ಫೇಸ್ ಬುಕ್ ನ ಚಹರೆ ಗುರುತಿಸುವಿಕೆಯಿಂದ ಖಾಸಗಿತನಕ್ಕೆ ಧಕ್ಕೆ ಆರೋಪ, ಪ್ರಕರಣ ದಾಖಲು
ಫೇಸ್ ಬುಕ್ ನಲ್ಲಿ ಟ್ಯಾಗಿಂಗ್ ವ್ಯವಸ್ಥೆ ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿರುವ ಪ್ರಕರಣವನ್ನು ವಜಾಗೊಳಿಸಲು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಧೀಶರು ನಿರಾಕರಿಸಿದ್ದಾರೆ.

ನ್ಯೂಯಾರ್ಕ್: ಫೇಸ್ ಬುಕ್ ನಲ್ಲಿ ಟ್ಯಾಗಿಂಗ್ ವ್ಯವಸ್ಥೆ ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿರುವ ಪ್ರಕರಣವನ್ನು ವಜಾಗೊಳಿಸಲು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಧೀಶರು ನಿರಾಕರಿಸಿದ್ದಾರೆ.
ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನ ಟ್ಯಾಗಿಂಗ್ ವ್ಯವಸ್ಥೆ ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಆರೋಪಿಸಿದ್ದ ಮೊಕದ್ದಮೆಯನ್ನು ವಜಾಗೊಳಿಸಬೇಕು ಎಂದು ಫೇಸ್ ಬುಕ್ ಫೆಡರಲ್ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿತ್ತು. ಫೇಸ್ ಬುಕ್ ನ ಬಯೋಮೆಟ್ರಿಕ್ ಸಾಫ್ಟ್ ವೇರ್, ಬಳಕೆದಾರರ ಅನುಮತಿ ಇಲ್ಲದೇ ಫೇಸ್ ಪ್ರಿಂಟ್ ನ್ನು ನಿರ್ಮಿಸುತ್ತಿದ್ದು ಇದು ಇಲಿನಾಯ್ಸ್ ಬಯೋಮೆಟ್ರಿಕ್ ಮಾಹಿತಿ ಗೌಪ್ಯತೆ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.
ಟ್ಯಾಗ್ ಮಾಡಿದ ನಂತರ ಬಳಕೆದಾರರು ಹೊರಬರುವ ಹಾಗೂ ಗೌಪ್ಯತೆಯನ್ನು ಕಾಯ್ದುಕೊಳ್ಳುವ ಆಯ್ಕೆ ನೀಡಲಾಗಿದೆಯಾದರೂ ಫೆಡರಲ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ. ಫೇಸ್ ಬುಕ್ ನ ಚಹರೆ ಗುರುತಿಸುವಿಕೆಯ ತಂತ್ರಜ್ಞಾನ ಬಳಕೆದಾರರ ಅನುಮತಿ ಇಲ್ಲದೇ ಆತನ ಫೇಸ್ ಪ್ರಿಂಟ್ ನ್ನು ಸ್ಕ್ಯಾನ್ ಮಾಡುತ್ತದೆ ಆದ್ದರಿಂದ ಇದು ಖಾಸಗಿತಾಣದ ಉಲ್ಲಂಘನೆ ಎಂಬ ಆರೋಪವನ್ನು ಫೆಡರಲ್ ಕೋರ್ಟ್ ಪುರಸ್ಕರಿಸಿ ಪ್ರಕರಣದ ವಿಚಾರಣೆ ನಡೆಸಲು ನಿರಾಕರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


