ಪೊಲೀಸ್ ಠಾಣೆ

ಪ್ರತಿ ಠಾಣೆಗಳಲ್ಲಿ 2ನೇ ಭಾನುವಾರ ಪರಿಶಿಷ್ಟರ ಸಭೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆದೇಶ
ಎಲ್ಲ ಪೊಲೀಸ್ ಘಟಕಗಳು ಈ ಸಭೆಯನ್ನು ಕಡ್ಡಾಯವಾಗಿ ನಡೆಸಿ, ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿಜಿ ಮತ್ತು ಐಜಿಪಿಗೆ ಪ್ರಿಯಾಂಕ್ ನಿರ್ದೇಶನ ನೀಡಿದರು.

ಜಮ್ಮು-ಕಾಶ್ಮೀರದ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ: ಕಮಾಂಡಿಂಗ್ ಆಫೀಸರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ FIR!
ಸೈನಿಕರಿಂದ ಹಲ್ಲೆಗೊಳಗಾದವರಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಭಗತ್ ಮತ್ತು ಅಥೋಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಅಮೃತ್ ಕಟೋಚ್ ಸೇರಿದ್ದಾರೆ.

ಶಿವಮೊಗ್ಗ: ಪೊಲೀಸ್ ಠಾಣೆ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ಶವ ಪತ್ತೆ!
ಜಕಾರಿಯಾ ಒಂದು ತಿಂಗಳಿನಿಂದ ರಜೆಯಲ್ಲಿದ್ದರು ಮತ್ತು ಎರಡು ದಿನಗಳ ಹಿಂದೆ ಕರ್ತವ್ಯಕ್ಕೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ಪೊಲೀಸ್ ಠಾಣೆ ಮೇಲೆ ದಾಳಿ: ಏಳು ಅಧಿಕಾರಿಗಳು, ಆರು ಉಗ್ರರ ಸಾವು!
ಹಲವಾರು ಸಶಸ್ತ್ರ ಗುಂಪುಗಳಿಗೆ ನೆಲೆಯಾಗಿರುವ ಪೊಲೀಸ್ ಠಾಣೆ ಮೇಲೆ ನಡೆದ ಇತ್ತೀಚಿನ ಹಿಂಸಾತ್ಮಕ ದಾಳಿಯಾಗಿದೆ. ಪಾಕಿಸ್ತಾನ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯೊಂದಿಗೆ ಹೋರಾಡುತ್ತಿರುವಂತೆಯೇ ಈ ದಾಳಿ ನಡೆದಿದೆ.

ಬೆಂಗಳೂರು: ಎಂ.ಕೆ ದೊಡ್ಡಿ ಲಾಕಪ್ ಡೆತ್ ಕೇಸ್; ನಾಲ್ವರು ಪೊಲೀಸರ ಅಮಾನತು
ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಆರೋಪಿ ರಮೇಶ್ ತನ್ನ ಪಂಚೆ ಬಳಸಿ ಠಾಣೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ.

ಬೆಂಗಳೂರು: ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಕಳ್ಳನ ಆತ್ಮಹತ್ಯೆ
ಮೃತ ವ್ಯಕ್ತಿಯನ್ನು ಮಂಡ್ಯದ ಮದ್ದೂರಿನ ದುಂಡನಹಳ್ಳಿ ಮೂಲದ ರಮೇಶ್ ಎಂದು ಗುರುತಿಸಲಾಗಿದೆ. ಶೌಚಾಲಯದಲ್ಲಿ ರಮೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

'ನನಗೆ 18 ವರ್ಷ ವಯಸ್ಸಾಗಿಲ್ಲ': ಬಲವಂತದ ಬಾಲ್ಯ ವಿವಾಹ; ಪೊಲೀಸರಿಗೆ ದೂರು ನೀಡಿ ಮದುವೆ ನಿಲ್ಲಿಸಿದ ಬಾಲಕಿ!
ಮದುವೆ ಮಾಡಲು ಆಗಸ್ಟ್ 17 ರಂದು ದಿನಾಂಕ ನಿಗದಿ ಮಾಡಿದ್ದಾರೆ. ನನಗೆ ಮದುವೆಯಾಗಲು ಈಗಲೇ ಇಷ್ಟವಿಲ್ಲ.

ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ, ಜನರ ಶೋಷಣೆಗೆ ರಾಜಕಾರಣಿಗಳೇ ಕಾರಣ: ಲೋಕಾಯುಕ್ತ ವಿಶೇಷ ನ್ಯಾಯಾಲಯ
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿರುವ ಸಾವಿತ್ರಿ ಬಾಯಿ ಜೆಕೆ ಅವರ ಮೇಲೆ ಲೋಕಾಯುಕ್ತ ಪೊಲೀಸರು 1.25 ಲಕ್ಷ ರೂ. ಲಂಚ ಪಡೆದ ಆರೋಪ ಹೊರಿಸಿದ್ದಾರೆ.
ಚಾಮರಾಜನಗರ: ಪೊಲೀಸ್ ಠಾಣೆಯಿಂದಲೇ ಬೈಕ್ ಕಳ್ಳತನ! ಇಬ್ಬರು ಖದೀಮರ ಬಂಧನ
ಸತ್ಯಮಂಗಲ ಹೆದ್ದಾರಿಯ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಖಾನ್ (28) ಮತ್ತು ಇಮ್ರಾನ್ (30) ಬಂಧಿತ ಆರೋಪಿಗಳಾಗಿದ್ದಾರೆ.

