ವಿಜ್ಞಾನ-ತಂತ್ರಜ್ಞಾನ

ಗಗನ ನೌಕೆ ಜನಕ ಜಾರ್ಜ್ ಮುಲ್ಲರ್ ನಿಧನ

ನಾಸಾ ಹಾಲಿ ಕೈಗೊಂಡಿರುವ ಮಾನವ ಸಹಿತ ಬಾಹ್ಯಾಕಾಶ ಯಾನದ ಯಶಸ್ಸಿಗೆ ಮುನ್ನುಡಿ ಬರೆದಿದ್ದ, ಜಾರ್ಜ್ ಮುಲ್ಲರ್...

ಗಗನ ನೌಕೆ ಜನಕ ಜಾರ್ಜ್ ಮುಲ್ಲರ್ ನಿಧನ
ಜಾರ್ಜ್ ಮುಲ್ಲರ್
Published On :
ನವದೆಹಲಿ: ನಾಸಾ ಹಾಲಿ ಕೈಗೊಂಡಿರುವ ಮಾನವ ಸಹಿತ ಬಾಹ್ಯಾಕಾಶ ಯಾನದ ಯಶಸ್ಸಿಗೆ ಮುನ್ನುಡಿ ಬರೆದಿದ್ದ, ಜಾರ್ಜ್ ಮುಲ್ಲರ್ (97) ನಿಧನರಾಗಿದ್ದಾರೆ. 
ಅನಾರೋಗ್ಯದ ಕಾರಣದಿಂದ ಅವರು ಅ.12ರಂದೇ ಕೊನೆಯುಸಿರೆಳೆದಿದ್ದರು. ಅವರನ್ನು ಬಾಹ್ಯಾಕಾಶ ನೌಕೆಗಳ ಜನಕ ಎಂದೇ ಕರೆಯಲಾಗುತ್ತಿದೆ. 1960ರ ದಶಕದಲ್ಲಿ ನಾಸಾದ ಮಾನವಚಾಲಿತ ಗಗನನೌಕಾ ಯೋಜನೆಗಳ ಮುಂದಾಳತ್ವ ವಹಿಸಿದ್ದರು. 
ಪ್ರತಿಷ್ಠಿತ ಸಂಸ್ಥೆಯಲ್ಲಿ ಅವರು ಕೇವಲ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಮ್ಯುಲ್ಲರ್ ಅವರು ಆಪೋಲೋ ಯೋಜನೆಯ ಮೇಲುಸ್ತುವಾರಿ ಹಾಗೂ ಸ್ಕೈಲ್ಯಾಬ್ ಸೇರಿದಂತೆ ಇನ್ನಿತರ 3 ಸ್ಪೇಸ್‍ಶಟಲ್ ಯೋಜನೆಗಳ ಯಶಸ್ಸಿನ ರೂವಾರಿಯಾಗಿದ್ದರು.
ತಮ್ಮ ಕೆಲವು ಐಡಿಯಾಗಳಿಂದ ವಿವಾದಕ್ಕೂ ಗುರಿಯಾಗಿದ್ದ ಮ್ಯುಲ್ಲರ್‍ಗೆ ನಾಸಾದ ಅತ್ಯುನ್ನತ ಪ್ರಶಸ್ತಿ ಹಾಗೂ ನ್ಯಾಷನಲ್ ಮೆಡಲ್ ಆಫ್ ಸೈನ್ಸಸ್ ಪ್ರಶಸ್ತಿ ಗಳಿಸಿದ್ದರು. ಹಿರಿಯ ಜೀವ ಪತ್ನಿ, ನಾಲ್ವರು ಮಕ್ಕಳು, 13 ಮೊಮ್ಮಕ್ಕಳು 13 ಮರಿಮಕ್ಕಳನ್ನು ಅಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.