ಕ್ರೀಡೆ

ಪ್ರಶಸ್ತಿ ಸುತ್ತಿಗೆ ಭಾರ್ಗವ್, ನಿತಿನ್ ದಾಪುಗಾಲು

ರಾಜ್ಯದ ಯುವ ಬ್ಯಾಡ್ಮಿಂಟನ್ ಪ್ರತಿಭೆಗಳಾದ ಭಾರ್ಗವ್ ಎಸ್ ಗೌಡ ಮತ್ತು ಎಚ್.ವಿ ನಿತಿನ್ ಎಎಸ್‍ಎ ರಾಜ್ಯ ರ್ಯಾಂಕಿಂಗ್ ಸಬ್ ಜೂನಿಯರ್ ಟೂರ್ನಿಯ 15 ವರ್ಷದೊಳಗಿನವರ ವಿಭಾಗದಲ್ಲಿ ಫೈನಲ್..

ಪ್ರಶಸ್ತಿ ಸುತ್ತಿಗೆ ಭಾರ್ಗವ್, ನಿತಿನ್ ದಾಪುಗಾಲು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದ ಯುವ ಬ್ಯಾಡ್ಮಿಂಟನ್ ಪ್ರತಿಭೆಗಳಾದ ಭಾರ್ಗವ್ ಎಸ್ ಗೌಡ ಮತ್ತು ಎಚ್.ವಿ ನಿತಿನ್ ಎಎಸ್‍ಎ ರಾಜ್ಯ ರ್ಯಾಂಕಿಂಗ್ ಸಬ್ ಜೂನಿಯರ್ ಟೂರ್ನಿಯ 15 ವರ್ಷದೊಳಗಿನವರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.

ಸೋಮವಾರ ನಡೆದ ಬಾಲಕರ ಸೆಮಿಫೈನಲ್ ಪಂದ್ಯದಲ್ಲಿ ಭಾರ್ಗವ್ ತಮ್ಮ ಪ್ರತಿಸ್ಪರ್ಧಿ ಅಭಿಮಾನ್ ವಿರುದ್ಧ 21-15, 21-13 ಗೇಮ್ ಗಳ ಅಂತರದಲ್ಲಿ ಮಣಿಸಿದರು. ಮತ್ತೊಂದು ಉಪಾಂತ್ಯ  ಪಂದ್ಯದಲ್ಲಿ ನಿತಿನ್ ತಮ್ಮ ಪ್ರತಿಸ್ಪರ್ಧಿ ಸನೀತ್ ಡಿ ದಯಾನಂದ್ ವಿರುದ್ಧ 21-19, 21-17 ಗೇಮ್ ಗಳ ಅಂತರದಲ್ಲಿ ಜಯಿಸಿದರು. ಇನ್ನು ಬಾಲಕರ ಡಬಲ್ಸ್ ನಲ್ಲಿ ಭಾರ್ಗವ್ ಮತ್ತು ನಿತಿನ್  ಜತೆಯಾಗಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಅಜಿಂಕ್ಯ ಜೋಷಿ ಮತ್ತು ಸಿ.ಎಸ್. ಸಾಕೇತ್ ಜೋಡಿಯನ್ನು ಎದುರಿಸಲಿದೆ. ಅಂತೆಯೇ 13 ವರ್ಷದೊಳಗಿನ ಬಾಲಕರ ಸೆಮಿಫೈನಲ್ ಪಂದ್ಯದಲ್ಲಿ  ಚಿರಂಜೀವಿ ರೆಡ್ಡಿ 21-19, 21-17 ಗೇಮ್ ಗಳಿಂದ ವಿ. ಸುಹಾಸ್ ವಿರುದ್ಧ ಜಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.