ಕ್ರೀಡೆ

ವಿಂಬಲ್ಡನ್ ಸೆಮಿಫೈನಲ್‍ಗೆ ಫೆಡರರ್

ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಫ್ರಾನ್ಸ್ ನ ಗಿಲೆಸ್ ಸೈಮನ್ ವಿರುದ್ದ 6-3, 7-5, 5-2 ನೇರ ಸೆಟ್ ಗಳಲ್ಲಿ ಜಯಿಸಿ ಉಪಾಂತ್ಯಕ್ಕೆ ಅರ್ಹತೆ ಗಿಟ್ಟಿಸಿದರು...

ವಿಂಬಲ್ಡನ್ ಸೆಮಿಫೈನಲ್‍ಗೆ ಫೆಡರರ್
ರೋಜರ್ ಫೆಡರರ್
Published On :

ಲಂಡನ್: ವಿಶ್ವದ ಮಾಜಿ ನಂ.1 ಟೆನಿಸ್ ಪಟು ಸ್ವಿಟ್ಜರ್ ಲೆಂಡ್ ನ ರೋಜರ್ ಫೆಡರರ್ ಹಾಗೂ ಬ್ರಿಟನ್‍ನ ನಂ.1 ಆಟಗಾರ ಆಂಡಿ ಮರ್ರೆ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಉಪಾಂತ್ಯಕ್ಕೆ ಲಗ್ಗೆ ಹಾಕಿದ್ದಾರೆ. ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಸೆಮೀಸ್‍ಗೆ ಕಾಲಿಟ್ಟಿದೆ. ಆದರೆ, ಸ್ವಿಜರ್ಲೆಂಡ್ ನ ಸ್ಟಾನಿಸ್ಲಾಸ್ ವಾವ್ರಿಂಕಾ, ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲನ್ನು ಕಂಡು, ನಿರಾಸೆ ಅನುಭವಿಸಿದ್ದಾರೆ.

ಫೆಡರರ್ ಗೆ ಜಯ: ಬುಧವಾರ ಇಲ್ಲಿನ ನಂ. 1 ಕೋರ್ಟ್‍ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ 17 ಗ್ರಾಂಡ್‍ಸ್ಲಾಂ ಪ್ರಶಸ್ತಿಗಳ ಒಡೆಯ ಹಾಗೂ ಎರಡನೇ ಶ್ರೇಯಾಂಕಿತ ಹಾಗೂ ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್  ರೋಜರ್ ಫೆಡರರ್ ಫ್ರಾನ್ಸ್ ನ ಗಿಲೆಸ್ ಸೈಮನ್ ವಿರುದ್ದ 6-3, 7-5, 5-2 ನೇರ ಸೆಟ್ ಗಳಲ್ಲಿ ಜಯಿಸಿ ಉಪಾಂತ್ಯಕ್ಕೆ ಅರ್ಹತೆ ಗಿಟ್ಟಿಸಿ ದರು. ಸಾನಿಯಾಗೆ ಜಯ:ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ  ಸಾನಿಯಾ-ಹಿಂಗಿಸ್ ಜೋಡಿ, ಕಜಕಿಸ್ತಾನದ ಶ್ವೆಡೊವಾ ಮತ್ತು ಆಸ್ಟೇಲಿಯಾದ ಡೆಲ್ಲಾಕ್ವಾ ಜೋಡಿ ವಿರದ್ಧ  7-5, 6-3 ಸೆಟ್ಗಳ ಅಂತರದಲ್ಲಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮೀಸ್‍ಗೆ ಜೊಕೊ: ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಚ್, ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ರೊವೇಶಿಯಾದ ಮರಿನ್ ಸಿಲಿಕ್ ವಿರುದ್ಧ ಸೆಣಸಿದ ಅವರು, 6-4, 6-4, 6-4 ನೇರ ಸೆಟ್ಗಳಿಂದ ಜಯ ಸಾಧಿಸಿ, ಉಪಾಂತ್ಯಕ್ಕೆ ಲಗ್ಗೆಯಿಟ್ಟರು.

ಆಂಡಿ ಮರ್ರೆಗೆ ಗೆಲುವು: ಮತ್ತೊಂದು ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ಆಂಡಿ ಮರ್ರೆ ಕೆನಡಾದ ವಸೆಕ್ ಪಾಸ್ಪಿಸಿಲ್ ವಿರುದ್ಧ 6--4, 7-5, 6-4 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರು.

ವಾವ್ರಿಂಕಾಗೆ ಆಘಾತ: ಈ ವರ್ಷದ ಪ್ರೆಂಚ್ ಓಪನ್ ಚಾಂಪಿಯನ್ ಸ್ಟಾನಿಸ್ಲಾಸ್ ವಾವ್ರಿಂಕಾ ಅವರು ವಿಂಬಲ್ಡನ್‍ನ ಕ್ವಾರ್ಟರ್ ಫೈನಲ್ ನಲ್ಲಿ ಸೋಲಿನ ಆಘಾತ ಅನುಭವಿಸಿದರು. ಸುಮಾರು ಮೂರೂವರೆ ಗಂಟೆ ಕಾಲ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ  ಅವರು, 4--6, 6-4, 6-3, 4-6, 9-1 ಸೆಟ್ ಗಳ ಅಂತರದಲ್ಲಿ ಸೋತರು. ಸುದೀರ್ಘವಾಗಿ ನಡೆದ 5ನೇ ಸೆಟ್ ರೋಚಕವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.