ಡ್ಯಾನ್ಸ್ ಕಲಿಸಲಿದೆ ಗೂಗಲ್ ಗ್ಲಾಸ್
ಡ್ಯಾನ್ಸ್ ಕಲಿಸುವ ಗ್ಲಾಸ್ ಅನ್ನು ಗೂಗಲ್ ಸಿದ್ದಪಡಿಸಿದ್ದು, ಇನ್ನು ಮುಂದೆ ಈ ಗೂಗಲ್ ಗ್ಲಾಸ್ ನಿಮಗೆ ನೃತ್ಯ ಕಲಿಸಿ...

ಡ್ಯಾನ್ಸ್ ಕಲಿಸುವ ಗ್ಲಾಸ್ ಅನ್ನು ಗೂಗಲ್ ಸಿದ್ದಪಡಿಸಿದ್ದು, ಇನ್ನು ಮುಂದೆ ಈ ಗೂಗಲ್ ಗ್ಲಾಸ್ ನಿಮಗೆ ನೃತ್ಯ ಕಲಿಸಿ ಕೊಡಲಿದೆ.
ತಂತ್ರಜ್ಞಾನದಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿರುವ ಗೂಗಲ್, ಬಹುಬಗೆಯ ವಿನ್ಯಾಸದೊಂದಿಗೆ ಈ ಗ್ಲಾಸ್ ತಯಾರಿಸಿದೆ. ಇದು ಅತ್ಯಂತ ಉತ್ಕೃಷ್ಟವಾದ ತಾಂತ್ರಿಕತೆಯನ್ನು ಒಳಗೊಂಡಿದೆ.
ಡ್ಯಾನ್ಸ್ ಕಲಿಸುವ ಹೊಸ ಅಂಶವನ್ನು ಈ ಗ್ಲಾಸ್ ಒಳಗೊಳ್ಳಲಿದ್ದು, ಜನಪ್ರಿಯ ಇಂಟರಾಕ್ಟೀವ್ ವೀಡಿಯೊ ಗೇಮ್ ಡ್ಯಾನ್ಸ್ ಡ್ಯಾನ್ಸ್ ರೆವಲ್ಯೂಶನ್ ಗೆ ಹೆಜ್ಜೆ ಹಾಕುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
ಈ ಗೂಗಲ್ ಕನ್ನಡಕ ನಿರ್ದಿಷ್ಟವಾದ ಹಾಡಿನ ಸಂಯೋಜನೆಗೆ ಅನುಗುಣವಾಗಿ ನೃತ್ಯ ಚಲನೆಗಳನ್ನು ಹೊಂದಿದ್ದು ಹಾಡು ಮತ್ತು ನೃತ್ಯವನ್ನು ಗುರುತಿಸುವ ಸಾಮರ್ಥ್ಯವನ್ನೂ ಹೊಂದಿದೆಯಂತೆ.
ಅಲ್ಲದೇ ಯಾವುದೇ ಹಾಡಿಗೆ ಅನುಗುಣವಾದ ನೃತ್ಯವನ್ನು ಇದು ಸಂಯೋಜಿಸುತ್ತದೆ ಇದಕ್ಕೆ ಸಂಬಂಧಿಸಿದ ಪರವಾನಗಿ ಹಕ್ಕನ್ನು ಕಂಪನಿ ಪಡೆದುಕೊಂಡಿದ್ದು 2016 ರ ವೇಳೆಯಲ್ಲಿ ಮಾರುಕಟ್ಟೆಯಲ್ಲಿರಲಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


