ವಿಜ್ಞಾನ-ತಂತ್ರಜ್ಞಾನ

ಪ್ರಾನೆಟ್-ಎಕ್ಸ್ ಗ್ರಹದಿಂದ ಪೃಥ್ವಿಯ ಜೀವ ಸಂಕುಲದ ವಿನಾಶ..!

ಇತ್ತೀಚೆಗೆ ನಾಸಾದ ವಿಜ್ಞಾನಿಗಳು ಸಂಶೋಧಿಸಿರುವ ಪ್ರಾನೆಟ್-ಎಕ್ಸ್ ಎಂಬ ನಿಗೂಢ ಗ್ರಹ ಭೂಮಿಯ ಮೇಲಿನ ಜೀವ ಸಂಕುಲಕ್ಕೆ ವಿನಾಶಕಾರಿಯಾಗಿ ಪರಿಣಮಿಸಲಿದೆ ಎಂದು ವರದಿಯೊಂದು ಹೇಳಿದೆ...

ಪ್ರಾನೆಟ್-ಎಕ್ಸ್ ಗ್ರಹದಿಂದ ಪೃಥ್ವಿಯ ಜೀವ ಸಂಕುಲದ ವಿನಾಶ..!
ಸಂಗ್ರಹ ಚಿತ್ರ
Published On :

ವಾಷಿಂಗ್ಟನ್: ಇತ್ತೀಚೆಗೆ ನಾಸಾದ ವಿಜ್ಞಾನಿಗಳು ಸಂಶೋಧಿಸಿರುವ ಪ್ರಾನೆಟ್-ಎಕ್ಸ್ ಎಂಬ ನಿಗೂಢ ಗ್ರಹ ಭೂಮಿಯ ಮೇಲಿನ ಜೀವ ಸಂಕುಲಕ್ಕೆ ವಿನಾಶಕಾರಿಯಾಗಿ ಪರಿಣಮಿಸಲಿದೆ ಎಂದು  ವರದಿಯೊಂದು ಹೇಳಿದೆ.

ಸೌರಮಂಡಲದ ಅಂಚಿನಲ್ಲಿ ನಿಗೂಢ ಗ್ರಹ ಪ್ರಾನೆಟ್-ಎಕ್ಸ್ ಸುರಿಸುವ ಧೂಮಕೇತು ಮಳೆಯಿಂದಾಗಿ ಭೂಮಿಯಲ್ಲಿನ ಜೀವಿಗಳ ಸಾಮೂಹಿಕ ನಾಶವಾಗುತ್ತದೆ ಎಂದು ಅಮೆರಿಕದ ಖಗೋಳ  ಶಾಸಜ್ಞರ ವರದಿ ಹೇಳಿದೆ. ಡೇನಿಯೆಲ್ ವಿಟ್‍ಮೈರ್ ಎಂಬ ಸಂಶೋಧಕ ಈ ಕುರಿತು ಅಧ್ಯಯನ ನಡೆಸಿದ್ದು, ಉಪಗ್ರಹದ ಅಸ್ತಿತ್ವವನ್ನು ಖಚಿತಪಡಿಸಿದ್ದಾರೆ.

`ಪ್ಲಾನೆಟ್ ಎಕ್ಸ್' ಎಂಬ ಹೆಸರಿನ ನಿಗೂಢ ಗ್ರಹ ಭೂಮಿಗಿಂತ 10 ಪಟ್ಟು ದೊಡ್ಡದಿದ್ದು. ಪ್ರತಿ 27 ದಶಲಕ್ಷ ವರ್ಷಗಳಿಗೊಮ್ಮೆ ಇದು ಧೂಮಕೇತು ಮಳೆಗರೆಯುತ್ತದೆ. ಇದರಿಂದ ಭೂಮಿಯಲ್ಲಿ  ಸಾಮೂಹಿಕ ಜೀವನಾಶವಾಗುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಡೇನಿಯೆಲ್ ವಿಟ್‍ಮೈರ್ ಅವರ ಈ ವಿಚಾರಕ್ಕೆ ಇನ್ನೂ ಕೆಲ ಖಗೋಳ ಶಾಸ್ತ್ರಜ್ಞರು ಇತ್ತೀಚೆಗೆ ಬೆಂಬಲ ವ್ಯಕ್ತಪಡಿಸಿದ್ದು,  `ಪ್ಲಾನೆಟ್ ಎಕ್ಸ್' ಇರುವಿಕೆ ಕುರಿತು ಸಾಕ್ಷ್ಯಾಧಾರಗಳಿವೆ ಎಂದಿದ್ದಾರೆ.

