power tussle

ಸಿಎಂ ಕುರ್ಚಿ ಕದನ: ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿ; ಬಸವರಾಜ ರಾಯರೆಡ್ಡಿ
ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಂಡರೆ, ಮೊದಲು ಶಾಸಕರ ಅಭಿಪ್ರಾಯ ಪಡೆಯಬೇಕು.

ಸಿದ್ದರಾಮಯ್ಯ'ಪಂದ್ರಾ ದಿನ್ ಕಾ ಸುಲ್ತಾನ್'; ಕೆಲವು ಕೋಳಿಗಳು ಕಾಳು ತಿನ್ನುವ ಸಲುವಾಗಿ ಹೀಗೆ ಮಾಡ್ತಿವೆ: ಕಾರಜೋಳ ವ್ಯಂಗ್ಯ
ಮಾಹಿತಿ ಪ್ರಕಾರ ಸಿದ್ಧರಾಮಯ್ಯ ಬೆಂಬಲಿಗ 40 ಜನ ಶಾಸಕರು, ಡಿ.ಕೆ.ಶಿವಕುಮಾರ ಪರವಾಗಿ 50 ಶಾಸಕರು ಹೈಕಮಾಂಡ್ ಬಳಿ ಹೋಗಿ ಲಾಭಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಮುಂದುವರಿದ ಪಟ್ಟದಾಟ: ಸಿದ್ದರಾಮಯ್ಯ ಅಸಹಾಯಕರಲ್ಲವೆಂದು ಬಿಂಬಿಸಲು ಆಪ್ತ ಬಣದ ಒದ್ದಾಟ; ಮುಕ್ತಿ ಮಂದಿರದಲ್ಲಿ ಡಿಕೆಶಿ ವಿಶೇಷ ಪೂಜೆ!
ಸಿದ್ದರಾಮಯ್ಯ ಭೇಟಿಯಾದ ನಂತರ, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಸಹ ಸತೀಶ್ ಭೇಟಿಯಾದರು, ಅಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಮಾಜಿ ಎಂಎಲ್‌ಸಿ ಎಂ.ಸಿ. ವೇಣುಗೋಪಾಲ್ ಕೂಡ ಹಾಜರಿದ್ದರು.

ನಾಯಕತ್ವ ಜಟಾಪಟಿ: ಶೀಘ್ರದಲ್ಲೇ ಹೈಮಾಂಡ್ ನಿರ್ಧಾರ; ಸತೀಶ್ ಜಾರಕಿಹೊಳಿ
ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು ಹೈಕಮಾಂಡ್‌ಗೆ ಮಾಹಿತಿ ನೀಡಿದ್ದು, ಪಕ್ಷದೊಳಗಿನ ಗೊಂದಲವನ್ನು ಶೀಘ್ರ ಪರಿಹರಿಸುವಂತೆ ಮನವಿ ಮಾಡಲಾಗಿದೆ.

ಅಧಿಕಾರ ಹಸ್ತಾಂತರ ಜಟಾಪಟಿ ಮಧ್ಯ ಸಿದ್ದರಾಮಯ್ಯ ಬಣದ 11 ಮಂದಿ 'ಕೈ' ಶಾಸಕರು ವಿದೇಶಕ್ಕೆ ಪ್ರಯಾಣ!
ಮೊದಲು ಸರ್ಕಾರಿ ಪ್ರಾಯೋಜಿತ ಟೂರ್ ಎಂದು ಹೇಳಲಾಗುತ್ತಿದ್ದರೂ ಇದೀಗ ಅವರು ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಕಳೆದ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್ಸಿಗಳು ವಿದೇಶಕ್ಕೆ ಹಾರಿದ್ದಾರೆ.

'ಸಮಯವೇ ಎಲ್ಲದಕ್ಕೂ ಉತ್ತರ ನೀಡುತ್ತದೆ': ಖರ್ಗೆ, ವೇಣುಗೋಪಾಲ್ ಭೇಟಿ ಮಾಡಿದ ಡಿ.ಕೆ ಶಿವಕುಮಾರ್; ಇಂದು ಬೆಂಗಳೂರಿಗೆ ವಾಪಸ್
ಮುಂದಿನ ಅಸ್ಸಾಂ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಲು ಕಳೆದ ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಇರುವ ಡಿ ಕೆ ಶಿವಕುಮಾರ್, ತಮ್ಮ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಇತ್ತೀಚೆಗೆ ನೀಡಿದ ಹೇಳಿಕೆ ಕುರಿತು ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಿದ್ದರು.

ಅಧಿಕಾರ ಹಂಚಿಕೆ ಬಿಕ್ಕಟ್ಟು: ಸಿಎಂ ಜೊತೆಗಿನ ಬಜೆಟ್ ಪೂರ್ವಭಾವಿ ಸಭೆ ಬಿಟ್ಟು, ದೆಹಲಿಗೆ ಡಿಕೆಶಿ ಪ್ರಯಾಣ!
ಇಂದು ಬೆಳಗ್ಗೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಅವರಿಗೆ ಸಂಬಂಧಿಸಿದ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಯನ್ನು ಸಿದ್ದರಾಮಯ್ಯ ಇಂದು ನಡೆಸಲಿದ್ದಾರೆ.

ಕಾಂಗ್ರೆಸ್ ಕುರ್ಚಿ ಕದನ: ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ, ತೆಗೆದುಕೊಂಡ ನಿರ್ಧಾರವೇನು..?
ವಾರದ ಹಿಂದಷ್ಟೇ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಆಗಮಿಸಿ, ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಜೊತೆ ಮಾತುಕತೆ ನಡೆಸಿ, ಬಳಿಕ ಈ ಕುರಿತು ಸೋನಿಯಾ ಗಾಂಧಿಗೆ ವರದಿ ನೀಡಿದ್ದರು.

ಸಿಎಂ ಹುದ್ದೆಗಾಗಿ ಮುಂದುವರಿದ ಹಗ್ಗಜಗ್ಗಾಟ: ದೆಹಲಿಯಲ್ಲಿ ಡಿ.ಕೆ ಶಿವಕುಮಾರ್ ಬಣದ ಮೇಲಾಟ; ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೋರಾಟ!
ಕಳೆದ ಎರಡು ದಿನಗಳಲ್ಲಿ, ಶಿವಕುಮಾರ್ ಅವರನ್ನು ಬೆಂಬಲಿಸುವ 10 ಕ್ಕೂ ಹೆಚ್ಚು ಶಾಸಕರು ನಾಯಕತ್ವ ಬದಲಾವಣೆಗೆ ಒತ್ತಾಯಿಸಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ.

