ನಾಸಾದಿಂದ ಜಗತ್ತಿನ ಅತಿ ದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ಅಂತರಿಕ್ಷ ದೂರದರ್ಶಕ ಉಡಾವಣೆ
ವಿಶ್ವದ ಉಗಮ, ಭೂಮಿಯ ಹುಟ್ಟು, ನಾವು ಯಾರು, ಎಲ್ಲಿಂದ ಬಂದೆವು ಎಂಬಿತ್ಯಾದಿ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಮಾಡಲಿದೆ

ವಾಷಿಂಗ್ಟನ್: ಜಗತ್ತಿನ ಅತಿ ದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ಅಂತರಿಕ್ಷ ದೂರದರ್ಶಕವನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಉಡಾವಣೆ ಮಾಡಿದೆ. ವಿಶ್ವದ ಲಕ್ಷ ಕೋಟಿ ಕಿಲೋಮೀಟರುಗಳಷ್ಟು ದೂರದ ವಿದ್ಯಮಾನಗಳ ಮೇಲೆ ಕಣ್ಣಿಡಲು ಇದರಿಂದ ಬಲ ದೊರೆಯಲಿದೆ ಎಂದು ಪರಿಣತರು ತಿಳಿಸಿದ್ದಾರೆ.
ನಾಸಾದ ಈ ದೂರದರ್ಶಕದ ಹೆಸರು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್. ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನ ಸ್ಥಳದಿಂದ ಈ ದೂರದರ್ಶಕವನ್ನು ಹೊತ್ತ ರಾಕೆಟ್ ಅಂತರಿಕ್ಷಕ್ಕೆ ಪ್ರಯಾಣಿಸಿದೆ. 10 ಶತ ಕೋಟಿ ಡಾಲರ್ ಮೌಲ್ಯದ ಈ ದೂರದರ್ಶಕ ಭೂಮಿಯಿಂದ 16 ಲಕ್ಷ ಕಿ.ಮೀ ದೂರದಲ್ಲಿ ಸ್ಥಾಪಿತಗೊಳ್ಳಲಿದೆ.
ಆ ಕಕ್ಷೆಗೆ ತಲುಪಲು ರಾಕೆಟ್ ಗೆ 1 ತಿಂಗಳು ಹಿಡಿಯುತ್ತದೆ. ಅಲ್ಲದೆ ಈ ದೂರದರ್ಶಕ ಕಾರ್ಯಾರಂಭ ಮಾಡಲು 5 ತಿಂಗಳು ಬೇಕಾಗಲಿದೆ ಎಂದು ನಾಸಾ ತಿಳಿಸಿದೆ. ವಿಶ್ವದ ಉಗಮ, ಭೂಮಿಯ ಹುಟ್ಟು, ನಾವು ಯಾರು, ಎಲ್ಲಿಂದ ಬಂದೆವು ಎಂಬಿತ್ಯಾದಿ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಮಾಡಲಿದೆ ಎಂದು ನಾಸಾ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


