ವಿಶೇಷ

ಕೇರಳ: ಮಂಗಗಳ ಕಾಟದಿಂದ ಬೇಸತ್ತ ಪೊಲೀಸ್ ಠಾಣೆಗೆ ಹಾವುಗಳಿಂದ ರಕ್ಷಣೆ!

ಪೊಲೀಸರನ್ನು ಸಾಮಾನ್ಯವಾಗಿ ಸಮಾಜದ ಕಾವಲು ನಾಯಿಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಕೇರಳದ ಇಡುಕ್ಕಿ ವಲಯದ ಪೊಲೀಸ್ ಠಾಣೆಯೊಂದನ್ನು ಹಾವುಗಳು ರಕ್ಷಿಸುತ್ತಿವೆ.

ಕೇರಳ: ಮಂಗಗಳ ಕಾಟದಿಂದ ಬೇಸತ್ತ ಪೊಲೀಸ್ ಠಾಣೆಗೆ ಹಾವುಗಳಿಂದ ರಕ್ಷಣೆ!
ಪೊಲೀಸ್ ಠಾಣೆಯ ಚಿತ್ರ
Published On :

ಇಡುಕ್ಕಿ: ಪೊಲೀಸರನ್ನು ಸಾಮಾನ್ಯವಾಗಿ ಸಮಾಜದ ಕಾವಲು ನಾಯಿಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಕೇರಳದ ಇಡುಕ್ಕಿ ವಲಯದ ಪೊಲೀಸ್ ಠಾಣೆಯೊಂದನ್ನು ಹಾವುಗಳು ರಕ್ಷಿಸುತ್ತಿವೆ.

ಈ ಪ್ರದೇಶದಲ್ಲಿ ಹೆಚ್ಚಾಗಿರುವ ಮಂಗಗಳ ಕಾಟದಿಂದ ಶೀಲ್ದ್ ಹಾಕುತ್ತಿದ್ದ ಪೊಲೀಸರು, ಕೇರಳ- ತಮಿಳುನಾಡು ಗಡಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆ ಸುತ್ತ ರಬ್ಬರ್ ಹಾವುಗಳನ್ನು ಹಾಕಿದ್ದಾರೆ. ಮಂಗಗಳ ಉಂಟು ಮಾಡುತ್ತಿದ್ದ ತೊಂದರೆಯಿಂದ ರೋಸಿ ಹೋದ ಪೊಲೀಸರು ಅಂತಿಮವಾಗಿ ಅವುಗಳಿಂದ ತಪ್ಪಿಸಿಕೊಳ್ಳಲು ಹಾವಿನ ಉಪಾಯ ಮಾಡಿದ್ದಾರೆ. ಇಲ್ಲಿಯವರೆಗೂ ಇದು ಯಶಸ್ವಿಯಾಗಿದೆ.

ಚೀನಾ ನಿರ್ಮಿತ ರಬ್ಬರ್ ಹಾವುಗಳನ್ನು ಪೊಲೀಸ್ ಠಾಣೆ ಕಟ್ಟಡದ ಗ್ರೀಲ್ ಗಳು, ಮರದ ಹತ್ತಿರವಿರುವ ಬ್ರಾಂಚ್ ಗಳು ಮತ್ತಿತರ ಕಡೆಗಳಲ್ಲಿ ಇಡಲಾಗಿದೆ. ಈ ರಬ್ಬರ್ ಹಾವುಗಳನ್ನು ಇಟ್ಟ ನಂತರ ಪೊಲೀಸ್ ಠಾಣೆ ಬಳಿ ಯಾವುದೇ ಮಂಕಿಗಳು ಬರುತ್ತಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಪಿ.ಕೆ. ಲಾಲ್ ಬಾಯ್ ಹೇಳಿದ್ದಾರೆ.

ತಂಡೋಪವಾಗಿ ಮಂಗಗಳು ಬರುವ ಕಡೆಗಳಲ್ಲಿ ರಬ್ಬರ್ ಹಾವುಗಳನ್ನು ಇಟ್ಟರೆ ಅವುಗಳನ್ನು ನಿಯಂತ್ರಿಸಬಹುದು ಎಂದು ಸ್ಥಳೀಯರು ಹೇಳಿದ್ದರು. ಈ ಪ್ರಯೋಗವನ್ನು ಬಳಸಿದ ನಂತರ ಮಂಗಗಳ ಕಾಟ ತಪ್ಪಿದೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.