ಫ್ರೆಂಚ್ ಗಯಾನಾದಿಂದ ಸಂವಹನ ಉಪಗ್ರಹ ಜಿಸ್ಯಾಟ್-17 ಯಶಸ್ವಿ ಉಡಾವಣೆ: ಇಸ್ರೊ
ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-17 ನ್ನು ಫ್ರೆಂಚ್ ನ ಗಯಾನಾದ ಕೌರೌನ ಬಾಹ್ಯಾಕಾಶ ನಿಲ್ದಾಣದಿಂದ ಭಾರವಾದ ರಾಕೆಟ್ ಏರಿಯಾನ್ಸ್ಪೇಸ್ ಮೂಲಕ ಇಂದು ಬೆಳಗ್ಗೆ ಯಶಸ್ವಿ....

Published On :
ಬೆಂಗಳೂರು: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-17 ನ್ನು ಫ್ರೆಂಚ್ ನ ಗಯಾನಾದ ಕೌರೌನ ಬಾಹ್ಯಾಕಾಶ ನಿಲ್ದಾಣದಿಂದ ಭಾರವಾದ ರಾಕೆಟ್ ಏರಿಯಾನ್ಸ್ಪೇಸ್ ಮೂಲಕ ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾಯಿಸಲಾಯಿತು.
ವಿವಿಧ ಸಂವಹನ ಸೇವೆಗಳನ್ನು ಒದಗಿಸುವ ವಿಸ್ತರಿತ ಸಿ ಬ್ಯಾಂಡ್ ಮತ್ತು ಎಸ್ ಬ್ಯಾಂಡ್, ಸಹಜ ಸ್ಥಿತಿಯ ಸಿ ಬ್ಯಾಂಡ್ ಗಳಲ್ಲಿ ಪೇ ಲೋಡ್ ಗಳನ್ನು ಹೊತ್ತ ಸುಮಾರು 3,477 ಕಿಲೋ ತೂಕದ ಜಿಸ್ಯಾಟ್-17 ಉಪಗ್ರಹ ಬಾನೆತ್ತರಕ್ಕೆ ಚಿಮ್ಮಿತು.
ಹವಾಮಾನ ಮಾಹಿತಿ ರಿಲೇ ಮತ್ತು ಉಪಗ್ರಹ ಆಧಾರಿತ ಶೋಧ ಮತ್ತು ರಕ್ಷಣಾ ಸೇವೆಗಳಿಗೆ ಉಪಕರಣಗಳನ್ನು ಇದು ಹೊತ್ತೊಯ್ಯುತ್ತದೆ.
ಯುರೋಪ್ ನ ಉಡಾವಣಾ ವಾಹಕ ಏರಿಯಾನ್ಸ್ಪೇಸ್ ಫ್ಲೈಟ್ ವಿಎ238 ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯ ಫ್ರಾನ್ಸ್ ಪ್ರಾಂತ್ಯದ ಕೋರಿಯೊದಲ್ಲಿ ಏರಿಯೆನ್ ಲಾಂಚ್ ಸಂಕೀರ್ಣ ಸಂಖ್ಯೆ 3ರಿಂದ ಸಿಡಿದು ನಭಕ್ಕೆ ಚಿಮ್ಮಿತು. ಅಂತಾರಾಷ್ಟ್ರೀಯ ಕಾಲಮಾನ ಇಂದು ಮಧ್ಯರಾತ್ರಿ 2.29ಕ್ಕೆ ಆಕಾಶಕ್ಕೆ ಉಡಾವಣೆಯಾಗಬೇಕಿದ್ದ ಉಪಗ್ರಹ ಕೆಲ ನಿಮಿಷಗಳು ತಡವಾಗಿ ನೆಗೆಯಿತು.
ಜಿಸ್ಯಾಟ್ ಆಕಾಶಕ್ಕೆ ಚಿಮ್ಮಿ ಕಕ್ಷೆಗೆ ಸೇರಿದ ತಕ್ಷಣ ಸಹ ಪ್ರಯಾಣಿಕ ಉಪಗ್ರಹವಾದ ಹೆಲ್ಲಾಸ್ ಸ್ಯಾಟ್ 3-ಇಮ್ಮರ್ಸಾಟ್ ಎಸ್ ಇಎನ್ಎನ್ ಜೊತೆ ಸೇರಿಸಲಾಯಿತು ಎಂದು ಇಸ್ರೊ ಪ್ರಕಟಿಸಿದೆ.
ಜಿಯೋಸಿಂಕ್ರೋನಸ್ ಟ್ರಾನ್ಸ್ಫರ್ ಆರ್ಬಿಟ್(ಜಿಟಿಒ)ಗೆ ಉಡಾಯಿಸಿದ್ದ 17 ಟೆಲಿಕಮ್ಯುನಿಕೇಷನ್ ಸ್ಯಾಟಲೈಟ್ ಗಳ ಇಸ್ರೊದ ಕಾರ್ಯವೈಖರಿಯನ್ನು ಜಿಸ್ಯಾಟ್-17 ಬಲಗೊಳಿಸಲಿದೆ. ಈ ತಿಂಗಳು ಇಸ್ರೊ ಉಡಾಯಿಸಿದ ಮೂರನೇ ಉಪಗ್ರಹ ಇದಾಗಿದೆ. ಇದಕ್ಕೂ ಮುನ್ನ ಜಿಎಸ್ಎಲ್ ವಿ ಎಂಕೆ111 ಮತ್ತು ಪಿಎಸ್ಎಲ್ ವಿ ಸಿ-38 ಉಪಗ್ರಹಗಳನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾಯಿಸಲಾಗಿತ್ತು.
