ರಣಜಿ: ಕೆಎಲ್ ರಾಹುಲ್ ತ್ರಿಶತಕ

ಬೆಂಗಳೂರು: ಉತ್ತರಪ್ರದೇಶದ ವಿರುದ್ಧ ರಣಜಿ ಪಂದ್ಯದಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ತ್ರಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ತ್ರಿಶತಕ ಸಿಡಿಸುವ ಮೂಲಕ ಮುನ್ನೂರು ರನ್ ಗಡಿ ದಾಟಿದ ಪ್ರಪ್ರಥಮ ಕನ್ನಡಿಗ ಎಂಬ ಕೀರ್ತಿಗೆ ರಾಹುಲ್ ಪಾತ್ರರಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉತ್ತರಪ್ರದೇಶದ ವಿರುದ್ಧದ ರಣಜಿ ಪಂದ್ಯದ ಎರಡನೇ ದಿನವಾದ ಇಂದು ರಾಹುಲ್ 422 ಎಸೆತಗಳಲ್ಲಿ 45 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 317 ರನ್ ಗಳಿಸಿದ್ದಾರೆ. ರಣಜಿಯಲ್ಲಿ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 678 ರನ್ ಗಳಿಸಿದೆ.
ಮೊದಲ ದಿನದ ಅಂತ್ಯಕ್ಕೆ ಕರ್ನಾಟಕ ತಂಡ 4 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. 150 ರನ್ ಗಳಿಸಿದ್ದ ರಾಹುಲ್ ಇಂದು 317 ರನ್ ಗೆ ಔಟಾಗಿದ್ದಾರೆ.
ಅತಿ ಹೆಚ್ಚು ರನ್ ಗಳಿಸಿರುವ ಕರ್ನಾಟಕದ ಆಟಗಾರರು
ಕೆಎಲ್ ರಾಹುಲ್ 317
ಬ್ಯಾರಿಂಗ್ಟನ್ ರೋಲ್ಯಾಂಡ್ 283
ವಿ ಅರುಣ್ ರಾಜ 267
ಸಿಎಂ ಗೌತಮ್ 264 ಅಜೇಯ
ಕೆ ಜೆಸ್ವಂತ್ 259 ಅಜೇಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


