ವಿಜ್ಞಾನ-ತಂತ್ರಜ್ಞಾನ

ಮಂಗಳನಲ್ಲಿ ನೀರಿರುವ ಬಗ್ಗೆ ಪುರಾವೆ ಪತ್ತೆ!

ಮಂಗಳನಲ್ಲಿ ಜೀವಸಂಕುಲದ ಉಳಿವಿನ ಬಗ್ಗೆ ಅಧ್ಯಯನ ನಡೆಸುತ್ತಿರುವ ನಾಸಾ ವಿಜ್ಞಾನಿಗಳು ಪ್ರಮುಖ ಪ್ರಗತಿ ಸಾಧಿಸಿದ್ದಾರೆ.

ಮಂಗಳನಲ್ಲಿ ನೀರಿರುವ ಬಗ್ಗೆ ಪುರಾವೆ ಪತ್ತೆ!
Published On :

ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಜೀವಸಂಕುಲದ ಉಳಿವಿನ ಬಗ್ಗೆ ಅಧ್ಯಯನ ನಡೆಸುತ್ತಿರುವ ನಾಸಾ ವಿಜ್ಞಾನಿಗಳು ಪ್ರಮುಖ ಪ್ರಗತಿ ಸಾಧಿಸಿದ್ದಾರೆ.
ಕೆಂಪು ಗ್ರಹದಲ್ಲಿ ನೀರಿನ ಹರಿವಿರುವ ಬಗ್ಗೆ  ನಾಸಾ ವಿಜ್ಞಾನಿಗಳಿಗೆ ಪುರಾವೆ ಸಿಕ್ಕಿದ್ದು ಜೀವಸಂಕುಲಕ್ಕೆ ಪೂರಕವಾದ ವಾತಾವರಣವಿರುವ ಸಾಧ್ಯತೆಗೆ ಮತ್ತಷ್ಟು ಪುಷ್ಟಿ ದೊರೆತಿದೆ. ಹಲವು ವರ್ಷಗಳಿಂದ ಮಂಗಳನಲ್ಲಿ ನೀರಿರುವ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಹೊಸ ಮಾಹಿತಿ ಪ್ರಕಾರ ಮಂಗಳನಲ್ಲಿ ನೀರು ಹೈಡ್ರೇಟೇಡ್ ಸಾಲ್ಟ್ ರೂಪದಲ್ಲಿದೆ.
ವಾತಾವರಣದಿಂದ ಮಂಗಳನಲ್ಲಿರುವ ನೀರು ಹೆಪ್ಪುಗಟ್ಟುತ್ತದೆ ಅಥವಾ ಆವಿಯಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ನೀರು ಹೈಡ್ರೇಟೆಡ್ ಸಾಲ್ಟ್ ರೂಪದಲ್ಲಿರುವುದರಿಂದ ಗ್ರಹದಲ್ಲಿ ಜೀವ ಸಂಕುಲದ ಉಳಿವಿಗೆ ಪೂರಕ ವಾತಾವರಣ ಇರುವ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಮಂಗಳನ ಮೇಲಿರುವ ರಚಹ್ನೆಗಳು ಉಪ್ಪು ನೀರಿನಿಂದಾಗಿದ್ದು, ಹೈಡ್ರೇಟೆಡ್ ಸಾಲ್ಟ್ ನ್ನು ಕಂಡುಹಿಡಿಯಲು ಅನುಕೂಲವಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಸ್ಪೆಕ್ಟ್ರಲ್ ಡಾಟಾ ಆಧಾರದಲ್ಲಿ ಹೊಸ ಸಂಶೋಹನೆಯನ್ನು ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.