ವಾಟ್ಸ್ ಆಪ್ ನ ಹೊಸ ಸುದ್ದಿ ಏನು ಗೊತ್ತಾ?
ನಿರಂತರವಾಗಿ ಗ್ರಾಹಕ ಸ್ನೇಹಿ ಬದಲಾವಣೆಗೆ ತೆರೆದುಕೊಂಡು ಅಪ್ಡೇಟ್ ಆಗುವ ವಾಟ್ಸ್ ಆಪ್ ಈ ಬಾರಿ ಗ್ರಾಹಕರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಮತ್ತಷ್ಟು ವಿಫುಲ ಅವಕಾಶಗಳನ್ನು ಪರಿಚಯಿಸಿದೆ.

Published On :
ನವದೆಹಲಿ: ನಿರಂತರವಾಗಿ ಗ್ರಾಹಕ ಸ್ನೇಹಿ ಬದಲಾವಣೆಗೆ ತೆರೆದುಕೊಂಡು ಅಪ್ಡೇಟ್ ಆಗುವ ವಾಟ್ಸ್ ಆಪ್ ಈ ಬಾರಿ ಗ್ರಾಹಕರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಮತ್ತಷ್ಟು ವಿಫುಲ ಅವಕಾಶಗಳನ್ನು ಪರಿಚಯಿಸಿದೆ.
ಈಗಿರುವ ಎಮೋಜಿಗಳೊಂದಿಗೆ ಭಾವನೆಗಳನ್ನು ಮತ್ತಷ್ಟು ಸ್ಪಷ್ಟವಾಗಿ ವ್ಯಕ್ತಪಡಿಸುವುದಕ್ಕಾಗಿ ವಾಟ್ಸ್ ಆಪ್ ಡಿಸೈನರ್ ಗಳೇ ಮತ್ತಷ್ಟು ಸ್ಟಿಕರ್ ಗಳನ್ನು ರೂಪಿಸಿದ್ದಾರೆ ಎಂದು ವಾಟ್ಸ್ ಆಪ್ ಹೇಳಿದೆ. ಹೊಸ ಸ್ಟಿಕರ್ ಗಳ ಬಗ್ಗೆ ವಾಟ್ಸ್ ಆಪ್ ಬ್ಲಾಗ್ ನಲ್ಲಿ ಮಾಹಿತಿ ನೀಡಿದೆ.
ವಾಟ್ಸ್ ಆಪ್ ಇದಕ್ಕಾಗಿಯೆ ಒಂದಷ್ಟು ಎಪಿಐ ಹಾಗೂ ಇಂಟ್ರಫೇಸ್ ಗಳನ್ನು ಸೇರಿಸಿದ್ದು ಈ ಮೂಲಕ ಗ್ರಾಹಕರು ಸ್ಟಿಕರ್ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪ್ರಕಟಿಸಬಹುದಾಗಿದೆ, ನಿಮ್ಮ ಸ್ಟಿಕರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದಂತೆಯೇ ಆ ಗ್ರಾಹಕರು ಮುಂದಿನ ಬಾರಿಯಿಂದ ನೇರವಾಗಿ ವಾಟ್ಸ್ ಆಪ್ ಮೂಲಕವೇ ಆ ಸ್ಟಿಕರ್ ಗಳನ್ನು ಕಳಿಸಿಕೊಳ್ಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