ಜಿಎಸ್ಎಲ್ ವಿ ಎಂಕೆ111 ಜಿಸ್ಯಾಟ್-19 ಉಪಗ್ರಹಗಳನ್ನು ಯಶಸ್ವಿಯಾಗಿ ಜೂನ್ 5 ರಂದು ಮತ್ತು ಪಿಎಸ್ಎಲ್ ವಿ-ಸಿ38 ಕಾರ್ಟೊಸ್ಯಾಟ್-2 ಸರಣಿ ಉಪಗ್ರಹವನ್ನು 30 ಸಹ ಪ್ರಯಾಣಿಕ ಉಪಗ್ರಹಗಳ ಜೊತೆಗೆ ಜೂನ್ 23ರಂದು ಉಡಾಯಿಸಲಾಗಿತ್ತು. ಭಾರವಾದ ಉಪಗ್ರಹಗಳನ್ನು ಹೊತ್ತೊಯ್ಯಲು ಏರಿಯಾನ್ -5 ರಾಕೆಟ್ ಗಳನ್ನು ಅವಲಂಬಿಸಿರುವ ಇಸ್ರೊ ಈ ಉದ್ದೇಶಕ್ಕಾಗಿ ಜಿಎಸ್ಎಲ್ ವಿ ಎಂಕೆ111 ನ್ನು ಅಭಿವೃದ್ಧಿಪಡಿಸಿದೆ.
ಉಪಗ್ರಹದ ಯಶಸ್ವಿ ಉಡಾವಣೆಯನ್ನು ದೃಢಪಡಿಸಿ ಟ್ವೀಟ್ ಮಾಡಿದ ಏರಿಯೆನ್ ಸ್ಪೇಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೆಫನ್ ಇಸ್ರೇಲ್, ಜಿಸ್ಯಾಟ್-17 ಯಶಸ್ವಿಯಾಗಿ ಏರಿಯೆನ್ 5 ಉಡಾವಣಾ ಉಪಗ್ರಹದಿಂದ ಬೇರ್ಪಟ್ಟಿದೆ ಎಂದು ಹೇಳಿದ್ದಾರೆ. ಪಠ್ಯ ಪುಸ್ತಕ ಮಿಷನ್ ಎಂದು ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ.ಕೆ.ಶಿವನ್ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
ಈಗಾಗಲೇ ಅವಧಿಯಾಗಿರುವ ಉಪಗ್ರಹಗಳ ಮುಂದುವರಿಕೆ ಸೇವೆಗೆ, ನಮ್ಮ ಟ್ರಾನ್ಸ್ಪಾಂಡರ್ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಮೊಬೈಲ್ ಉಪಗ್ರಹ ಸೇವೆಗಳಿಗೆ ಮತ್ತು ಅಂಟಾರ್ಟಿಕಾ ಪ್ರದೇಶಗಳಿಗೆ ನಮ್ಮ ಹಾರಿಜಾನ್ ವಿಸ್ತರಿಸಲು ಅಗತ್ಯವಾಗಿದೆ.
ಜಿಸ್ಯಾಟ್-17ನ ಸಹ ಪ್ರಯಾಣಿಕ ಉಪಗ್ರಹ ಹೆಲ್ಲಸ್ ಸ್ಟಾಟ್ 3 ಇಮ್ಮರ್ಸತ್ ಎ ಇಯಾನ್ ಎರಡು ಪೆಲೊಡ್ ಕಾಂಡೋಸಾಟ್ ಗಳನ್ನು ಒಳಗೊಂಡಿದ್ದು ಅದನ್ನು ಥೇಲ್ಸ್ ಅಲೀನಿಯಾ ಸ್ಪೇಸ್ ಫಾರ್ ಹೆಲ್ಲಸ್ ಸ್ಯಾಟ್ ಮತ್ತು ಇನ್ಮಾರ್ಸಾಟ್ ತಯಾರಿಸಿದೆ.
ಹೆಲ್ಲಸ್ ಸ್ಯಾಟ್ 3 ಘಟಕ ಪೂರ್ವಕ್ಕೆ 39ರ ಕಕ್ಷೆ ಸ್ಥಾನದಲ್ಲಿ ಯುರೋಪ್, ಮಧ್ಯ ಪೂರ್ವ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಸೇವೆಗಳನ್ನು ಒದಗಿಸಲಿದೆ.
ಜಾಗತಿಕ ಮೊಬೈಲ್ ಉಪಗ್ರಹ ಸಂವಹನ ಸೇವೆಗಳಲ್ಲಿ ಇಮ್ಮರ್ಸತ್ ಪ್ರಮುಖವಾಗಿದೆ. ವಿಎ238 ವಾಹಕದಲ್ಲಿ ಒಟ್ಟು ಪೆಲೊಡ್ ಗಳ ಗಾತ್ರ 10,177 ಕಿಲೋವಾಗಿದೆ.
ಇಸ್ರೊ ಉಡಾಯಿಸಿದ 21ನೇ ಉಪಗ್ರಹ ಜಿಸ್ಯಾಟ್ ಆಗಿದ್ದು ಕಕ್ಷೆಯಲ್ಲಿ ಇದರ ಜೀವಿತಾವಧಿ 15 ವರ್ಷಗಳಾಗಿವೆ.ಕಕ್ಷೆಗೆ ಸೇರಿಸಿದ ನಂತರ ಇಸ್ರೊದ ಕೇಂದ್ರ ನಿಯಂತ್ರಣ ವ್ಯವಸ್ಥೆಯಾದ ಹಾಸನದಿಂದ ಜಿಸ್ಯಾಟ್-17ನ ನಿಯಂತ್ರಣವಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


