ಮಂಗಳಯಾನಕ್ಕೆ ಬರದ ಸಿದ್ಧತೆ; ಗೋರಿಯೊಳಗೆ ವರ್ಷಕಾಲ ನೆಲೆಸಲಿದೆ 6 ಮಂದಿ ತಂಡ
ಮಂಗಳ ಗ್ರಹದಲ್ಲಿ ಜೀವಿಗಳು ನೆಲೆಸುವಂತೆ ಮಾಡಲು ಮುಂದಾಗಿರುವ ನಾಸಾ ವಿಜ್ಞಾನಿಗಳು, ಮಂಗಳಯಾನಕ್ಕೆ ಹೊರಟಿರುವ ವಿಜ್ಞಾನಿಗಳ ತಂಡವನ್ನು ಭೂಮಿ ಮೇಲೆ...

Published On :
ಮಿಯಾಮಿ: ಮಂಗಳ ಗ್ರಹದಲ್ಲಿ ಜೀವಿಗಳು ನೆಲೆಸುವಂತೆ ಮಾಡಲು ಮುಂದಾಗಿರುವ ನಾಸಾ ವಿಜ್ಞಾನಿಗಳು, ಮಂಗಳಯಾನಕ್ಕೆ ಹೊರಟಿರುವ ವಿಜ್ಞಾನಿಗಳ ತಂಡವನ್ನು ಭೂಮಿ ಮೇಲೆ ಗೋರಿಯೊಂದರೊಳಗೆ ಪ್ರತ್ಯೇಕವಾಗಿ ವರ್ಷ ಕಾಲ ಕಳೆಯುವ ವ್ಯವಸ್ಥೆ ಮಾಡಲಾಗಿದೆ.
ಈ ಗೋರಿಯೊಳಗೆ ತಂಡ ವರ್ಷಕಾಲ ಜೀವನ ನಡೆಸಲಿದೆ. ಸುಮಾರು 36 ಅಡಿ ಅಗಲ ಹಾಗೂ 20 ಅಡಿ ಉದ್ದವಾದ ಗೋರಿಯನ್ನು ಬರಡು ಭೂಮಿಯನ್ನು ಉತ್ತರೀಯ ಮೌನಾ ಲೋವಾದ ಹವಾಯಿಯಲ್ಲಿ ಸಿದ್ಧಗೊಳಿಸಲಾಗಿದೆ.
ಈ ಗೋರಿಯೊಳಗೆ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಕೋಣೆಗಳಿರುತ್ತವೆ. ಪೌಡರ್ ಚೀಸ್ ನಂಥ ಆಹಾರ ತಿನ್ನಲಿದ್ದಾರೆ. ಹೊರ ಹೋಗುವುದಾದರೆ ಬಾಹ್ಯಾಕಾಶ ಉಡುಗೆ ತೊಡುತ್ತಾರೆ. ಅಲ್ಲಿ ಸೀಮಿತ ಜಾಲತಾಣ ಸಂಪರ್ಕವಿದೆ. ಆ ಮೂಲಕ ಮಂಗಳಯಾನಕ್ಕೆ ಅಮೆರಿಕ ನಾಸಾ ತಂಡವನ್ನು ಸಿದ್ಧಗೊಳಿಸಲಾಗುತ್ತಿದೆ.
ಈ ತಂಡದಲ್ಲಿ ಫ್ರ್ಯಾನ್ಸ್ ನ ಬಾಹ್ಯಾಕಾಶ ವಿಜ್ಞಾನಿ, ಜರ್ಮನ್ ನ ಭೌತ ವಿಜ್ಞಾನಿ ಮತ್ತು ಪೈಲಟ್, ವಾಸ್ತುಶಿಲ್ಪಿ, ವೈದ್ಯರಾದ ಪತ್ರಕರ್ತ ಹಾಗೂ ಮಣ್ಣು ವಿಜ್ಞಾನ ಸೇರಿ ನಾಲ್ವರು ಅಮೆರಿಕನ್ನರು ಗೋರಿಯೊಳಗೆ ವರ್ಷ ನೆಲೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


