ವಿಜ್ಞಾನ-ತಂತ್ರಜ್ಞಾನ

ನಾಸಾದಿಂದ ದ್ವಿತೀಯ ಭೂಮಿ ಪತ್ತೆ

ಸ್ಟೀಫನ್ ಹಾಕಿಂಗ್ ತಂಡ ಅನ್ಯಗ್ರಹದಲ್ಲಿ ಜೀವಿಗಳ ಪತ್ತೆಗೆ ಚಾಲನೆ ನೀಡಿದ್ದನ್ನೇ ಅಚ್ಚರಿಯಿಂದ ನೋಡುತ್ತಿದ್ದ ಭೂಗ್ರಹದ ಜೀವಿಗಳಿಗೆ ಇದೀಗ ಅದನ್ನು ಮೀರಿಸುವ...

ನಾಸಾದಿಂದ ದ್ವಿತೀಯ ಭೂಮಿ ಪತ್ತೆ
ಭೂಮಿ
Published On :

ಮಿಯಾಮಿ: ಸ್ಟೀಫನ್ ಹಾಕಿಂಗ್ ತಂಡ ಅನ್ಯಗ್ರಹದಲ್ಲಿ ಜೀವಿಗಳ ಪತ್ತೆಗೆ ಚಾಲನೆ ನೀಡಿದ್ದನ್ನೇ ಅಚ್ಚರಿಯಿಂದ ನೋಡುತ್ತಿದ್ದ ಭೂಗ್ರಹದ ಜೀವಿಗಳಿಗೆ ಇದೀಗ ಅದನ್ನು ಮೀರಿಸುವ ಅಚ್ಚರಿಯ ಸುದ್ದಿಯೊಂದು ಬಂದಿದೆ.

ಭೂಗ್ರಹದ ಅವಳಿಯೊಂದನ್ನು ಪತ್ತೆ ಮಾಡುವಲ್ಲಿ ನಾಸಾ ವಿಜ್ಞಾನಿಗಳು ಯಶಸ್ಸು ಕಂಡಿದ್ದಾರೆ. ಸೂರ್ಯನಿಂದ ಸಾವಿರಾರು ಲೈಟ್ ಇಯರ್ ದೂರದಲ್ಲಿ ಭೂಮಿಯದ್ದೇ ಮಾದರಿಯ ಗುಣಾಂಶಗಳಿರುವ ಗ್ರಹವೊಂದನ್ನು ನಾಸಾ ಪತ್ತೆ ಮಾಡಿದ್ದು, ಭೂಮಿಯಂತೇ ಇನ್ನೊಂದು ಗ್ರಹವಿರಬಹುದೆಂಬ ವಿಶ್ವಾಸಕ್ಕೆ ಇಂಬು ಸಿಕ್ಕಿದೆ.

20 ವರ್ಷಗಳ ಹಿಂದೆಯೇ ಎಕ್ಸೋ ಪ್ಲಾನೆಟ್ ಎಂದು ಕರೆಯಲ್ಪಟ್ಟಿದ್ದ ಭೂಮಿ ಮಾದರಿಯ ಅದೇ ಗಾತ್ರದ ಗ್ರಹದ ಸುಳಿವು ಸಿಕ್ಕಿದ್ದರೂ ಅದೇ ಕಕ್ಷಾ ಅಳತೆ ಇರುವ ಗ್ರಹ ಇದುವರೆಗೂ ಕಂಡಿರಲಿಲ್ಲ. ಈ ಗ್ರಹದ ಹೆಸರು ಕೆಪ್ಲರ್ 452ಬಿ. ಇದನ್ನು ನಾಸಾ ದ್ವಿತೀಯ ಭೂಮಿ ಅಥವಾ ಅರ್ಥ್ 2.0 ಎಂದು ಕರೆದಿದ್ದು. ಇನ್ಮುಂದೆ ಭೂಮಿಯ ನಕಲುಗಳು ಕಂಡುಬಂದರೂ ಇದನ್ನೇ ಮೊದಲ ದ್ವಿತೀಯ ಭೂಮಿ ಎನ್ನಲಾಗುವುದು ಎಂದು ನಾಸಾ ಸ್ಪಷ್ಟಪಡಿಸಿದೆ.

ಜೀವಗಳ ಅಸ್ತಿತ್ವ?
ದ್ವಿತೀಯ ಭೂಮಿಯಲ್ಲಿ ಜೀವಿ ಗಳ ಅಸ್ತಿತ್ವ ಇದೆಯೇ ಎಂಬ ಪ್ರಶ್ನೆ ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಅಲ್ಲಿ ಜೀವವಸ್ತುಗಳು ಉಳಿಯಲು ಸಾಧ್ಯ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಇಲ್ಲಿಂದ ಒಂದು ಸಸ್ಯವನ್ನು  ದ್ವಿತೀಯ ಭೂಮಿಯಲ್ಲಿ ನೆಟ್ಟರೆ  ಅದಕ್ಕೆ ಬದುಕಿ ಬೆಳೆಯುವ  ಸಾಮಥ್ರ್ಯವಿದೆ ಎಂಬುದು  ವಿಜ್ಞಾನಿಗಳ ವಿಶ್ವಾಸ.  

ದ್ವಿತೀಯ ಭೂಮಿಯ ಬಗ್ಗೆ
* ನೀರನ್ನು ದ್ರವರೂಪದಲ್ಲಿ ಇರಿಸಬಲ್ಲ ತಾಪಮಾನ
* ಭೂಮಿಗಿಂತ ಶೇ.60 ದೊಡ್ಡದಾಗಿದೆ. ಗಟ್ಟಿ ಮೇಲ್ಮೈ ಹಾಗೂ ಬಂಡೆಗಳಿಂದ ಕೂಡಿದೆ.  
* ಭೂಮಿಯಿಂದ 1400 ಜ್ಯೋತಿರ್ವರ್ಷ ದೂರ
* ತನ್ನ ಸೂರ್ಯನನ್ನು ಸುತ್ತಲು 385 ದಿನ ತೆಗೆದುಕೊಳ್ಳುತ್ತದೆ.(ಭೂಮಿಗಿಂತ 20 ದಿನ ಹೆಚ್ಚು)
* 600 ಕೋಟಿ ಹಳೆಯ ಕಕ್ಷಾ (ಭೂಮಿ ಮತ್ತು ಸೂರ್ಯನ ಕಕ್ಷಾಗಿಂತ150ಕೋಟಿ ವರ್ಷ ಹಳೆಯದು)
* ನಾಸಾದ ಕೆಪ್ಲರ್ ಎಂಬ ಟೆಲಿಸ್ಕೋಪ್ ಮೂಲಕ ಕಂಡು ಹಿಡಿದಿದ್ದಕ್ಕೆ ಕೆಪ್ಲರ್ 452ಬಿ ಎಂಬ ಹೆಸರು
* ಇನ್ನೂ 11 ಭೂಮಿ ರೀತಿಯ ಗ್ರಹಗಳ ಪತ್ತೆ ಹಚ್ಚಿದ್ದ ವಿಜ್ಞಾನಿಗಳು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.