ಇಡುಕ್ಕಿ

ಕೇರಳದಲ್ಲಿ ಮುಂಗಾರು ಅಬ್ಬರ: ರಾತ್ರಿಯಿಡೀ ಭಾರಿ ಮಳೆ; ರಸ್ತೆಗಳು ಜಲಾವೃತ, ಧರೆಗುರುಳಿದ ಮರಗಳು, ಒಂದು ಸಾವು; 5 ಜಿಲ್ಲೆಗಳಿಗೆ ರೆಡ್ ಅಲರ್ಟ್
ಕೇರಳದ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ ಶನಿವಾರ ಬೆಳಗ್ಗೆಯೂ ಮುಂದುವರಿದಿದ್ದು, ಅನೇಕ ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಮರಗಳು ಧರೆಗೆ ಉರುಳಿದ್ದು, ಮನೆಗಳಿಗೆ ಹಾನಿಯಾಗಿದೆ.

ಗುಜರಾತ್ ಜನರು ಅನಕ್ಷರಸ್ಥರು..; ಮೋದಿ, ಪಿಣರಾಯಿ ವಿಜಯನ್ ಜನರ ದಾರಿ ತಪ್ಪಿಸಿದ್ದಾರೆ: Mallikarjun Kharge
ಕೇರಳದಲ್ಲಿ ಚುನಾವಣೆ ನಿಮಿತ್ತ ಇಂದು ಇಡುಕ್ಕಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಗುಜರಾತ್ ಜನರನ್ನು "ಅನಕ್ಷರಸ್ಥ" ಎಂದು ಬಣ್ಣಿಸಿದರು.

Loksabha Election 2024: ಒಂದೇ ಒಂದು ಮತ ಹಾಕಿಸಲು ಕಾಡಿನಲ್ಲಿ ಚುನಾವಣಾ ತಂಡ 18 ಕಿ.ಮೀ ಟ್ರೆಕ್ಕಿಂಗ್!
ಮತದಾನ ಪ್ರತೀ ನಾಗರಿಕನ ಹಕ್ಕು.. ಅದನ್ನು ಸಾಧಿಸಲು ಚುನಾವಣಾ ಅಧಿಕಾರಿಗಳು ಒಂದೇ ಒಂದು ಮತ ಹಾಕಿಸಲು ಕಾಡಿನಲ್ಲಿ ಬರೊಬ್ಬರಿ 18 ಕಿಮೀ ನಡೆದಿದ್ದು ಆ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಕೇರಳ: ಬಿಜೆಪಿಗೆ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಕರ್ತವ್ಯ ಕಳೆದುಕೊಂಡ ಚರ್ಚ್ ಪಾದ್ರಿ!
ಬಿಜೆಪಿಗೆ ಸೇರ್ಪಡೆಯಾದ ಕ್ಯಾಥೋಲಿಕ್ ಪಾದ್ರಿಯೊಬ್ಬರನ್ನು ಕೆಲವೇ ಗಂಟೆಗಳಲ್ಲಿ ಚರ್ಚ್‌ನ ಪ್ರತಿನಿಧಿ (ವಿಕಾರ್) ಕರ್ತವ್ಯದಿಂದ ಬಿಡುಗಡೆ ಮಾಡಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ.

ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್: ಪೊಲೀಸ್ ಅಧಿಕಾರಿ ಅಮಾನತು
ಇಡುಕ್ಕಿಯಲ್ಲಿ ಸಂತನಪಾರ ಸಬ್ ಇನ್ಸ್ ಪೆಕ್ಟರ್ ದೇವಾಲಯದಲ್ಲಿ ನೃತ್ಯ ಮಾಡಿದ್ದ ವೀಡಿಯೋ ವೈರಲ್ ಆಗಿದ್ದು ಆತನನ್ನು ಅಮಾನತು ಮಾಡಲಾಗಿದೆ.

