ಉಡುಪಿ ಈಗ ಆ್ಯಪ್ ಅಭಿವೃದ್ಧಿ ತಾಣ
ಉಡುಪಿ ಹೋಟೆಲ್, ಶ್ರೀಕೃಷ್ಣ ದೇವಸ್ಥಾನ, ಕಡಲ ತೀರಕ್ಕಷ್ಟೆ ಅಲ್ಲ, ಈಗ ಐಎಸ್‍ಒ ಮತ್ತು ಆಂಡ್ರಾಯ್ಡ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವವರ ನೆಚ್ಚಿನ ತಾಣವೂ...

ಬೆಂಗಳೂರು: ಉಡುಪಿ ಹೋಟೆಲ್, ಶ್ರೀಕೃಷ್ಣ ದೇವಸ್ಥಾನ, ಕಡಲ ತೀರಕ್ಕಷ್ಟೆ ಅಲ್ಲ, ಈಗ ಐಎಸ್‍ಒ ಮತ್ತು ಆಂಡ್ರಾಯ್ಡ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುವವರ ನೆಚ್ಚಿನ ತಾಣವೂ ಆಗಿದೆ. ರೋಬೊ ಸಾಫ್ಟ್, ಕೋಡ್‍ಕ್ರಾಫ್ಟ್, ಚಿಪ್ಸಿ ಮತ್ತು ರಿಸ್ಟ್‍ಕೋಡ್‍ನಂತಹ ಸಣ್ಣ ಕಂಪನಿಗಳು ಸಹ ಇಲ್ಲಿನ ಪ್ರತಿಭಾವಂತರನ್ನು ನೇಮಿಸಿಕೊಳ್ಳುತ್ತಿದೆ. ಉಡುಪಿ, ಮಣಿಪಾಲ ಮತ್ತು ಮಂಗಳೂರು ಸುತ್ತ ಹೆಚ್ಚು ಆ್ಯಪ್ ಅಭಿವೃದ್ಧಿ ಪಡಿಸುವವರು ಇದ್ದಾರೆ ಎಂದು ವರದಿ ಮಾಡಿದೆ. ಉಡುಪಿ-ಮಂಗಳೂರು ವ್ಯಾಪ್ತಿ ಯಲ್ಲಿ 20ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. ಇದು ಪ್ರತಿಭಾನ್ವಿತರನ್ನು ಪತ್ತೆಹಚ್ಚಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯವಾಗಿ ಬೆಳೆಯುತ್ತಿರುವ ಆರ್ಥಿಕತೆ, ಕಚೇರಿ ಬಾಡಿಗೆ ಕಡಿಮೆ ಇರುವುದು ಸೇರಿದಂತೆ ಹಲವು ಅವಕಾಶಗಳು ಇರುವುದು ಇದಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


