ಫ್ಲೂಟೋದ ಚಂದ್ರ ಚಾರೋನ್ನಲ್ಲಿ ಪ್ರಾಚೀನ ಸಾಗರ ಪತ್ತೆ ಹಚ್ಚಿದ ನಾಸಾ!
ಪ್ಲೂಟೋದ ದೊಡ್ಡ ಉಪಗ್ರಹವಾದ (ಚಂದ್ರ) ಚಾರೋನ್ನಲ್ಲಿ ಒಂದು ಕಾಲದಲ್ಲಿ ಬೃಹತ್ ಸಾಗರ ಇದ್ದಿರಬಹುದಾದ ಸಾಧ್ಯತೆ ಗೋಚರಿಸಿದೆ ಎಂದು ನಾಸಾ ವಿಜ್ಞಾನಿಗಳು...

ವಾಷಿಂಗ್ಟನ್: ಪ್ಲೂಟೋದ ದೊಡ್ಡ ಉಪಗ್ರಹವಾದ (ಚಂದ್ರ) ಚಾರೋನ್ನಲ್ಲಿ ಒಂದು ಕಾಲದಲ್ಲಿ ಬೃಹತ್ ಸಾಗರ ಇದ್ದಿರಬಹುದಾದ ಸಾಧ್ಯತೆ ಗೋಚರಿಸಿದೆ ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ನಾಸಾದ ನ್ಯೂ ಹಾರಿಜನ್ಸ್ ಬಾಹ್ಯಾಕಾಶ ನೌಕೆಯು 2015ರ ಜುಲೈ ತಿಂಗಳಲ್ಲಿ ಈ ಪ್ರದೇಶದ ಮೇಲೆ ಹಾದು ಹೋಗುವಾಗ ತೆಗೆದಿದ್ದ ಚಿತ್ರದ ವಿಶ್ಲೇಷಣೆ ಮಾಡಿರುವ ವಿಜ್ಞಾನಿಗಳು ಚಾರೋನ್ ನಲ್ಲಿ ಬೃಹತ್ ಸಾಗರ ಇದ್ದಿರಬಹುದು. ಪ್ರಸ್ತುತ ಈ ಸಾಗರ ಹೆಪ್ಪುಗಟ್ಟಿದ್ದು ಭಾರಿ ಪ್ರಮಾಣದಲ್ಲಿ ಹಿಗ್ಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಉಪಗ್ರಹದ ಹೊರ ಮೇಲ್ಮೈಯು ವಿಕಿರಣಗಳು ಮತ್ತು ಉಪಗ್ರದೊಳಗಿನ ಶಾಖದ ಪರಿಣಾಮವಾಗಿ ಬಿಸಿಯಾಗಿ ನೀರಾಗಿ ಪರಿವರ್ತನೆಗೊಂಡು ಮೇಲ್ಮೈಯಲ್ಲಿ ಬೃಹತ್ ಸಾಗರ ಸೃಷ್ಟಿಯಾಗಿರಬಹುದು. ಆದರೆ ಕ್ರಮೇಣ ಚಾರೋನ್ನ ಶಾಖ ಕಡಿಮೆಯಾಗುತ್ತಾ ಹೋದಂತೆ ಸಾಗರ ಹೆಪ್ಪುಗಟ್ಟಿರಬಹುದು ಮತ್ತು ಹಿಗ್ಗಿರಬಹುದು(ನೀರು ಹೆಪ್ಪುಗಟ್ಟಿದಾಗ ಹಿಗ್ಗುವುದು ಸಹಜ ಗುಣ). ಹೀಗಾಗಿ ಈ ಉಪಗ್ರಹ ಈಗ ಭಾರಿ ಪ್ರಮಾಣದಲ್ಲಿ ಹಿಗ್ಗಿದಂತೆ ಕಾಣುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


