ಫೈನಲ್‍ಗೆ ಕರ್ನಾಟಕ, ಕೇರಳ
ನಗರದಲ್ಲಿ ನಡೆಯುತ್ತಿರುವ 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಆತಿಥೇಯ ಕರ್ನಾಟಕ ಮತ್ತು ಕೇರಳ ತಂಡಧಾವಿಸಿವೆ...

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ 29ನೇ ಅಖಿಲ ಭಾರತ ಪೋಸ್ಟಲ್ ಫುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಆತಿಥೇಯ ಕರ್ನಾಟಕ ಮತ್ತು ಕೇರಳ ತಂಡಧಾವಿಸಿವೆ.
ಗುರುವಾರ ಇಲ್ಲಿನ ಅಶೋಕನಗರದ ರಾಜ್ಯ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ `ಎ' ಗುಂಪಿನ ವಿಜೇತ ತಂಡ ಕೇರಳ, `ಸಿ' ಗುಂಪಿನ ವಿಜೇತ ತಂಡವಾದ ಒಡಿಶಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳಿಂದ ಜಯಶಾಲಿಯಾಯಿತು. ಕೇರಳ ತಂಡದ ಪರ ವಿ.ಎ. ಶಿನು ಪಂದ್ಯದ 25 ಹಾಗೂ 76ನೇ ನಿಮಿಷದಲ್ಲಿ ಎರಡು ಗೋಲು ದಾಖಲಿಸಿ ಜಯ ತಂದಿತ್ತರು.
ಬಳಿಕ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ `ಡಿ' ಗುಂಪಿನ ವಿಜೇತ ತಂಡವಾದ ಜಮ್ಮು ಹಾಗೂ ಕಾಶ್ಮೀರ ತಂಡವನ್ನು `ಬಿ' ಗುಂಪಿನ ವಿಜೇತ ತಂಡ ಕರ್ನಾಟಕ 4-0 ಗೋಲುಗಳಿಂದ ಮಣಿಸಿತು. ಅತ್ಯಂತ ಏಕಪಕ್ಷೀಯವಾಗಿದ್ದ ಪಂದ್ಯ- ದಲ್ಲಿ ಪಂದ್ಯದ ಮೊದಲು ಹಾಗೂ ದ್ವಿತೀಯಾರ್ಧದಲ್ಲಿ ಕರ್ನಾಟಕ ಎರಡು ಗೋಲುಗಳನ್ನು ಬಾರಿಸಿ, ಜಮ್ಮು ಹಾಗೂ ಕಾಶ್ಮೀರ ತಂಡವನ್ನು ಯಶಸ್ವಿಯಾಗಿ ಸೋಲಿಸಿತು. ಪಂದ್ಯದ 32 ಹಾಗೂ 41ನೇ ನಿಮಿಷಗಳಲ್ಲಿ ಅರುಣ್ ಪಾಂಡೆ ಎರಡು ಗೋಲು ಹೊಡೆದರೆ, ಸ್ಟೀವ್ ಹ್ಯಾನ್ಸನ್ 57 ಮತ್ತು 85ನೇ ನಿಮಿಷಗಳಲ್ಲಿ ಕೂಡಾ ಎರಡು ಗೋಲು ದಾಖಲಿಸಿದರು.
ಕರ್ನಾಟಕ ಆಟಗಾರರ ದಿಟ್ಟ ಆಟಕ್ಕೆ ಪ್ರತಿ ಹೇಳಲು ವಿಫಲವಾದ ಜಮ್ಮು ಮತ್ತು ಕಾಶ್ಮೀರ ಫೈನಲ್‍ನಿಂದ ವಂಚಿತವಾಯಿತು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕರ್ನಾಟಕ ಮತ್ತು ಕೇರಳ ಪ್ರಶಸ್ತಿಗಾಗಿ ಸೆಣಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


