ಐಆರ್ಎನ್ಎಸ್ಎಸ್-1ಎಫ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ
ಭಾರತೀಯ ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹ ವ್ಯವಸ್ಥೆಯ ಭಾಗವಾಗಿ 6ನೇ ಐಆರ್ಎನ್ಎಸ್ಎಸ್-1ಎಫ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ...

ಚೆನ್ನೈ: ಭಾರತೀಯ ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹ ವ್ಯವಸ್ಥೆಯ ಭಾಗವಾಗಿ 6ನೇ ಐಆರ್ಎನ್ಎಸ್ಎಸ್-1ಎಫ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.
ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ ಪೂರ್ಣಗೊಳಿಸಿದ್ದು, ಮಾರ್ಚ್ 10 ರಂದು ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4 ಗಂಟೆಗೆ ಉಪಗ್ರಹ ಉಡಾವಣೆಯಾಗಲಿದೆ. ಪಿಎಸ್ಎಲ್ವಿ-ಸಿ32 ರಾಕೆಟ್ ಉಪಗ್ರಹವನ್ನು ಅಂತರಿಕ್ಷಕ್ಕೆ ಹೊತ್ತೊಯ್ಯಲಿದೆ.
ಉಪಗ್ರಹ ಒಟ್ಟು 1425 ಕೆ.ಜಿ. ತೂಕವಿದ್ದು, ಈಗಾಗಲೇ ಉಡಾಯಿಸಲಾಗಿರುವ ಐಆರ್ಎನ್ಎಸ್ಎಸ್ 1ಎ, 1ಬಿ, 1ಸಿ, 1ಡಿ ಮತ್ತು 1ಇ ಉಪಗ್ರಹಗಳೊಂದಿಗೆ ಕಾರ್ಯ ನಿರ್ವಹಿಸಲಿದೆ.
2013ರ ಜುಲೈ 1 ರಂದು ಐಆರ್ಎನ್ಎಸ್ಎಸ್ 1ಎ. 2014ರ ಏಪ್ರಿಲ್ 4ರಂದು 1ಬಿ. 2014ರ ಅಕ್ಟೋಬರ್ 16 ರಂದು 1ಸಿ. 2015ರ ಮಾರ್ಚ್ 28ರಂದು 1ಡಿ ಹಾಗೂ 1ಇ ಉಪಗ್ರಹವನ್ನು ಜನವರಿ 20ರಂದು ಯಶಸ್ವಿಯಾಗಿ ಉಡಾಯಿಸಲಾಗಿದೆ. ಇನ್ನೂ ಒಂದು ಉಪಗ್ರಹ ಉಡಾವಣೆ ಬಾಕಿಯಿದ್ದು, ಎಲ್ಲಾ ಉಪಗ್ರಹಗಳು ಉಡಾವಣೆಯಾದ ನಂತರ ಪ್ರಾದೇಶಿಕ ಮಾರ್ಗಸೂಚಿ ವ್ಯವಸ್ಥೆಯನ್ನು ಕಾರ್ಯಾರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


