ಬಳಕೆದಾರರ ಜನ್ಮದಿನದಂದು ಬಲೂನ್ ಗಳ ಮಳೆಗರೆಯಲಿರುವ ಟ್ವಿಟರ್!
ಸಾಮಾಜಿಕ ಜಾಲತಾಣ ಟ್ವಿಟರ್ ಈಗ ತನ್ನ ಬಳಕೆದಾರರ ಜನ್ಮದಿನಂದಂದು ವಿನೂತನವಾಗಿ ಶುಭಾಷಯ ಕೋರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.

ನ್ಯೂಯಾರ್ಕ್: ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಹಲವು ತಾಂತ್ರಿಕ ಬದಲಾವಣೆಗೆ ತೆರೆದುಕೊಂಡಿರುವ ಸಾಮಾಜಿಕ ಜಾಲತಾಣ ಟ್ವಿಟರ್, ಈಗ ತನ್ನ ಬಳಕೆದಾರರ ಜನ್ಮದಿನಂದಂದು ವಿನೂತನವಾಗಿ ಶುಭಾಷಯ ಕೋರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.
ಜನ್ಮದಿನಂದದು ಸಂದೇಶ ಕಲಿಸುವುದಷ್ಟೇ ಅಲ್ಲದೆ, ಬಳಕೆದಾರರ ಟ್ವಿಟರ್ ಹ್ಯಾಂಡಲ್ ನಲ್ಲಿ ಅನಿಮೇಟೆಡ್ ಬಲೂನ್ ಗಳನ್ನು ಅಳವಡಿಸಲಿದೆ. ಜು.6 ರಿಂದಲೇ ಈ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ ಎಂದು ಟ್ವಿಟರ್ ತಿಳಿಸಿದೆ.
ಟ್ವಿಟರ್ ನಲ್ಲಿ ಜನ್ಮದಿನಾಂಕವನ್ನು ನಮೂದಿಸಲು ಎಡಿಟ್ ಪ್ರೊಫೈಲ್ ಆಯ್ಕೆಯನ್ನು ಬಳಸಬೇಕಾಗುತ್ತದೆ. ಜನ್ಮ ದಿನಾಂಕವನ್ನು ನಮೂದಿಸುವುದು ಕಡ್ಡಾಯವಲ್ಲ, ಆಸಕ್ತಿ ಇದ್ದವರು ಮಾತ್ರ ನಮೂದಿಸಬಹುದಗಿದೆ ಎಂದು ಟ್ವಿಟರ್ ತಿಳಿಸಿದೆ. ಟ್ವಿಟರ್ ಇದನ್ನೂ ಸಹ ಮಾರುಕಟ್ಟೆ ಉದ್ದೇಶಕ್ಕಾಗಿ ಬಳಸಿಕೊಳ್ಳಲಿದ್ದು, ಜಾಹೀರಾತುಗಳು ಸೇರಿದಂತೆ ನಿಮಗೆ ಹೆಚ್ಚು ಸಂಬಂಧಿತ ವಿಷಯವನ್ನು ತೋರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


