹಿಳೆಯರ 200 ಮೀ.ಫ್ರೈ ವಿಭಾಗದ ಸ್ಪರ್ಧೆಯಲ್ಲಿ ದಾಮಿನಿ ಕೆ.ಗೌಡ 2: 23.6 ನಿಮಿಷದಲ್ಲಿ ದುರಿ ತಲುಪಿ ರಾಜ್ಯ ಮಟ್ಟದ ದಾಖಲೆ ಬರೆದಿದ್ದಾರೆ. ಈ ಮೂಲಕ ಚಿನ್ನದ ಪದಕ ಪಡೆದಿದ್ದಾರೆ.
ಈ ವಿಭಾಗದಲ್ಲಿ ನಿಖಿತಾ ಎಸ್.ವಿ ಮತ್ತು ಹಿತಾ ನಾಯಕ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಬಾಲಕಿಯರ 100 ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಸಲೋನಿ ದಲಾಲ್ 1:19. ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ರಾಜ್ಯ ಮಟ್ಟದ ದಾಖಲೆ ಬರೆದಿದ್ದಾರೆ. ಈ ವಿಭಾಗದಲ್ಲಿ ಹರ್ಷಿತಾ ಜಯರಾಮ್ ಮತ್ತು ಪ್ರತೀಕ್ಷಾ ಪಟೇಲ್ ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.
ಬಾಲಕರ 100 ಮೀ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲೂ ರಾಜ್ಯ ಮಟ್ಟದ ದಾಖಲೆ ನಿರ್ಮಿತವಾಗಿದೆ. 1:4.99 ನಿಮಿಷದಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿ ಎನ್ ಶ್ರೀಹರಿ, ಸ್ವರ್ಣ ಪದಕ ಸಂಪಾದಿಸಿದ್ದಾರೆ. ಈ ವಿಭಾಗದಲ್ಲಿ ಭಾವೇಶ್ ಆರ್ ಹಾಗೂ ಚಿರಾಗ್ ಅನಿರುಧ್ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


