ಕ್ರೀಡೆ

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಡಿವಿಲಿಯರ್ಸ್ ವಿದಾಯ?

ಸ್ಫೋಟಕ ಆಟಕ್ಕೆ ಹೆಸರು ವಾಸಿಯಾಗಿರುವ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸಾಧ್ಯತೆಗಳಿವೆ...

ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಡಿವಿಲಿಯರ್ಸ್ ವಿದಾಯ?
ಎಬಿ ಡಿವಿಲಿಯರ್ಸ್
Published On :

ಸ್ಫೋಟಕ ಆಟಕ್ಕೆ ಹೆಸರು ವಾಸಿಯಾಗಿರುವ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸುವ ಸಾಧ್ಯತೆಗಳಿವೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಲ್ಲಿನ ಒಳ ರಾಜಕೀಯ ಹಿನ್ನೆಲೆ ಬೇಸೆತ್ತಿರುವ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ ಸರಣಿ ನಂತರ ವಿದಾಯ ಘೋಷಿಸಲಿದ್ದಾರೆ ಎಂದು ಆಫ್ರಿಕಾದ ರ್ಯಾಪೋರ್ಟ್ ದಿನಪತ್ರಿಕೆ ವರದಿ ಮಾಡಿದೆ.

2015ರ ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಮಾತಿಗೆ ಕ್ರಿಕೆಟ್ ಬೋರ್ಡ್ ಮನ್ನಣೆ ನೀಡಿರಲಿಲ್ಲ. ಅಲ್ಲದೆ ವಿಶ್ವಕಪ್ ಸೋಲಿನ ಕಹಿ ನೆನಪು ಡಿವಿಲಿಯರ್ಸ್ ರನ್ನು ಕಾಡುತ್ತಿದ್ದು, ವಿದಾಯ ಘೋಷಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

31 ವರ್ಷದ ಡಿವಿಲಿಯರ್ಸ್ 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದರು. ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿದ್ದರು. ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಿ ನಂತರ ವಿದಾಯ ಘೋಷಿಸಲಿದ್ದಾರೆ.

100 ಟೆಸ್ಟ್ ಪಂದ್ಯಗಳನ್ನು ಆಡಿರುವ ಡಿವಿಲಿಯರ್ಸ್ 52.15ರ ಸರಾಸರಿಯಲ್ಲಿ 7770 ರನ್ ಗಳಿಸಿದ್ದಾರೆ. 21 ಶತಕ, 38 ಅರ್ಧಶತಕ ಅವರ ಖಾತೆಯಲ್ಲಿದೆ. ಅಜೇಯ 278 ರನ್ ಅವರ ಗರಿಷ್ಠ ಮೊತ್ತವಾಗಿದೆ.

ಏಕದಿನ ಪಂದ್ಯಗಳು
195 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಡಿವಿಲಿಯರ್ಸ್ 54.21ರ ಸರಾಸರಿಯಲ್ಲಿ 8403ರನ್ ಗಳನ್ನು ಗಳಿಸಿದ್ದಾರೆ. 23 ಶತಕ ಹಾಗೂ 47 ಅರ್ಧಶತಕ ದಾಖಲಿಸಿದ್ದಾರೆ. 162 ರನ್ ಅವರ ಗರಿಷ್ಠ ಮೊತ್ತವಾಗಿದೆ.

- ವಿಶ್ವನಾಥ್. ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.