ರೋಸ್‍ಗೋಲ್ಡ್ ಐಪೋನ್ 6ಎಸ್ ಗಾಗಿ ಮುಗಿಬಿದ್ದ ಗ್ರಾಹಕರು
ಆ್ಯಪಲ್ ಕಂಪನಿ ತನ್ನ ಹೊಸ ಐಪೋನ್ 6ಎಸ್ ಮತ್ತು 6ಎಸ್ ಪ್ಲಸ್‍ನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಐಪೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಹೊಂದಿದ್ದು ಹೊಸ ಬಣ್ಣ `ರೋಸ್‍ಗೋಲ್ಡ್'ನೊಂದಿಗೆ ಹೊರಬಂದಿದೆ.

ನ್ಯೂಯಾರ್ಕ್: ಆ್ಯಪಲ್ ಕಂಪನಿ ತನ್ನ ಹೊಸ ಐಪೋನ್ 6ಎಸ್ ಮತ್ತು 6ಎಸ್ ಪ್ಲಸ್‍ನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಐಪೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಹೊಂದಿದ್ದು ಹೊಸ ಬಣ್ಣ `ರೋಸ್‍ಗೋಲ್ಡ್'ನೊಂದಿಗೆ ಹೊರಬಂದಿದೆ.
ಇದೇ ಮೊದಲ ಬಾರಿಗೆ ಪಿಂಕ್ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಐಪೋನ್ ನೋಡಲು, ಖರೀದಿಸಲು ವಿಶ್ವಾದ್ಯಂತ ಆ್ಯಪಲ್ ಮಳಿಗೆಗಳ ಮುಂದೆ ಆಸಕ್ತರು ಜಮಾಯಿಸಿದ್ದರು. ಈ ಪೋನ್‍ಗೆ ಸುಧಾರಿತ ಕ್ಯಾಮೆರಾ ಅಳವಡಿಸಲಾಗಿದ್ದು 3ಡಿ ಟಚ್‍ಸ್ಕ್ರೀನ್ ಹೊಂದಿದೆ. ಬಳಕೆದಾರರು ಈ ಟಚ್‍ಸ್ಕ್ರೀನ್‍ನ್ನು ಒತ್ತುವ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ಫೀಚರ್ಸ್ ಕಾಣಲಿದೆ. 6ಎಸ್ ಮತ್ತು 6ಎಸ್ ಪ್ಲಸ್ ದರ ಕ್ರಮವಾಗಿ 199 ಮತ್ತು 299 ಡಾಲರ್‍ಗಳಾಗಿವೆ. ಈ ವೀಕೆಂಡ್‍ನಲ್ಲಿ ಮಾತ್ರವೇ 1.3 ಕೋಟಿ ಮೊಬೈಲ್‍ಗಳು ಮಾರಾಟವಾಗಲಿದೆ ಎಂಬ ಅಂದಾಜನ್ನು ಕಂಪನಿ ಹೊಂದಿದೆ.
ಸ್ಯಾಮ್ ಸಂಗ್ ಅಗ್ರಸ್ಥಾನ: ಟೆಕ್ ರಾಡಾರ್ ಪ್ರಕಾರ ಆ್ಯಪಲ್ ನ 6ಎಸ್ ಮತ್ತು 6 ಎಸ್ ಪ್ಲಸ್ ಸ್ಯಾಮ್ ಸಂಗ್ ನ ಗೆಲಾಕ್ಸಿ ಎಸ್ 6 ಅನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಟೆಕ್ ರಾಡಾರ್ ಪ್ರಕಾರ ಗೆಲಾಕ್ಸಿ ಎಸ್6ಎಡ್ಜ್ ಮೊದಲೆರಡು ಸ್ಥಾನಗಳಲ್ಲಿದೆ. ಐಪೋನ್ 6ಎಸ್ ಮೂರು ಮತ್ತು ಎಲ್‍ಜಿ ಜಿ4 ನಾಲ್ಕನೆ ಸ್ಥಾನದಲ್ಲಿದೆ.ಐ ಫೋನ್ 6ಎಸ್ ಪ್ಲಸ್(5), ಗೆಲಾಕ್ಸಿ ಎಸ್6ಎಡ್ಜ್ ಪ್ಲಸ್ (6), ಸೋನಿ ಎಕ್ಸ್‍ಪೀರಿಯಾಜಡ್ 3ಪ್ಲಸ್(7), ಎಚ್‍ಟಿಸಿ ಒನ್ ಎಂ9(8), ಒನ್‍ಪ್ಲಸ್2(9) ಮತ್ತು ನೆಕ್ಸಸ್6(10)ನೇ ಸ್ಥಾನದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


