ವಿಧಾನ ಪರಿಷತ್ ಚುನಾವಣೆ: 2023 ವಿಧಾನಸಭೆ ಹೋರಾಟಕ್ಕೆ ಕಾಂಗ್ರೆಸ್ ನಾಯಕರಿಗೆ ಹೊಸ ಚೈತನ್ಯ ನೀಡಿದ ಫಲಿತಾಂಶಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ನಾಯಕರಿಗೆ ಹೊಸ ಚೈತನ್ಯ ನೀಡಿದಂತಾಗಿದೆ.
ಹಿರಿ ತಲೆಗಳ ನಿರ್ಗಮನ, ಎಚ್ ಡಿಕೆ ಒರಟು ಮಾತು, ಹೋದಲೆಲ್ಲಾ ಸೋಲು: ಹಳೇ ಮೈಸೂರು ಭಾಗದಲ್ಲಿ ಕುಗ್ಗುತಿದೆ ಜೆಡಿಎಸ್ ಪ್ರಾಬಲ್ಯ!ಜೆಡಿಎಸ್ನ ಭದ್ರಕೋಟೆಯಾದ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸೋಲಿನ ಸರಮಾಲೆ ಮುಂದುವರಿದಿದೆ, ಸ್ಪರ್ಧಿಸಿದ ಆರು ವಿಧಾನ ಪರಿಷತ್ ಸ್ಥಾನಗಳಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದೆ.
ಬೆಳಗಾವಿ ಸೋಲಿಗೆ ಪಕ್ಷದ ಕಾರ್ಯಕರ್ತರೇ ಹೊಣೆ; ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನಸ್ಥಿತಿ ಕಾಂಗ್ರೆಸ್ ನದ್ದು: ಕೆ ಎಸ್ ಈಶ್ವರಪ್ಪಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದ ಜನರು ಯಾವ ಪಕ್ಷದತ್ತ ಒಲವು ತೋರಿಸಿದ್ದಾರೆ ಎನ್ನುವುದನ್ನು ತೋರಿಸುವ ಫಲಿತಾಂಶ ಈ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ. ಭಾರತೀಯ ಜನತಾ ಪಾರ್ಟಿ ಹಿಂದಿನ ವಿಧಾನ ಪರಿಷತ್ ನಲ್ಲಿದ್ದ 6 ಮಂದಿಗೆ ಅವಕಾಶವನ್ನು ಮತ್ತೆ ಕೊಟ್ಟಿತ್ತು. ನಾವೀಗ ಆರರಿಂದ 11 ಸ್ಥಾನಕ್ಕೆ ಜಿಗಿದಿದ್ದು, 5 ಸ್ಥಾನವನ್ನು ಹೆಚ್ಚು ಬಿಜೆಪಿ ಗೆದ್ದಿದೆ.
ಪರಿಷತ್ ಚುನಾವಣೆ ಫಲಿತಾಂಶ: ಆಡಳಿತರೂಢ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ; ಕಾಂಗ್ರೆಸ್ ಶಾಸಕಾಂಗ ಸಭೆವಿಧಾನ ಮಂಡಲ ಅಧಿವೇಶನವಿದ್ದರೂ ಮೇಲ್ಮನೆ ಚುನಾವಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್, ಫಲಿತಾಂಶದಲ್ಲಿ ಬಿಜೆಪಿಗೆ ಸಮಬಲವನ್ನು ಸಾಬೀತುಪಡಿಸಿ ಸದ್ಯ ಫಲಿತಾಂಶ ನಿರಾಳತೆಯನ್ನು ನೀಡಿದಂತಿದೆ.
