ಭಾರತದ ಮಂಗಳಯಾನಕ್ಕೆ ಶತಕ ಸಂಭ್ರಮ
೨೦೧೫ ಹೊಸವರ್ಷದ ದಿನ ಭಾರತದ ಮಂಗಳ ಬಾಹ್ಯಾಕಾಶ ನೌಕೆ

ಚೆನ್ನೈ: ೨೦೧೫ ಹೊಸವರ್ಷದ ದಿನ ಭಾರತದ ಮಂಗಳ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಕಕ್ಷೆಯ ಸುತ್ತ ೧೦೦ ದಿನಗಳನ್ನು ಪೂರೈಸಿದೆ, ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟಬಂರ್ ೨೪ ೨೦೧೪ ರಂದು ಮಂಗಳನ ಕಕ್ಷೆಗೆ ಮಾರ್ಸ್ ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಳಿಸಿತ್ತು.
ಈ ಯಾನ ಕೆಂಪು ಗ್ರಹದ ಮೇಲ್ಮೈನ ಹಲವಾರು ಫೋಟೋಗಳನ್ನು ರವಾನಿಸಿದ್ದು, ವಿಜ್ಞಾನಿಗಳು ಅವುಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ೪೫೦ ಕೋಟಿ ವೆಚ್ಚದಲ್ಲಿ ಪಿ ಎಸ್ ಎಲ್ ವಿ ರಾಕೆಟ್ ಮೂಲಕ ಈ ಬಾಹ್ಯಾಕಾಶ ಯಾನವನ್ನು ಉಡಾಯಿಸಲಾಗಿತ್ತು.
ಈ ಊಡಾಯನದ ಮೂಲಕ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ಯಾನವನ್ನು ಕಳುಹಿಸಿರುವ ಭಾರತ ಏಷ್ಯಾದ ಮೊದಲ ರಾಷ್ಟ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


