ಕ್ರೀಡೆ

ಮಧ್ಯಪ್ರದೇಶದ ಅಲ್‌ರೌಂಡರ್ ರೋಹಿತ್ ತಲ್ವಾರ್ ವಿಧಿವಶ

ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಅಲ್‌ರೌಂಡರ್ ರೋಹಿತ್ ತಲ್ವಾರ್...

ಮಧ್ಯಪ್ರದೇಶದ ಅಲ್‌ರೌಂಡರ್ ರೋಹಿತ್ ತಲ್ವಾರ್ ವಿಧಿವಶ
ರ್ರೋಹಿತ್ ತಲ್ವಾರ್
Published On :

ಮಧ್ಯಪ್ರದೇಶ: ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಅಲ್‌ರೌಂಡರ್ ರೋಹಿತ್ ತಲ್ವಾರ್ (49) ಅವರು ಶನಿವಾರ ರಾತ್ರಿ ಕಾನ್ಪುರದಲ್ಲಿ ನಿಧನ ಹೊಂದಿದ್ದಾರೆ. 

ರೋಹಿತ್ ತಲ್ವಾರ್ ಪ್ರಸ್ತುತ ಉತ್ತರ ಪ್ರದೇಶ  ಕ್ರಿಕೆಟ್ ಅಸೋಸಿಯೇಷನ್‌ನ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.

1982 ರಿಂದ 1990ರ ಅಂಚಿನಲ್ಲಿ  26 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ತಲ್ವಾರ್  32.09ರ ಸರಾಸರಿಯಲ್ಲಿ 1316 ರನ್‌ಗಳನ್ನು ಗಳಿಸಿದ್ದಾರೆ. ಗರಿಷ್ಠ ಮೊತ್ತ 199 ರನ್.  ಬಲಗೈ ಸ್ಪಿನ್ನರ್ ಆಗಿದ್ದ ರೋಹಿತ್ ತಲ್ವಾರ್ 7 ವಿಕೆಟ್‌ಗಳನ್ನು ಗಳಿಸಿದ್ದಾರೆ.  ನಿವೃತ್ತಿ ಹೊಂದಿದ ನಂತರ ಉತ್ತರ ಪ್ರದೇಶದ ಜ್ಯೂನಿಯರ್ ಕೋಚ್ ಆಗಿ ಕಾರ್ಯನಿರ್ವಹಿಸಿದರು.

ತಲ್ವಾರ್‌ಗೆ ಗೌರವ: ರೋಹಿತ್ ತಲ್ವಾರ್‌ರ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಅಂಗವಾಗಿ ಇಂದಿನಿಂದ ಇಂಧೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಆಡುವ ಮೂಲಕ ಗೌರವ ಸಲ್ಲಿಸಿದರು.





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.