ಕ್ರೀಡೆ

ಪಾಟ್ನಾ, ಬಂಗಾಳ ಸಮಬಲ

ತೀವ್ರ ಹಣಾಹಣಿಯಿಂದ ಕೂಡಿದ್ದ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯ 20-20 ಅಂಕಗಳ ರೋಮಾಂಚಕ ...

ಪಾಟ್ನಾ, ಬಂಗಾಳ ಸಮಬಲ
ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯ
Published On :

ಪಟಣ: ತೀವ್ರ ಹಣಾಹಣಿಯಿಂದ ಕೂಡಿದ್ದ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಿನ ಪಂದ್ಯ 20-20 ಅಂಕಗಳ ರೋಮಾಂಚಕ ಡ್ರಾನಲ್ಲಿ ಅಂತ್ಯಗೊಂಡಿದೆ. ಹೀಗಾಗಿ, ಎರಡೂ ಪಂದ್ಯಗಳು ತಲಾ 2 ಅಂಕ ಗಳಿಸಿವೆ.
ಅಂಕಪಟ್ಟಿಯಲ್ಲಿ ಪಾಟ್ನಾ ತಂಡದ ಸ್ಥಾನ (4ನೇ) ಬದಲಾಗಿಲ್ಲ.ಆದರೆ, ಈವರೆಗೆ ಕೊನೆ ಸ್ಥಾನದಲ್ಲಿದ್ದ ಬಂಗಾಳ ಮಾತ್ರ ಒಂದು ಸ್ಥಾನದ ಏರಿಕೆ ಕಂಡಿದೆ.ಭಾನುವಾರದ ಪಂದ್ಯದಲ್ಲಿ, ಪಾಟ್ನಾ ಪರವಾಗಿ, ಸುನಿಲ್ 4 ಅಂಕಗಳಿಸಿದರೆ, ರವಿ ದಲಾಲ್ ಹಾಗೂ ಅಮಿತ್ ಹೂಡಾ ತಲಾ 3 ಅಂಕ ಪೇರಿಸಿದರು. ಅತ್ತ, ಬಂಗಾಳ ತಂಡದ ಪರವಾಗಿ ವಿನೀತ್ ಶರ್ಮಾ , ಜುಂಗ್  ಕುನ್ ಲೀ ತಲಾ 4 ಅಂಕಗಳಿಸಿದರೆ, ವೈಜಿನ್ ಮತ್ತು ಸಚಿನ್ ಖಂಬೆ ತಲಾ  2 ಅಂಕ ಪೇರಿಸಿದರು.

ಪಲ್ಟಿ ಹೊಡೆದ ಪಲ್ಟಾನ್ಸ್  : ಪಂದ್ಯದ ಆರಂಭದಿಂದ ಅಂತ್ಯದವರೆಗೂ ಅಲ್ರೌಂಡ್ ಪ್ರದರ್ಶನ  ನೀಡುತ್ತಾ, ಎದುರಾಳಿ ತಂಡದ ವಿರುದ್ಧ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಹಾಲಿ ಚಾಂಪಿಯನ್ ಜೈಪುರ ಪಿಂಕ್  ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ ನಲ್ಲಿ ಜಯ ಸಾಧಿಸಿದೆ.

ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್  ಕಂಡ 35-29 ಅಂಕಗಳ ಅಂತರದಲ್ಲಿ  ಪುಣೆ ಪಲ್ಟಾನ್ಸ್ ವಿರುದ್ಧ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ 2ನೇ ಬಾರಿ ಗೆಲುವಿನ ರುಚಿ ಕಂಡಿದೆ.

ಪಂದ್ಯದ ಮೊದಲಾರ್ಧದಲ್ಲಿ ರಕ್ಷಣಾತ್ಮಕ ವಿಭಾಗದ  ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಜೈಪುರ ಪಿಂಕ್ ಪ್ಯಾಂಖರ್ಸ್ ತಂಡ, ಪುಣೆ ಪಲ್ಟಾನ್ಸ್   ವಿರುದ್ಧ ಉತ್ತಮ ಮುನ್ನಡೆ ಸಾಧಿಸಿತ್ತು. ಪಂದ್ಯದ ಆರಂಭದಿಂದಲೇ ಆಲ್ರೌಂಡ್ ಪ್ರದರ್ಶನ ನೀಡಿದ ನಾಯಕ ಜಸ್ವೀರ್ ಸಿಂಗ್  ಹಾಗೂ ಮತ್ತೊಬ್ಬ ರೈಡರ್ ಸೋನು ನರ್ವಾಸ್ ತಂಡಕ್ಕೆ ಮೊದಲಾರ್ಧದಲ್ಲಿ  10 ಅಂಕಗಳನ್ನು ತಂದುಕೊಟ್ಟಿದ್ದರು. ಪಂದ್ಯದ ಎರಡನೇ ಅವಧಿಯ ಆರಂಭದಲ್ಲೂ ಜೈಪುರ ಪಿಂಕ್ ಪ್ಯಾಂಥರ್ಸ್  ತಂಡ  ತನ್ನ ನಿಯಂತ್ರಣವನ್ನು ಮುಂದುವರಿಸಿತು.  ನಿವಾಲೆ 9 ಅಂಕಗಳನ್ನು ಪಡೆದುಕೊಂಡರಾದರೂ ಪಂದ್ಯವನ್ನು ಗೆಲ್ಲುವಲ್ಲಿ ನೆರವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.