ಟ್ವಿಟರ್ ನಲ್ಲಿ ಹೆಚ್ಚುತ್ತಿದೆ ಕಿರುಕುಳ : ವರದಿ
ನೀವು ಟ್ವಿಟರ್ ನಲ್ಲಿ ಕಿರುಕುಳಕ್ಕೊಳಗಾಗಿದ್ದೀರಾ? ನಿಮ್ಮಂತೆಯೇ ಅನೇಕರು ಕಿರುಕುಳಕ್ಕೊಳಗಾಗಿದ್ದಾರೆ ಎನ್ನುತ್ತಿದೆ ಸ್ತ್ರೀವಾದಿ ಕಾರ್ಯಕರ್ತ ಗುಂಪಿನ ವುಮೆನ್ ಆಕ್ಷನ್ ಮೀಡಿಯಾ ತಂಡ

ನ್ಯೂಯಾರ್ಕ್: ನೀವು ಟ್ವಿಟರ್ ನಲ್ಲಿ ಕಿರುಕುಳಕ್ಕೊಳಗಾಗಿದ್ದೀರಾ? ನಿಮ್ಮಂತೆಯೇ ಅನೇಕರು ಕಿರುಕುಳಕ್ಕೊಳಗಾಗಿದ್ದಾರೆ ಎನ್ನುತ್ತಿದೆ ಸ್ತ್ರೀವಾದಿ ಕಾರ್ಯಕರ್ತರ ಗುಂಪಿನ ವುಮೆನ್ ಆಕ್ಷನ್ ಮೀಡಿಯಾ ಎಂಬ ತಂಡದ ವರದಿ.
ವುಮೆನ್ ಆಕ್ಷನ್ ಮೀಡಿಯಾ(ಡಬ್ಲ್ಯೂ.ಎ.ಎಂ) ಅಧ್ಯಯನದ ಪ್ರಕಾರ ಟ್ವಿಟರ್ ನಲ್ಲಿ ಕಾಲು ಭಾಗದಷ್ಟು ಯುವಕರು ಹಾಗೂ ಯುವತಿಯರು ಕಿರುಕುಳಕ್ಕೊಳಗಾಗಿದ್ದಾರಂತೆ. ಕಾಲು ಭಾಗದಷ್ಟು ಯುವತಿಯರು ಲೈಂಗಿಕ ಕಿರುಕುಳ ಎದುರಿಸಿದ್ದಾರೆ ಎಂದು ಡಬ್ಲ್ಯೂ.ಎ.ಎಂ ತಿಳಿಸಿದೆ. ಕಿರುಕುಳಕ್ಕೊಳಗಾಗಿರುವವರ ಬಗ್ಗೆ ವರದಿ ಸಲ್ಲಿಸಲು ಡಬ್ಲ್ಯೂ.ಎ.ಎಂ ಟ್ವಿಟರ್ ನಿಂದ ಅನುಮತಿ ಪಡೆದಿದೆ.
ಡಬ್ಲ್ಯೂ.ಎ.ಎಂ, ಈ ವರೆಗೂ 811 ಕಿರುಕುಳ ವರದಿಗಳು ಬಗ್ಗೆ ನಿರ್ಧಿಷ್ಟವಾಗಿ ಗಮನ ಹರಿಸಿದ್ದು ಈ ಪೈಕಿ ಜನಾಂಗಿಯ ನಿಂದನೆ ಮಾಡುವುದು ಹಾಗೂ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳೇ ಹೆಚ್ಚಾಗುತ್ತಿದ್ದು, ಕಿರುಕುಳವನ್ನು ತಡೆಗಟ್ಟಲು ಟ್ವಿಟರ್ ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂದೂ ಡಬ್ಲ್ಯೂ.ಎ.ಎಂ ವರದಿಯಲ್ಲಿ ಹೇಳಿದೆ. ಬೆದರಿಕೆ ಹಾಕುವುದು, ವ್ಯಕ್ತಿಯೊಬ್ಬರ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವುದು, ಹಾಗೂ ಹಿಂಸೆಯನ್ನು ಉತ್ತೇಜಿಸುವುದನ್ನು ನಿರ್ಬಂಧಿಸಿದ್ದರೂ ಈ ಎಲ್ಲಾ ಅಂಶಗಳನ್ನೊಳಗೊಂಡ ಟ್ವೀಟ್ ಗಳಿಗೆ ಟ್ವಿಟರ್ ನಲ್ಲಿ ನಿಷೇಧ ವಿಧಿಸಿಲ್ಲ.
ಬೆದರಿಕೆ ಹಾಕುವ ಟ್ವೀಟ್ ಬಳಕೆದಾರರನ್ನು ಬ್ಯಾನ್ ಮಾಡಿದರೂ ಅವರು ಬೇರೆ ಹೆಸರಿನಲ್ಲಿ ಪ್ರತಿ ಬಾರಿಯೂ ಹೊಸ ಖಾತೆ ತೆರದು ಮತ್ತೆ ಕಿರುಕುಳ ನೀಡುವ ಕಾಯಕವನ್ನು ಮುಂದುವರೆಸುವುದು ಕಿರುಕುಳವನ್ನು ತಡೆಗಟ್ಟುವನಿಟ್ಟಿನಲ್ಲಿ ಟ್ವಿಟರ್ ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿದೆ. ಕಿರುಕುಳವನ್ನು ತಡೆಗಟ್ಟಬೇಕಾದರೆ, ತಮಗೆ ಬರುವ ಟ್ವೀಟ್ ಳಲ್ಲಿ ಬೇಕಾಗಿರುವ ಅಂಶಗಳನ್ನು ಮಾತ್ರ ಸ್ವೀಕರಿಸುವಂತೆ ಫಿಲ್ಟರ್ ಗಳನ್ನು ಆಯ್ಕೆ ಮಾಡುವ ಸೌಲಭ್ಯ ನೀಡಬೇಕೆಂದು ಡಬ್ಲ್ಯೂ.ಎ.ಎಂ ಸಲಹೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


