ಸೂಪರ್ ಸಾನಿಕ್ ಕ್ರೂಸ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಇಲ್ಲಿನ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಿಂದ ಇಂದು ಉಡಾಯಿಸಲಾದ ಸೂಪರ್ ಸಾನಿಕ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.

ಒಡಿಶಾ: ಇಲ್ಲಿನ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಿಂದ ಇಂದು ಉಡಾಯಿಸಲಾದ ಸೂಪರ್ ಸಾನಿಕ್ ಬ್ರಹ್ಮೊಸ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
ಇಂದು ಬೆಳಿಗ್ಗೆ 10-15 ರಸುಮಾರಿನಲ್ಲಿ ಉಡಾಯಿಸಲಾದ ಕ್ಷಿಪಣಿ ನಿಗದಿತ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯ ಮೂಲಗಳು ಹೇಳಿಕೆ ನೀಡಿವೆ.
ಇದೇ ವರ್ಷದ ಮೇ 21 ಹಾಗೂ 22 ರಂದು ಮೇಕ್ ಇನ್ ಇಂಡಿಯಾ ಅಭಿಯಾನದಡಿಯಲ್ಲಿ ಸ್ವದೇಶಿ ನಿರ್ಮಿತ ಎರಡು ಬ್ರಹ್ಮೊಸ್ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು. ಈಗ ಮೂರನೇ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದ್ದು, ಇಂಧನ ನಿರ್ವಹಣೆ ವ್ಯವಸ್ಥೆ ಮತ್ತಿತರ ಅಂಶಗಳನ್ನು ಈ ಕ್ಷಿಪಣಿ ಹೊಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಡಿಆರ್ ಡಿ ಒ ಹಾಗೂ ರಷ್ಯಾದ ಎನ್ ಪಿಓಎಂ ಜಂಟಿ ಸಹಭಾಗಿತ್ವದಲ್ಲಿ ಈ ಕ್ಷಿಪಣಿಯನ್ನು ಅಭಿವೃದ್ದಿಪಡಿಸಲಾಗಿದ್ದು, ಭಾರತೀಯ ಸೇನೆ, ಭಾರತೀಯ ನೌಕೆ ಹಾಗೂ ವಾಯುಪಡೆಯ ಕಾರ್ಯಾಚರಣೆಗಳಲ್ಲಿ ಇದನ್ನು ಬಳಸಬಹುದಾಗಿದೆ.
ಯುದ್ದದಂತಹ ಸಂದರ್ಭದಲ್ಲಿ ಬಹುದೊಡ್ಡ ಪಡೆಯಾಗಿ ಕ್ಷಿಪಣಿ ಕಾರ್ಯನಿರ್ವಹಿಸಲಿದೆ. ಭೂ, ನೌಕ, ವಾಯುದಾಳಿಯಂತಹ ಸಂದರ್ಭದಲ್ಲಿಯೂ ಬಹುಮುಖ್ಯವಾದ ಪಾತ್ರವನ್ನು ಈ ಕ್ಷಿಪಣಿ ವಹಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


