ಭೂಮಿಯ ಗಾತ್ರದ ಸುಡುವಂತಹ ಹೊಸ ಗ್ರಹ ಪತ್ತೆ ಹಚ್ಚಿದ ವಿಜ್ಞಾನಿಗಳು
ವಿಜ್ಞಾನಿಗಳು ಭೂಮಿಯ ಗಾತ್ರದ ಸುಡುವ ಲೋಹದಂತಹ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.

Published On :
ಲಂಡನ್: ವಿಜ್ಞಾನಿಗಳು ಭೂಮಿಯ ಗಾತ್ರದ ಸುಡುವ ಲೋಹದಂತಹ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.
ಈ ಗ್ರಹ ಭೂಮಿಯಿಂದ 26 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿ ಕುಬ್ಜ ನಕ್ಷತ್ರವೊಂದನ್ನು ಸುತ್ತುತ್ತಿದೆ. ಇದಕ್ಕೆ ಕೆ2-229ಬಿ ಎಂದು ಹೆಸರಿಡಲಾಗಿದೆ. ಇದು ಭೂಮಿಗಿಂತ ಗಾತ್ರದಲ್ಲಿ ಶೇ 20ರಷ್ಟು ದೊಡ್ಡದಾಗಿದೆ.
ಈ ಗ್ರಹದ ದ್ರವ್ಯರಾಶಿ ಭೂಮಿಗಿಂತ ಎರಡೂವರೆ ಪಟ್ಟು ಹೆಚ್ಚಾಗಿದೆ. ಅಲ್ಲದೆ ಹಗಲಿನಲ್ಲಿ ಈ ಗ್ರಹದ ತಾಪಮಾನ 2000 ಡಿಗ್ರಿ ಸೆಲ್ಶಿಯಸ್ ದಾಟುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಯುಕೆಯ ಯುನಿವರ್ಸಿಟಿ ಆಫ್ ವಾವ್ರಿಕ್ ಹಾಗೂ ಫ್ರಾನ್ಸ್ ನ ಎಐಎಕ್ಸ್ ಮರ್ಸಿಲ್ ಯುನಿವರ್ಸಿಟಿಯ ಸಂಶೋಧಕರ ತಂಡ ಕೆ2 ದೂರದರ್ಶಕ ಮತ್ತು ಡೋಪ್ಲರ್ ಸ್ಪೆಕ್ಟ್ರೋಸ್ಕೋಪಿ ತಂತ್ರಜ್ಞಾನ ಬಳಸಿ ಈ ಗ್ರಹವನ್ನು ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


