ಕ್ರೀಡೆ

ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅತಿ ವೇಗದ 8 ಸಾವಿರ ರನ್ ದಾಖಲೆ

ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಹೊಸದೊಂದು ದಾಖಲೆ ಬರೆದಿದ್ದಾರೆ. ಏಕದಿನ ಪಂದ್ಯದಲ್ಲಿ ಅತೀ ಕಡಿಮೆ ಪಂದ್ಯದಲ್ಲಿ ಎಂಟು ಸಾವಿರ ರನ್...

ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಅತಿ ವೇಗದ 8 ಸಾವಿರ ರನ್ ದಾಖಲೆ
ಎಬಿ ಡಿವಿಲಿಯರ್ಸ್
Published On :
ಡರ್ಬಾನ್: ದಕ್ಷಿಣ ಆಫ್ರಿಕಾದ ಸ್ಪೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಹೊಸದೊಂದು ದಾಖಲೆ ಬರೆದಿದ್ದಾರೆ. ಏಕದಿನ ಪಂದ್ಯದಲ್ಲಿ ಅತೀ ಕಡಿಮೆ ಪಂದ್ಯದಲ್ಲಿ ಎಂಟು ಸಾವಿರ ರನ್ ಪೂರೈಸುವ ಮೂಲಕ ಅಗ್ರಗಣ್ಯ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ. 
ಎಬಿ ಡೀವಿಲಿಯರ್ಸ್ ನಿನ್ನೆ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ವೇಳೆ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಡರ್ಬಾನ್'ನಲ್ಲಿ ನಡೆದ ಕಿವೀಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಡಿವಿಲಿಯರ್ಸ್ 64 ರನ್ ಪೇರಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ 8 ಸಾವಿರ ರನ್ ಮೈಲಿಗಲ್ಲು ಮುಟ್ಟಿದ್ದಾರೆ. 
ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 200 ಪಂದ್ಯಗಳಲ್ಲಿ 8 ಸಾವಿರ ರನ್ ಮೈಲಿಗಲ್ಲು ಮುಟ್ಟಿದ್ದು ಇದೂವರೆಗೆ ದಾಖಲೆಯಾಗಿ ಉಳಿದಿತ್ತು. ಇದೀಗ 182 ಪಂದ್ಯಗಳಲ್ಲಿ 8 ಸಾವಿರ ರನ್ ಪೂರೈಸುವ ಮೂಲಕ ವಿಶ್ವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 
ಇದೇ ಅಲ್ಲದೆ ವಿಶ್ವದ ಅತೀ ವೇಗದ ಅರ್ಧಶತಕ, ಶತಕ ಹಾಗೂ 150 ರನ್ನುಗಳ ದಾಖಲೆಗಳು ಎಬಿಡಿ ಹೆಸರಲ್ಲಿದೆ.
8 ಸಾವಿರ ರನ್ ಪೂರೈಸಿ ಆಟಗಾರರು:
1) ಎಬಿ ಡೀವಿಲಿಯರ್ಸ್: 182 ಪಂದ್ಯ
2) ಸೌರವ್ ಗಂಗೂಲಿ: 200 ಪಂದ್ಯ
3) ಸಚಿನ್ ತೆಂಡೂಲ್ಕರ್: 210 ಪಂದ್ಯ
4) ಬ್ರಿಯಾನ್ ಲಾರಾ: 211 ಪಂದ್ಯ
5) ಎಂಎಸ್ ಧೋನಿ: 214 ಪಂದ್ಯ
6) ಸಯೀದ್ ಅನ್ವರ್: 218 ಪಂದ್ಯ
7) ಡೆಸ್ಮಂಡ್ ಹೇನ್ಸ್: 219 ಪಂದ್ಯ
8) ರಿಕಿ ಪಾಂಟಿಂಗ್: 220 ಪಂದ್ಯ
9) ಕ್ರಿಸ್ ಗೇಲ್: 211 ಪಂದ್ಯ
10) ಮಾರ್ಕ್ ವಾ: 223 ಪಂದ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.