ಕಾಮನ್‌ವೇಲ್ತ್ ಟಿಟಿ: ಭಾರತ ಚಾಂಪಿಯನ್
ಆಕರ್ಷಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಭಾರತ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್ ಟೂರ್ನಿಯ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನ ಪುರುಷರ ವಿಭಾಗದಲ್ಲಿ...

ನವದೆಹಲಿ: ಆಕರ್ಷಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಭಾರತ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್ ಟೂರ್ನಿಯ ಟೇಬಲ್ ಟೆನಿಸ್ ಚಾಂಪಿಯನ್‍ಶಿಪ್‍ನ ಪುರುಷರ ವಿಭಾಗದಲ್ಲಿ ಭಾರತ ಚಾಂಪಿಯನ್ ಆಗಿದೆ. ಮಹಿಳೆಯರ ತಂಡ ಬೆಳ್ಳಿ ಪದಕಕ್ಕೆ ತೃಪ್ತವಾಯಿತು. ಶನಿವಾರ ನಡೆದ ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 3-1ರಿಂದ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಸ್ವರ್ಣ ಪದಕ ಬಾಚಿಕೊಳ್ಳಲು ಯಶಸ್ವಿಯಾಯಿತು. ನಂತರ ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಸಿಂಗಾಪುರ ವಿರುದ್ಧ 1-3 ಅಂತರದಿಂದ ಪರಾಭವಗೊಂಡಿತು. ಈ ಫಲಿತಾಂಶ ದೊಂದಿಗೆ ಕಾಮನ್‍ವೆಲ್ತ್ ಚಾಂಪಿಯನ್ ಶಿಪ್‍ನಲ್ಲಿ ಭಾರತ ಸುದೀರ್ಘ 11 ವರ್ಷ ಗಳ ನಂತರ ಪದಕ ಪಡೆದುಕೊಂಡಿದೆ. ಭಾರತ ಪುರುಷರ ತಂಡ ಈವರೆಗೆ ನಡೆದಿರುವ 20 ಆವೃತ್ತಿಗಳ ಪೈಕಿ 2ನೇ ಬಾರಿ ಚಿನ್ನದ ಪದಕ ಸಾಧನೆ ಮಾಡಿದೆ. ಈ ಹಿಂದೆ ಮಲೇಷ್ಯಾದಲ್ಲಿ 2004ರಲ್ಲಿ ಶರತ್ ಕಮಲ್ ಅವರ ನೇತೃತ್ವದ ತಂಡ ಚಿನ್ನ ಬಾಚಿಕೊಂಡಿತ್ತು. ಈ ಪಂದ್ಯದಲ್ಲಿ ಭಾರತ ಪುರುಷರ ತಂಡ ಪ್ರಮುಖ ಆಟಗಾರ ಶರತ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿತ್ತು. ಹಾಗಾಗಿ ಸೌಮ್ಯಜಿತ್ ಘೋಶ್, ಹರ್ಮೀತ್ ದೇಸಾಯಿ, ಜಿ.ಸೇಥಿಯನ್ ತಂಡದಲ್ಲಿದ್ದರು. ಇನ್ನು ಭಾರತ ವನಿತೆಯರ ತಂಡ ನಾಲ್ಕನೇ ಬಾರಿಗೆ ಬೆಳ್ಳಿ ಪದಕ ಸಂಪಾದಿಸಿದೆ. ಈ ಹಿಂದೆ ಭಾರತ ವನಿತೆಯರ ತಂಡ 1975, 1983, ಮತ್ತು 1991ರ ಆವೃತ್ತಿಗಳಲ್ಲಿ ಬೆಳ್ಳಿ ಪದಕ ಗಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


