ವಿಜ್ಞಾನ-ತಂತ್ರಜ್ಞಾನ

ಭಾರತದ ಸಂವಹನ ಉಪಗ್ರಹ ಜಿಸ್ಯಾಟ್-15 ಉಡಾವಣೆ ಯಶಸ್ವಿ

ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-15 ಅನ್ನು ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ...

ಭಾರತದ ಸಂವಹನ ಉಪಗ್ರಹ ಜಿಸ್ಯಾಟ್-15 ಉಡಾವಣೆ ಯಶಸ್ವಿ
ಭಾರತದ ಸಂವಹನ ಉಪಗ್ರಹ ಜಿಸ್ಯಾಟ್-15 ಉಡಾವಣೆ ಯಶಸ್ವಿ (ಫೋಟೋ ಕೃಪೆ: ಎಐಆರ್)
Published On :

ಬೆಂಗಳೂರು: ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-15 ಅನ್ನು ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿಯಲ್ಲಿರುವ ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಮುಂಜಾನೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಈ ಕುರಿತಂತೆ ನಗರದಲ್ಲಿ ಮಾಹಿತಿ ನೀಡಿದ ಇಸ್ರೋ, ಭಾರತದ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಲು ಜಿಸ್ಯಾಟ್-15 ಸಹಾಯಕಾರಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ 3.04ರ ಸುಮಾರಿಗೆ ಫ್ರೆಂಚ್ ಗಯಾನ ಪ್ರದೇಶದಲ್ಲಿರುವ ಕೌರು ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. 3,164 ಕಿಲೋ ತೂಕದ ಜಿ ಸ್ಯಾಟ್‌ 15 ಅತ್ಯಧಿಕ ಶಕ್ತಿಯ ಉಪಗ್ರಹವಾಗಿದ್ದು, ಇನ್‌ಸ್ಯಾಟ್‌ ಮತ್ತು ಜಿ ಸ್ಯಾಟ್‌ ವ್ಯವಸ್ಥೆಗೆ ಮರು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ.

ಜಿ-ಸ್ಯಾಟ್‌ 5, ಜಿ-ಸ್ಯಾಟ್‌ 8 ಮತ್ತು ಜಿ-ಸ್ಯಾಟ್‌ 10 ರ ನಂತರ ಗಗನ್‌ ಪೆಲೋಡ್‌ ಕೊಂಡೊಯ್ಯುತ್ತಿರುವ ಉಪಗ್ರಹ ಇದಾಗಿದ್ದು, ಈಗಾಗಲೇ ಜಿ-ಸ್ಯಾಟ್‌ 5 ಮತ್ತು ಜಿ-ಸ್ಯಾಟ್‌ 10 ಉಪಗ್ರಹಗಳು ಗಗನದಿಂದ ನೇವಿಗೇಷನ್‌ ಸೇವೆ ಒದಗಿಸುತ್ತಿವೆ ಎಂದು ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಇಸ್ರೋ ಬಾಹ್ಯಾಕಾಶ ನಿರ್ದೇಶಕ ಎಂ.ಅಣ್ಣಾದುರೈ ಅವರು, ಜಿಸ್ಯಾಟ್-15 ಉಪಗ್ರಹದ ನಿಯಂತ್ರಣವನ್ನು ಹಾಸನದ ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ತೆಗೆದುಕೊಂಡಿದೆ. ಪ್ರಸ್ತುತ ಉಪಗ್ರಹವು ಸಮರ್ಥವಾಗಿ ಕಾರ್ಯ ನಿರ್ವಹಿಸುವ ಹಂತದಲ್ಲಿದೆ. ಇನ್ನುಳಿದಂತೆ ಜಿಸ್ಯಾಟ್ 17 ಮತ್ತು ಜಿಸ್ಯಾಟ್-18 ಉಪಗ್ರಹಗಳು ಉಡಾವಣೆಗೆ ತಯಾರಾಗುತ್ತಿದ್ದು, ಮುಂದಿನ ವರ್ಷದಲ್ಲಿ ಈ ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.