ವಿಜ್ಞಾನ-ತಂತ್ರಜ್ಞಾನ

ಮಂಗಳನ ಮೇಲೆ ಮನಮೋಹಕ ಸೂರ್ಯಾಸ್ತ ಸೆರೆ ಹಿಡಿದ ಕ್ಯೂರಿಯಾಸಿಟಿ ರೋವರ್

ಸ್ಮಾರ್ಟ್ ಫೋನುಗಳು ಮತ್ತು ಕಂಪ್ಯೂಟರ್ ಗಳಿಗೆ ಅದ್ಭುತ ಸ್ಕ್ರೀನ್ ಸೇವರ್ ಫೋಟೊ ಆಗಬಲ್ಲ ಕೆಂಪು ಗ್ರಹ ಮಂಗಳನ ಮೇಲಿಂದ ಕಾಣುವ ಅದ್ಭತ ಸೂರ್ಯಾಸ್ತವನ್ನು

ಮಂಗಳನ ಮೇಲೆ ಮನಮೋಹಕ ಸೂರ್ಯಾಸ್ತ ಸೆರೆ ಹಿಡಿದ ಕ್ಯೂರಿಯಾಸಿಟಿ ರೋವರ್
ಮಂಗಳನ ಮೇಲೆ ಸೂರ್ಯಾಸ್ತ
Published On :

ವಾಶಿಂಗ್ಟನ್: ಸ್ಮಾರ್ಟ್ ಫೋನುಗಳು ಮತ್ತು ಕಂಪ್ಯೂಟರ್ ಗಳಿಗೆ ಅದ್ಭುತ ಸ್ಕ್ರೀನ್ ಸೇವರ್ ಫೋಟೊ ಆಗಬಲ್ಲ ಕೆಂಪು ಗ್ರಹ ಮಂಗಳನ ಮೇಲಿಂದ ಕಾಣುವ ಅದ್ಭತ ಸೂರ್ಯಾಸ್ತವನ್ನು ನಾಸಾದ ಕ್ಯೂರಿಯಾಸಿಟಿ ರೋವರ್ ಸೆರೆ ಹಿಡಿದಿದೆ.

ನೀಲಿ ಆಕಾಶದಿಂದ ಸೂರ್ಯ ಮಾರ್ಟಿಯನ್ ದಿಗಂತದ ಕಡೆ ಇಳಿಯುತ್ತಿರುವುದನ್ನು ರೋವರ್ ಸೆರೆಹಿಡಿದಿದೆ.

ಇದೇ ವರ್ಷದ ಏಪ್ರಿಲ್ 15 ರ ಸೂರ್ಯಾಸ್ತವನ್ನು ಸೆರೆ ಹಿಡಿಯಲು ರೋವರ್ ತನ್ನ ಮಸ್ತ್ ಕ್ಯಾಮರಾವನ್ನು ಬಳಸಿದೆ. ಧೂಳಿನ ಸುಂಟರಗಾಳಿಯ ನಡುವೆ ಈ ಫೋಟೋವನ್ನು ಸೆರೆಹಿಡಿದಿದ್ದು ವಾತಾವರಣದಲ್ಲಿ ಧೂಳಿನ ಕಣಗಳನ್ನು ಸಹ ಕಾಣಬಹುದಾಗಿದೆ.

ಮಂಗಳದ ಗೇಲ್ಸ್ ಹಳ್ಳಕ್ಕೆ ಇಳಿದಾಗಿನಿಂದ ಈ ಗ್ರಹದ ಪ್ರಾಚೀನ ಹಾಗು ಆಧುನಿಕ ವಾತಾವರಣದ ಅಧ್ಯಯನ ನಡೆಸುತ್ತಿದೆ ಕ್ಯೂರಿಯಾಸಿಟಿ. ತಾನು ಇಳಿದ ನಂತರದ ೯೫೬ ನೇ ದಿನ ಕ್ಯೂರಿಯಾಸಿಟಿ ಈ ಫೋಟೊ ತೆಗೆದಿದೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.