ಮೆಸೇಜ್ ಡಿಲೀಟ್ ಮಾಡೀರಿ ಜೋಕೆ!
``ವಾಟ್ಸ್‍ಆ್ಯಪ್‍ನಲ್ಲಿ ಸಂದೇಶ ಬಂತು.. ಓದಿದೆ, ಡಿಲೀಟ್ ಮಾಡಿದೆ.'' ಇನ್ನು ನಿಮ್ಮಿಂದ ಇಂತಹ ಮಾತುಗಳು ಬರಲೇಬಾರದು. ಬಂದರೆ ಅದು ಅಪರಾಧ. ಸಂದೇಶಗಳನ್ನು ಸಂಗ್ರಹಿಸಿಟ್ಟರೆ ಉಳಿಯುತ್ತೀರಿ, ಇಲ್ಲವೇ ಕಂಬಿ ಎಣಿಸುವುದು ಖಚಿತ!..

ನವದೆಹಲಿ: ``ವಾಟ್ಸ್‍ಆ್ಯಪ್‍ನಲ್ಲಿ ಸಂದೇಶ ಬಂತು.. ಓದಿದೆ, ಡಿಲೀಟ್ ಮಾಡಿದೆ.'' ಇನ್ನು ನಿಮ್ಮಿಂದ ಇಂತಹ ಮಾತುಗಳು ಬರಲೇಬಾರದು. ಬಂದರೆ ಅದು ಅಪರಾಧ. ಸಂದೇಶಗಳನ್ನು ಸಂಗ್ರಹಿಸಿಟ್ಟರೆ ಉಳಿಯುತ್ತೀರಿ, ಇಲ್ಲವೇ ಕಂಬಿ ಎಣಿಸುವುದು ಖಚಿತ!
ಏಕೆಂದರೆ, ವಾಟ್ಸ್‍ಆ್ಯಪ್‍ಗೆ ಬರುವ ಸಂದೇಶಗಳನ್ನು ಡಿಲೀಟ್ ಮಾಡುವುದು ಸದ್ಯದಲ್ಲೇ ಕಾನೂನು ಬಾಹಿರವಾಗಲಿದೆ. ಸಂದೇಶ ಸ್ವೀಕರಿಸಿದ 90 ದಿನಗಳವರೆಗೆ ನೀವದನ್ನು ಡಿಲೀಟ್ ಮಾಡುವಂತಿಲ್ಲ. ಯಾವುದೇ ಕ್ಷಣದಲ್ಲೂ ಪೊಲೀಸರು ಬಂದು ಕೇಳಿದರೆ, ನೀವು ಆ ಸಂದೇಶವನ್ನು ತೋರಿಸಬೇಕು. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ(ಡೈಟಿ)ಯು ಇಂತಹುದೊಂದು ಪ್ರಸ್ತಾಪವನ್ನು ಮುಂದಿಟ್ಟಿದೆ. ತನ್ನ ವೆಬ್‍ಸೈಟ್‍ನಲ್ಲಿ ಹೊಸ ನ್ಯಾಷನಲ್ ಎನ್‍ಕ್ರಿಪ್ಶನ್ ಪಾಲಿಸಿ(ರಾಷ್ಟ್ರೀಯ ಗೂಢ ಲಿಪೀಕರಣ ನೀತಿ)ಯ ಕರಡನ್ನು ಅಪ್‍ಲೋಡ್ ಮಾಡಿರುವ ಇಲಾಖೆಯು, ಈ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೋರಿದೆ.
ಇಲಾಖೆಯ ಧ್ಯೇಯ, ಕಾರ್ಯತಂತ್ರ, ಉದ್ದೇಶಗಳು ಮತ್ತು ನಿಯಮಾವಳಿಗಳ ಬಗೆಗಿನ ಪ್ರತಿಕ್ರಿಯೆಯನ್ನು ಅಕ್ಟೋಬರ್ 16ರೊಳಗೆ akrishnan@deity.gov.in ಗೆ ಕಳುಹಿಸಬಹುದು ಎಂದೂ ಹೇಳಿದೆ. ಸರ್ಕಾರದ ಈ ನೀತಿ ಹೊಸ ವಿವಾದ ಸೃಷ್ಟಿಸುವ ಎಲ್ಲ ಸಾಧ್ಯತೆಯೂ ಇದ್ದು, ಈಗಾಗಲೇ ಇದಕ್ಕೆ ತಜ್ಞರಿಂದ ಟೀಕೆಗಳು ವ್ಯಕ್ತವಾಗಿವೆ.
90 ದಿನಗಳವರೆಗೆ
ಎಲ್ಲ ಮೊಬೈಲ್ ಬಳಕೆದಾರರು ಸಂದೇಶ ಬಂದ 90 ದಿನಗಳ ವರೆಗೆ ಅದನ್ನು ಡಿಲೀಟ್ ಮಾಡದೇ ಸಂಗ್ರಹಿಸಿಟ್ಟಿರಬೇಕು. ವಾಟ್ಸ್‍ಆ್ಯಪ್ ಹಾಗೂ ಇತರೆ ಇಮೇಲ್ ಸಂದೇಶಗಳನ್ನು ಯಾವಾಗ ಪೊಲೀಸರು ಕೇಳುತ್ತಾರೋ ಆಗ ನೀವು ತೋರಿಸಬೇಕು. ಎಲ್ಲ ರೀತಿಯ ಮಾಹಿತಿಗಳು, ಸಂವಹನವನ್ನು ರಕ್ಷಿಸಿಡುವುದೇ ಇದರ ಉದ್ದೇಶ ಎಂದು ಸರ್ಕಾರ ತಿಳಿಸಿದೆ ಎಂದು ಎನ್‍ಡಿಟಿವಿಯ ಗ್ಯಾಜೆಟ್ 360 ಡಿಗ್ರಿ ವರದಿ ಮಾಡಿದೆ.
ವಾಟ್ಸ್‍ಆ್ಯಪ್, ಇಮೇಲ್ ಸಂದೇಶ ಡಿಲೀಟ್ ಮಾಡುವಂತಿಲ್ಲ
-90 ದಿನಗಳವರೆಗೆ ಎಲ್ಲ ಸಂದೇಶ ಸಂಗ್ರಹಿಸಿಡಬೇಕು
-ಪೊಲೀಸರು ಕೇಳಿದಾಗ ತೋರಿಸಬೇಕು
- ನ್ಯಾಷನಲ್ ಎನ್‍ಕ್ರಿಪ್ಶನ್ ಪಾಲಿಸಿ ಕರಡು ಸಿದ್ಧ
- ಸಾರ್ವಜನಿಕರ ಪ್ರತಿಕ್ರಿಯೆಗೆ ಅ.16ರವರೆಗೆ ಅವಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