ಇನ್ನು ಕ್ಯಾಲಿಫೋರ್ನಿಯಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಮೈಕ್ ಬ್ರೌನ್ ಅವರು, ಪ್ರಾನೆಟ್-9 ಸೌರಮಂಡಲದ ಅಧಿಕೃತ 9ನೇ ಗ್ರಹವಾಗಿದೆ ಎಂದು  ಅಭಿಪ್ರಾಯಪಟ್ಟಿದ್ದರು. ಇದಾದ ಬಳಿಕ ಸೌರಮಂಡಲದ ಮತ್ತೊಂದು ನಿಗೂಢ ಗ್ರಹ ಪ್ಲಾನೆಟ್-ಎಕ್ಸ್ ಅಸ್ತಿತ್ವದ ಕುರಿತು ಚರ್ಚೆಗಳು ನಡೆದಿದ್ದು, `ಪ್ಲಾನೆಟ್ ಎಕ್ಸ್' ಕರಾರುವಕ್ಕಾಗಿ ನಿಗದಿತ  ಅವಧಿಯಲ್ಲಿ ಹೇಗೆ ಧೂಮಕೇತು ಮಳೆ ಸುರಿಸುತ್ತದೆ ಎಂಬ ವಿವರ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅರ್ಕನಾಸ್ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರಜ್ಞ ಡೇನಿಯಲ್ ವೈಟ್ ಮಿರ್ ಅವರು ಅಭಿಪ್ರಾಯಪಟ್ಟಂತೆ ಪ್ಲಾನೆಟ್ ಎಕ್ಸ್ ಎಂಬ ನಿಗೂಢ ಗ್ರಹವೇ ಧೂಮಕೇತು ಮಳೆ ದುರಂತಕ್ಕೆ  ಕಾರಣವಾಗಿದ್ದು, ಕ್ಯೂಪರ್ ಬೆಲ್ಟ್ ಮಾರ್ಗವಾಗಿ ಧೂಮಕೇತು ಮಳೆಗರೆಯುತ್ತದೆ ಎಂದು ಹೇಳಿದ್ದಾರೆ. 1985ರಲ್ಲಿ ನಿಗೂಢ ಪ್ರಾನೆಟ್ ಎಕ್ಸ್ ಗ್ರಹದ ಕುರಿತು ಚರ್ಚೆಯಾಗಿತ್ತಾದರೂ,  ಸಂಶೋಧನೆಯ ಕೊರೆತೆಯಿಂದಾಗಿ ಗ್ರಹದ ಅಸ್ತಿತ್ವ ವಿಚಾರವನ್ನು ಕೈ ಬಿಡಲಾಗಿತ್ತು ಎಂದು ವೈಟ್ ಮಿರ್ ಹೇಳಿದ್ದಾರೆ.

ಒಟ್ಟಾರೆ ಸಾವಿರಾರು ವರ್ಷಗಳ ಹಿಂದೆ ಭೂಮಿಯ ಬದುಕಿದ್ದ ಡೈನೋಸಾರ್ ಗಳಂತಹ ದೈತ್ಯ ಪ್ರಾಣಿಗಳ ಸಾವಿಗೂ ಇದೇ ಪ್ಲಾನೆಟ್ ಎಕ್ಸ್ ಗ್ರಹದಿಂದ ಹೊರಬಂದ ಧೂಮಕೇತು ಮಳೆಯೇ  ಕಾರಣ ಎಂಬ ಶಂಕೆಯನ್ನು ವಿಜ್ಞಾನಿಗಳು ವ್ಯಕ್ತಪಡಿಸುತ್ತಿದ್ದು, ಭವಿಷ್ಯದಲ್ಲಿಯೂ ಇಂತಹ ದುರಂತಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.