ಕೇರಳದ ಆದಿಮಾಲಿಯಲ್ಲಿ ಕಮರಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್: ಓರ್ವ ಸಾವು, 44 ಮಂದಿಗೆ ಗಾಯ
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಬಳಿ ಭಾನುವಾರ ನಸುಕಿನ ಜಾವ ಪ್ರವಾಸಿ ಬಸ್ ಕಮರಿಗೆ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಸಿಬ್ಬಂದಿ ಸೇರಿದಂತೆ 44 ಮಂದಿ ಗಾಯಗೊಂಡಿದ್ದಾರೆ. ಬಸ್ ಮಲಪ್ಪುರಂನ ತಿರೂರ್‌ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ (ITI) ವಿದ್ಯಾರ್ಥಿಗಳನ್ನು ವಿಹಾರಕ್ಕೆ ಕರೆದೊಯ್ದು ಹಿಂತಿರುಗುತ್ತಿತ್ತು.

ಕೇರಳ: ಮಂಗಗಳ ಕಾಟದಿಂದ ಬೇಸತ್ತ ಪೊಲೀಸ್ ಠಾಣೆಗೆ ಹಾವುಗಳಿಂದ ರಕ್ಷಣೆ!
ಪೊಲೀಸರನ್ನು ಸಾಮಾನ್ಯವಾಗಿ ಸಮಾಜದ ಕಾವಲು ನಾಯಿಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಕೇರಳದ ಇಡುಕ್ಕಿ ವಲಯದ ಪೊಲೀಸ್ ಠಾಣೆಯೊಂದನ್ನು ಹಾವುಗಳು ರಕ್ಷಿಸುತ್ತಿವೆ.

ಕೇರಳ ಮಳೆಗೆ ತತ್ತರ: ಅಣೆಕಟ್ಟಿನಿಂದ ನೀರು ಬಿಡಲು ಮುಂದು, ಜನರಲ್ಲಿ ಪ್ರವಾಹ ಆತಂಕ; ಇಡುಕ್ಕಿ, ಇಡಮಲಯರ್ ನಲ್ಲಿ ಅಲರ್ಟ್
2018 ರಲ್ಲಿ ತೀವ್ರ ಪ್ರವಾಹ-ಸಾವು-ನೋವು ಕಂಡಿದ್ದ ದೇವರನಾಡು ಕೇರಳ ಕಳೆದೊಂದು ವಾರದಿಂದ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದೆ.ಪ್ರವಾಹ-ಭೂಕುಸಿತಕ್ಕೆ ಇದುವರೆಗೆ 25 ಮಂದಿ ಮೃತಪಟ್ಟಿದ್ದಾರೆ.

ಕೇರಳ ಮಳೆಗೆ ತತ್ತರ: ಪ್ರವಾಹ, ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆ, ಮುನ್ನೆಚ್ಚರಿಕೆ ವಹಿಸುವಂತೆ ಸಿಎಂ ಪಿಣರಾಯಿ ವಿಜಯನ್ ಮನವಿ
ಆರು ಮಂದಿಯ ಒಂದೇ ಕುಟುಂಬದ ಮೂವರು ಮೃತಪಟ್ಟು ಇತರ 18 ಮಂದಿ ನಾಪತ್ತೆಯಾಗಿರುವ ಘಟನೆ ಕೇರಳದಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹದಿಂದ ಉಂಟಾಗಿದೆ. ದೇವರನಾಡು ಕೇರಳದಲ್ಲಿ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು ಕೊಟ್ಟಾಯಂ ಜಿಲ್ಲೆಯ ಪೂರ್ವ ಭಾಗಗಳಲ್ಲಿ ಮತ್ತು ಇಡುಕ್ಕಿ ಜಿಲ್ಲೆಯ ಪಶ್ಚಿಮ ಭಾಗಗಳಲ್ಲಿ ಸರಣಿ ಭೂಕುಸಿತ, ಗುಡ್ಡ ಕುಸಿತ ಉಂಟಾಗಿದೆ.

