ರಾಜಕೀಯ

ಅಧಿಕಾರ ಹಸ್ತಾಂತರ ಜಟಾಪಟಿ ಮಧ್ಯ ಸಿದ್ದರಾಮಯ್ಯ ಬಣದ 11 ಮಂದಿ 'ಕೈ' ಶಾಸಕರು ವಿದೇಶಕ್ಕೆ ಪ್ರಯಾಣ!

ಮೊದಲು ಸರ್ಕಾರಿ ಪ್ರಾಯೋಜಿತ ಟೂರ್ ಎಂದು ಹೇಳಲಾಗುತ್ತಿದ್ದರೂ ಇದೀಗ ಅವರು ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್​ಸಿಗಳು ವಿದೇಶಕ್ಕೆ ಹಾರಿದ್ದಾರೆ.

ಅಧಿಕಾರ ಹಸ್ತಾಂತರ ಜಟಾಪಟಿ ಮಧ್ಯ ಸಿದ್ದರಾಮಯ್ಯ ಬಣದ 11 ಮಂದಿ 'ಕೈ' ಶಾಸಕರು ವಿದೇಶಕ್ಕೆ ಪ್ರಯಾಣ!
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್
Published On :

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ, ನಾಯಕರ ಬಹಿರಂಗ ಹೇಳಿಕೆಗಳು ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಹಲವು ಶಾಸಕರು ಇಂದು ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಮೊದಲು ಸರ್ಕಾರಿ ಪ್ರಾಯೋಜಿತ ಟೂರ್ ಎಂದು ಹೇಳಲಾಗುತ್ತಿದ್ದರೂ ಇದೀಗ ಅವರು ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್​ಸಿಗಳು ವಿದೇಶಕ್ಕೆ ಹಾರಿದ್ದಾರೆ.

ಮಲೇಷಿಯನ್ ಏರ್‌ಲೈನ್ಸ್‌ನ MH 193 ವಿಮಾನದಲ್ಲಿ ಶಾಸಕರು ತೆರಳಿದ್ದಾರೆ. ಆಸ್ಟ್ರೇಲಿಯಾಗೆ ನೇರ ವಿಮಾನ ಇಲ್ಲದ ಕಾರಣ ಟ್ರಾನ್ಸಿಟ್ ಫ್ಲೈಟ್‌ ಮೂಲಕ ಹೋಗುತ್ತಿದ್ದಾರೆ. ಬೆಂಗಳೂರಿನಿಂದ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ತೆರಳುವ ಶಾಸಕರು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುತ್ತಾರೆ.

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಹೋಗುವ ಶಾಸಕರು ಮಾರ್ಚ್ 1ರವರೆಗೆ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ನಿನ್ನೆ 11 ಶಾಸಕರು ಮಾತ್ರ ವಿದೇಶಕ್ಕೆ ಹಾರಿದ್ದಾರೆ.

ಮತ್ತೊಂದೆಡೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪತ್ನಿ ಹಾಗೂ ಸಂಬಂಧಿಕರ ಜೊತೆಗೆ ಕೊಲಂಬಿಯಾಗೆ ತೆರಳಿದ್ದಾರೆ. ನಿನ್ನೆ ಬೆಳಗ್ಗೆ 7 ಸ್ನೇಹಿತರು, ಸಂಬಂಧಿಕರು, ಪತ್ನಿ ಜತೆ ಎಸ್ಎಸ್ ಮಲ್ಲಿಕಾರ್ಜುನ ಕೆಂಪೇಗೌಡ ಏರ್​ಪೋರ್ಟ್​ನಿಂದ ಥೈಲ್ಯಾಂಡ್​​ನ ಪುಕೆಟ್​ ನಗರಕ್ಕೆ ತೆರದ್ದು, ಅಲ್ಲಿಂದ ದಕ್ಷಿಣ ಅಮೆರಿಕಾದ ಕೊಲಂಬಿಯಾಗೆ ಪ್ರಯಾಣ ಬೆಳೆಸಿದ್ದಾರೆ.

ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಸ್ಪಾನ್ಸರ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಸಚಿವ ದಿನೇಶ್ ಗುಂಡೂರಾವ್, ಸ್ಪಾನ್ಸರ್ ಎಂಬುದು ಊಹಾಪೋಹ ಎಂದಿದ್ದಾರೆ.

ಇನ್ನು ಶಾಸಕ ಶಿವಗಂಗಾ ಬಸವರಾಜ್, ಶಾಸಕರ ವಿದೇಶಿ ಪ್ರವಾಸಕ್ಕೆ ನನ್ನ ಆಕ್ಷೇಪ ಇಲ್ಲ ಎನ್ನುತ್ತಲೇ, ಬಜೆಟ್ ಸಮಯದಲ್ಲಿ ಹೋಗುವುದು ಸೂಕ್ತ ಅಲ್ಲ ಎಂದಿದ್ದಾರೆ. ಮತ್ತೊಂದೆಡೆ ಯತೀಂದ್ರ ಸಿದ್ದರಾಮಯ್ಯ, ಹೋಗುವವರಿಗೆ ಬೇಡ ಎನ್ನಲು ಆಗಲ್ಲ ಎಂದಿದ್ದಾರೆ. ಶಾಸಕ ಇಕ್ಬಾಲ್ ಹುಸೇನ್, ರಾಮನಗರವೇ ನನ್ನ ಪಾಲಿನ ಫಾರಿನ್ ಎಂದಿದ್ದು, ಕೆಎನ್ ರಾಜಣ್ಣ ಲೋಕೋ ಭಿನ್ನ ರುಚಿಃ ಎಂದು, ಶಾಸಕರು ಸ್ವಂತ ಖರ್ಚಿನಲ್ಲಿ ಖಾಸಗಿ ಪ್ರವಾಸ ಮಾಡಿದರೆ ತಪ್ಪೇನು ಎಂದು ಕೇಳಿದ್ದಾರೆ.

ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರು ಯಾರೆಲ್ಲ?

  • ದೇವೇಂದ್ರಪ್ಪ, ಜಗಳೂರು ಶಾಸಕ

  • ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು ಶಾಸಕ

  • ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ

  • ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ

  • ಬಿ.ಎಂ ನಾಗರಾಜ್, ಸಿರಗುಪ್ಪ ಶಾಸಕ

  • ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ

  • ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ

  • ಶರಣಗೌಡ ಬಯ್ಯಾಪುರ, ಎಂಎಲ್​ಸಿ

  • ವಸಂತ್ ಕುಮಾರ್, ಎಂಎಲ್​ಸಿ

  • ನಾಗರಾಜ್ ಯಾದವ್, ಎಂಎಲ್​ಸಿ

  • ಡಾ. ಡಿ. ತಿಮಯ್ಯ, ಎಂಎಲ್​ಸಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.