ಬಾರ್ಸಿಲೋನಾ ಪರ 400ನೇ ಗೋಲು ದಾಖಲಿಸಿದ ಮೆಸ್ಸಿ
ಫುಟ್ಬಾಲ್ ಕ್ರೀಡೆಯ ದಿಗ್ಗಜ ಆಟಗಾರ ಎಂದೇ ಬಿಂಬಿತವಾಗಿರುವ ಲಯೋನೆಲ್ ಮೆಸ್ಸಿ, ಬಾರ್ಸಿಲೋನಾ ತಂಡದ ಪರ 400ನೇ ಗೋಲು ದಾಖಲಿಸಿದ...

ಮ್ಯಾಡ್ರಿಡ್: ಪ್ರಸಕ್ತ ಫುಟ್ಬಾಲ್ ಕ್ರೀಡೆಯ ದಿಗ್ಗಜ ಆಟಗಾರ ಎಂದೇ ಬಿಂಬಿತವಾಗಿರುವ ಲಯೋನೆಲ್ ಮೆಸ್ಸಿ, ಬಾರ್ಸಿಲೋನಾ ತಂಡದ ಪರ 400ನೇ ಗೋಲು ದಾಖಲಿಸಿದ ಸಾಧನೆ ಮಾಡಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ 2-0 ಗೋಲುಗಳ ಅಂತರದಲ್ಲಿ ವ್ಯಾಲೆನ್ಸಿಯಾ ತಂಡವನ್ನು ಮಣಿಸಿತು. ಈ ಮೂಲಕ ಲೀಗಾ ಬಿಬಿವಿಎ ಫುಟ್ಬಾಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಕೊಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ರಿಯಲ್ ಮ್ಯಾಡ್ರಿಡ್‍ಗಿಂತ 5 ಅಂಕ ಪಡೆದು ತಮ್ಮ ಮುನ್ನಡೆ ಹೆಚ್ಚಿಸಿಕೊಂಡಿದೆ.
ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಬಾರ್ಸಿಲೋನಾಕ್ಕೆ ಮೊದಲ ನಿಮಿಷದಲ್ಲೇ ಲೂಯಿಸ್ ಸೂರೆಜ್ ತಂಡಕ್ಕೆ ಗೋಲು ತಂದು ಕೊಡುವ ಮೂಲಕ ಅತ್ಯುತ್ತಮ ಆರಂಭ ನೀಡಿದರು. ನಂತರದ ಹಂತದಲ್ಲಿ ವ್ಯಾಲೆನ್ಸಿಯಾ ತಂಡ ಸಾಕಷ್ಟು ಅವಕಾಶ ಪಡೆದುಕೊಂಡಿತಾದರೂ, ಅದನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಮೆಸ್ಸಿ ಗೋಲು ದಾಖಲಿಸಲು ಸಾಕಷ್ಟು ಪ್ರಯತ್ನ ನಡೆಸಿದರೂ ಎದುರಾಳಿ ತಂಡದ ಗೋಲ್ ಕೀಪರ್ ಡಿಗೊ ಆಲ್ವೆಸ್ ತಡೆಗೋಡೆಯಾಗುತ್ತಿದ್ದರು. ಪಂದ್ಯದ ಕೊನೆಯ ಘಟ್ಟದಲ್ಲಿ (90+4ನೇ ನಿಮಿಷ) ಮೆಸ್ಸಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.
ಮತ್ತೊಂದು ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ಸ್ಯಾಂಟಿಗೊದಲ್ಲಿ ನಡೆದ ಮಲಾಗ ವಿರುದ್ಧದ ಪಂದ್ಯದಲ್ಲಿ 3-1 ಗೋಲುಗಳಿಂದ ಗೆಲವು ದಾಖಲಿಸಿತು. ಈ ವೇಳೆ ಮನ್ನಡೆ ಆಟಗಾರ ಗ್ಯಾರೆತ್ ಬೇಲ್ ಗಾಯಗೊಂಡು ಮೈದಾನದಿಂದ ಹೊರ ನಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


