ನಾನು ಉಮೇಶ್ ಯಾದವ್ ನ ದೊಡ್ಡ ಅಭಿಮಾನಿ: ಸ್ಟೇಯ್ನ್
ಸನ್ ರೈಸರ್ಸ್ ತಂಡದ ವೇಗಿ ಡೇಲ್ ಸ್ಟೇಯ್ನ್ ಅವರು, ನಾನು ಉಮೇಶ್ ಯಾದವ್ ಅವರ ದೊಡ್ಡ ಅಭಿಮಾನಿ ಮತ್ತು ಮುಂದಿನ ವರ್ಷಗಳಲ್ಲಿ ಉಮೇಶ್

ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ ತಂಡದ ವೇಗಿ ಡೇಲ್ ಸ್ಟೇಯ್ನ್ ಅವರು, ನಾನು ಉಮೇಶ್ ಯಾದವ್ ಅವರ ದೊಡ್ಡ ಅಭಿಮಾನಿ ಮತ್ತು ಮುಂದಿನ ವರ್ಷಗಳಲ್ಲಿ ಉಮೇಶ್ ಇನ್ನು ಎತ್ತರಕ್ಕೆ ಏರಲಿದ್ದಾರೆ ಎಂದಿದ್ದಾರೆ.
೧೨ ಟೆಸ್ಟ್ ಪಂದ್ಯಗಳಲ್ಲಿ ಹಾಗು ೪೮ ಒಂದು ದಿನದ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಯಾದವ್ ಇತ್ತೀಚೆಗೆ ಮುಗಿದ ವಿಶ್ವ ಕಪ್ ಸರಣಿಯಲ್ಲಿ ೮ ಪಂದ್ಯಗಳಿಂದ ೧೮ ವಿಕೆಟ್ ಪಡೆದಿದ್ದರು.
"ನಾನು ಯಾದವ್ ಅವರ ಅತಿ ದೊಡ್ಡ ಅಭಿಮಾನಿ. ನನಗೆ ವೇಗದ ಬೌಲರ್ ಗಳೆಂದರೆ ಇಷ್ಟ. ನಾವಿಬ್ಬರೂ ಒಂದೇ ಎತ್ತರಕ್ಕಿದ್ದೇವೆ. ಅವರು ನನಗಿಂತ ಬಲಶಾಲಿ ಹಾಗೂ ಬಾಲನ್ನು ಸ್ವಿಂಗ್ ಮಾಡುತ್ತಾರೆ. ದಿನಕಳೆದಂತೆ ಉಮೇಶ್ ಇನ್ನು ಎತ್ತರಕ್ಕೆ ಏರಲಿದ್ದಾರೆ. ಆವರು ಉತ್ತಮ ಟೆಸ್ಟ್ ಬೌಲರ್ ಆಗಿಯೂ ಬೆಳೆಯಲಿದ್ದಾರೆ" ಎಂದು ಸ್ಟೇಯ್ನ್ ಪಿಟಿಐ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವವನ್ನು ಕೂಡ ಸ್ಟೇಯ್ನ್ ಹಾಡಿ ಹೊಗಳಿದ್ದಾರೆ. ಹಾಗೆಯೇ ಮತ್ತೊಬ್ಬ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಬಗ್ಗೆಯೂ ಹೊಗಳಿ, ಅವರು ಕೂಡ ಒಳ್ಳೆಯ ಬೌಲರ್ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


