ಚಂದ್ರನ ಮೇಲ್ಮೈಯಾದ್ಯಂತ ನೀರು: ಚಂದ್ರಯಾನ-1 ರ ಕುರಿತು ನಾಸಾ ಅಧ್ಯಯನದಿಂದ ಬಹಿರಂಗ
ಚಂದ್ರನ ಮೇಲ್ಮೈಯಾದ್ಯಂತ ನೀರಿದ್ದು, ಅದು ಯಾವುದೆ ಪ್ರದೇಶಕ್ಕೋ ಅಥವಾ ನಿರ್ದಿಷ್ಟ ಕಾಲಕ್ಕೆ ಸೀಮಿತವಾದುದ್ದಲ್ಲ ಎಂದು ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ ಒ ಡಾಟಾ

Published On :
ಮುಂಬೈ: ಚಂದ್ರನ ಮೇಲ್ಮೈಯಾದ್ಯಂತ ನೀರಿದ್ದು, ಅದು ಯಾವುದೆ ಪ್ರದೇಶಕ್ಕೋ ಅಥವಾ ನಿರ್ದಿಷ್ಟ ಕಾಲಕ್ಕೆ ಸೀಮಿತವಾದುದ್ದಲ್ಲ ಎಂದು ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ ಒ ಡಾಟಾ ವಿಶ್ಲೇಷಣೆ ಮೂಲಕ ತಿಳಿದುಬಂದಿದೆ.
ಚಂದ್ರನ ಮೇಲ್ಮೈನಲ್ಲಿರುವ ನೀರಿನ ಅಂಶವನ್ನು ಸುಲಭವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲವಾದರೂ ಒಟ್ಟಾರೆ ಚಂದ್ರನ ಮೇಲ್ಮೈನಲ್ಲಿ ನೀರಿರುವ ಸೂಚನೆಗಳು ಸ್ಪಷ್ಟವಾಗಿದೆ ಎಂದು ನಾಸಾ ಹೇಳಿಕೆ ಬಿಡುಗಡೆ ಮಾಡಿದೆ. ಈ ಹಿಂದೆ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನೀರಿರುವ ಸೂಚನೆ ಲಭಿಸಿದೆ ಎಂದು ಹೇಳಲಾಗಿತ್ತು.
ಭೂಮಿಯ ಉಪಗ್ರಹ ಚಂದ್ರನ ಮೇಲ್ಮೈ ಅಧ್ಯಯನಕ್ಕಾಗಿ ಕಳಿಸಲಾಗಿದ್ದ ನಾಸಾದ ಎಲ್ಆರ್ ಒದಲ್ಲಿದ್ದ ಉಪಕರಣದಿಂದ ಈ ಅಂಶವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಚಂದ್ರಯಾನ-1 ಕ್ಕೆ ಬಳಸಿಕೊಳ್ಳಲಾಗಿದ್ದ ಚಂದ್ರನ ಖನಿಜ ಮಾಪಕದಿಂದ ಪಡೆಯಲಾಗಿದ್ದ ಡಾಟಾವನ್ನು ಟೆಂಪರೇಚರ್ ಮಾಡೆಲ್ ಗೆ ಅನ್ವಯಿಸಲಾಗಿದ್ದು, ಚಂದ್ರನಲ್ಲಿ ನೀರಿನ ಅಂಶಗಳಿರುವುದರ ಬಗ್ಗೆ ಈ ಹಿಂದಿನ ವಾದಗಳನ್ನು ಅಲ್ಲಗಳೆಯುವಂತಹ ಹೊಸ ಮಾಹಿತಿಯೊಂದು ಲಭ್ಯವಾಗಿದೆ.
ಈ ಹೊಸ ಸಂಶೋಧನೆ ಚಂದ್ರನಲ್ಲಿ ನೀರಿನ ಮೂಲವನ್ನು ಕಂಡುಕೊಳ್ಳಲು ಹಾಗೂ ಅದನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಸಹಕಾರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