ವಿಧಾನಪರಿಷತ್ ಚುನಾವಣೆ: ಬೆಂಗಳೂರು ನಗರ ಜಿಲ್ಲೆಯಲ್ಲಿ ಗೆಲುವಿನ ನಗೆ ಬೀರಿದ ಆಡಳಿತಾರೂಢ ಬಿಜೆಪಿತೀವ್ರ ಹಣಾಹಣಿ ನಿರೀಕ್ಷಿಸಲಾಗಿದ್ದ ಬೆಂಗಳೂರು ನಗರ ಜಿಲ್ಲಾ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿಯ ಗೋಪಿನಾಥ್ ರೆಡ್ಡಿ ಸುಲಭ ಗೆಲುವು ಸಾಧಿಸಿದ್ದಾರೆ. ಈ ಮೂಲಕ ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷವು ಬೆಂಗಳೂರು ನಗರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿಸಿದೆ.
ಚಿತ್ರದುರ್ಗದಲ್ಲಿ ಕಮಲ 'ಕಿಲಕಿಲ': ಮೂರನೇ ಪ್ರಯತ್ನದಲ್ಲಿ ಖುಲಾಯಿಸಿದ ಕೆ.ಎಸ್. ನವೀನ್ ಅದೃಷ್ಟ!ಸತತ ಎರಡು ಸೋಲಿನ ನಂತರ ಮೂರನೇ ಬಾರಿಗೆ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಕೆ.ಎಸ್ ನವೀನ್ ಅವರ ಅದೃಷ್ಟ ಕೈ ಹಿಡಿದಿದೆ.
4 ಶಾಸನ ಸಭೆಯಲ್ಲೂ ಪಾದಾರ್ಪಣೆ ಮಾಡಿದ ಗೌಡರ ಕುಟುಂಬ!ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಮೊಮ್ಮಗ ಸೂರಜ್ ರೇವಣ್ಣ ಅವರು ಪರಿಷತ್ ಚುನಾವಣೆಯಲ್ಲಿ ಜಯ ಸಾಧಿಸಿದ್ದು, ಈ ಮೂಲಕ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಸೇರಿ ದೇಶದ ನಾಲ್ಕೂ ಶಾಸನಸಭೆಗಳಿಗೂ ದೇವೇಗೌಡರ ಕುಟುಂಬ ಪಾದಾರ್ಪಣೆ ಮಾಡಿದಂತಾಗಿದೆ.
ಘಟಾನುಘಟಿಗಳಿದ್ದರೂ ಬೆಳಗಾವಿಯಲ್ಲಿ 'ಮಕಾಡೆ ಮಲಗಿದ 'ಬಿಜೆಪಿ'!: ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದಿದ್ದ 'ಸಾಹುಕಾರ್' ಗೆ ಮುಖಭಂಗ!ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ ದ್ವಿಸದಸ್ಯ ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಎರಡನೇ ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ: ಮೂರೂ ಪಕ್ಷಗಳಿಗೆ ಎಚ್ಚರಿಕೆ ಗಂಟೆ, ಕಾಂಗ್ರೆಸ್-ಬಿಜೆಪಿ ಸಮಬಲ, ನೆಲಕಚ್ಚಿದ ಜೆಡಿಎಸ್ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಗೆದ್ದು, 75 ಸದಸ್ಯ ಬಲದ ಮೇಲ್ಮನೆಯಲ್ಲಿ ಪೂರ್ಣ ಸರಳ ಬಹುಮತ ಪಡೆಯಲು ಕೇವಲ ಒಂದು ಸ್ಥಾನ ಮಾತ್ರ ಕಡಿಮೆಯಾಗಿದೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸಾಮರ್ಥ್ಯ 37ಕ್ಕೆ ಏರಿಕೆ, ಕಾಂಗ್ರೆಸ್ -26, ಜೆಡಿಎಸ್ 11 ಸದಸ್ಯರ ಬಲ, ಕುತೂಹಲ ಕೆರಳಿಸಿದ ಸಭಾಪತಿ ಸ್ಥಾನವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದ ಹೋರಾಟದ ನಡುವೆಯೂ ಆಢಳಿತಾರೂಢ ಕಮಲ ಪಡೆ ಪರಿಷತ್ ನಲ್ಲಿ ಬಹುಮತ ಪಡೆಯುವಲ್ಲಿ ಸಫಲವಾಗಿದೆ.
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