ಕ್ರೀಡೆ

ಚೆನ್ನೈ ಓಪನ್‍ಗೆ ಯೂಕಿ ಅಲಭ್ಯ

ಮೊಣಕೈಗೆ ತಗುಲಿರುವ ಗಾಯವು ಇನ್ನೂ ಮಾಯದ ಹಿನ್ನೆಲೆಯಲ್ಲಿ ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಜನವರಿಯಲ್ಲಿ ನಡೆಯ ಲಿರುವ ಏರ್‍ಸೆಲ್ ಚೆನ್ನೈ ಓಪನ್...

ಚೆನ್ನೈ ಓಪನ್‍ಗೆ ಯೂಕಿ ಅಲಭ್ಯ
ಯೂಕಿ ಭಾಂಬ್ರಿ
Published On :

ನವದೆಹಲಿ: ಮೊಣಕೈಗೆ ತಗುಲಿರುವ ಗಾಯವು ಇನ್ನೂ ಮಾಯದ ಹಿನ್ನೆಲೆಯಲ್ಲಿ ಭಾರತದ ಯುವ ಟೆನಿಸಿಗ ಯೂಕಿ ಭಾಂಬ್ರಿ ಜನವರಿಯಲ್ಲಿ ನಡೆಯಲಿರುವ ಏರ್‍ಸೆಲ್ ಚೆನ್ನೈ ಓಪನ್ ಪಂದ್ಯಾವಳಿಯಿಂದ ಹಿಮ್ಮೆಟ್ಟಿದ್ದಾರೆ. ಈ ಋತುವಿನಲ್ಲಿ ಚಾಲೆಂಜರ್ಸ್ ಮಟ್ಟದ ಟೂರ್ನಿಗಳಲ್ಲಿ ಎರಡು ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದ ಯೂಕಿ, ಕನಿಷ್ಟ ಆರು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ದೆಹಲಿ ಮೂಲದ ಅವರ ವೈದ್ಯರು ಸೂಚಿಸಿರುವುದರಿಂದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಸೂಕ್ತ ಸಿದ್ಧತೆ ಪಡೆಯುವ ಅವಕಾಶದಿಂದ ವಂಚಿತ ವಾದಂತಾಗಿದೆ. 'ತರಬೇತಿ ಹಾಗೂ ದೈಹಿಕ ಕಸರತ್ತು ನಡೆಸುತ್ತಿದ್ದರೂ, ಚೆಂಡನ್ನು ಬಲವಾಗಿ ಹಿಟ್ ಮಾಡಲು ವಿಫಲವಾಗಿದ್ದೇನೆ. ಹಾಗಾಗಿ, ಚೆನ್ನೈ ಓಪನ್‍ನಿಂದ ಹೊರಬೀಳುತ್ತಿದ್ದೇನೆ'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.