ವಿಶ್ವವನ್ನೇ ಬೆಚ್ಚಿ ಬೀಳಿಸಿದ ಸೈಬರ್ ದಾಳಿ ಹಿಂದೆ ಉತ್ತರ ಕೊರಿಯಾ ಕೈವಾಡ?
ವಿಶ್ವಾದ್ಯಂತದ ಸುಮಾರು 150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್ ಗಳ ಮೇಲೆ ದಾಳಿ ಮಾಡಿರುವ ವನ್ನಾ ಕ್ರೈ ರಾನ್ ಸಮ್ ವೇರ್ ದಾಳಿಯ ಹಿಂದೆ ಉತ್ತರ ಕೊರಿಯಾದ ಕೈವಾಡವಿದೆ ಎಂದು ಶಂಕಿತಸಲಾಗುತ್ತಿದೆ.

ನವದೆಹಲಿ: ವಿಶ್ವಾದ್ಯಂತದ ಸುಮಾರು 150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್ ಗಳ ಮೇಲೆ ದಾಳಿ ಮಾಡಿರುವ ವನ್ನಾ ಕ್ರೈ ರಾನ್ ಸಮ್ ವೇರ್ ದಾಳಿಯ ಹಿಂದೆ ಉತ್ತರ ಕೊರಿಯಾದ ಕೈವಾಡವಿದೆ ಎಂದು ಶಂಕಿತಸಲಾಗುತ್ತಿದೆ.
ಈ ಬಗ್ಗೆ ಖ್ಯಾತ ಗೂಗಲ್ ಸಂಸ್ಥೆ ಭದ್ರತಾ ಸಂಶೋಧಕರಾಗಿರುವ ಭಾರತೀಯ ನೀಲ್ ಮೆಹ್ತಾ ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಉತ್ತರ ಕೊರಿಯದ ಪರವಾಗಿ ಕೆಲಸ ಮಾಡುತ್ತಿರುವ ಕುಖ್ಯಾತ ಲಾಝರಸ್ ಸಮೂಹವು ಈ ರಾನ್‌ಸಮ್‌ವೇರ್ ದಾಳಿಯ ಹಿಂದಿರುವ ಸಾಧ್ಯತೆ ಇದೆ ಹೇಳಿದ್ದಾರೆ. ವನ್ನಾ ಕ್ರಿಪ್ಟ್ ನಲ್ಲಿ ಬಳಸಲಾಗಿರುವ ಕೋಡಿಂಗ್ ಮತ್ತು ಟೂಲ್ಸ್‌ಗಳನ್ನೇ ಬಳಸಿಕೊಂಡು ಈ ಹಿಂದೆಯೂ ಲಾಝರಸ್ ಹ್ಯಾಕಿಂಗ್ ಸಮೂಹ ಈ ರೀತಿಯ ಕುತಂತ್ರಾಂಶವನ್ನು ರೂಪಿಸಿತ್ತು. ಇದೀಗ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮನ್ನು ಹ್ಯಾಕ್ ಮಾಡುವುದಕ್ಕೆ ವನ್ನಾ ಕ್ರಿಪ್ಟ್ ಬಳಸಲಾಗಿದೆ ನೀಲ್ ಮೆಹ್ತಾ ಶಂಕೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಮೆಹ್ತಾ ಅವರು ವನ್ನಾ ಕ್ರಿಪ್ಟ್ ರಾನ್ ಸಮ್ ದಾಳಿಗೆ ರೂಪಿಸಲಾದ ಕುತಂತ್ರಾಂಶಕ್ಕೂ ಕುಖ್ಯಾತ ಲಾಝರಸ್ ಸಮೂಹದ ಈ ಹಿಂದೆ ದಾಳಿ ಮಾಡಿದ್ದ ಕುತಂತ್ರಾಂಶಕ್ಕೂ ಸಾಮ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೆ ಆ ಕೋಡ್ ಗಳನ್ನು ಟ್ವಿಟರ್‌ನಲ್ಲಿ ಕೂಡ ಪೋಸ್ಟ್ ಮಾಡಿದ್ದಾರೆ.
ಕೇವಲ ನೀಲ್ ಮೆಹ್ತಾ ಮಾತ್ರವಲ್ಲದೇ ಖ್ಯಾತ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಬಿಬಿಸಿ ಕೂಡ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ನೀಲ್ ಮೆಹ್ತಾ ಅವರ ಟ್ವೀಟ್ ಆಧಾರದ ಮೇಲೆ ಸುದ್ದಿ ಬಿತ್ತರಿಸಿದೆ.
ಭಾರತೀಯ ನೀಲ್ ಮೆಹ್ತಾ ಅವರು, ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದು, ಈ ಹಿಂದೆ ಐಬಿಎಂ ಇಂಟರ್ ನೆಟ್ ಸೆಕ್ಯುರಿಟಿ ಸಿಸ್ಟಮ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


