ರೌಡಿಸಂ ಕಾಂಗ್ರೆಸ್ ಶಕ್ತಿ; ಕುಖ್ಯಾತ ರೌಡಿ ಜಯರಾಜ್ ಬೆಳೆಸಿದವರು ಸಂಜಯ್ ಗಾಂಧಿ: ಬಿಜೆಪಿ ಆರೋಪ
ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ನಾನಾ ಕಾರಣಗಳಿಂದ ವಾಗ್ಯುದ್ಧ ಪ್ರತಿದಿನ ಮುಂದುವರೆದಿದೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ನಾನಾ ಕಾರಣಗಳಿಂದ ವಾಗ್ಯುದ್ಧ ಪ್ರತಿದಿನ ಮುಂದುವರೆದಿದೆ.
ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹೊಡೆದಾಟ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ, ರೌಡಿಸಂ ಕಾಂಗ್ರೆಸ್ ಶಕ್ತಿಯಾಗಿದ್ದು, ಕುಖ್ಯಾತ ರೌಡಿ ಜಯರಾಜ್ ಬೆಳೆಸಿದವರು ಸಂಜಯ್ ಗಾಂಧಿ ಎಂದು ಆರೋಪಿಸಿದೆ.
ಈ ಸಂಬಂಧ ರಾಜ್ಯ ಬಿಜೆಪಿ ಟ್ವೀಟರ್ ನಲ್ಲಿ ಟ್ವೀಟ್ ಮಾಡಲಾಗಿದ್ದು, ಸಂಜಯ್ ಗಾಂಧಿ ರೌಡಿ ಜಯರಾಜ್ ಬೆಳೆಸಿದ್ದಂತೆ ಕೊತ್ವಾಲ ರಾಮಚಂದ್ರನ ಶಿಷ್ಯರಾಗಿದ್ದವರು ಇಂದು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಇತಿಹಾಸವೇ ಹೀಗಿರಬೇಕಾದರೆ ಬೀದಿ ಹೊಡೆದಾಟಗಳು ಪಕ್ಷಕ್ಕೆ ಸಾಮಾನ್ಯ. ಆದರೆ ನಾಡಿನ ಜನರಿಗೆ ಇದನ್ನು ಸಹಿಸಿಕೊಳ್ಳುವ ಕರ್ಮ ಏಕೆ ಎಂದು ಪ್ರಶ್ನಿಸಿದೆ.
ಟಿಕೆಟ್‌ಗಾಗಿ ಅರ್ಜಿ ಎಂಬುದು ಸಿದ್ದರಾಮಯ್ಯ ಹಣಿಯಲು ಡಿಕೆ ಶಿವಕುಮಾರ್ ತೋಡಿರುವ ಖೆಡ್ಡಾ, ಒರ್ವನ ಸ್ವಾರ್ಥ ಲಾಲಸೆಗೆ ಕಾರ್ಯಕರ್ತರು ಕತ್ತಿನ ಪಟ್ಟಿ ಹಿಡಿದುಕೊಂಡು ಹೊಡೆದಾಡುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಡಿಕೆಶಿ- ಸಿದ್ದು ನಡುವಿನ ಒಳಜಗಳ ಬೀದಿಗೆ ಬಂದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಎಂಬಂತೆ ಈ ಇಬ್ಬರ ರಂಪಾಟಗಳು ಕಾರ್ಯಕರ್ತರ ತೋಳುಗಳಲ್ಲಿ ಕಾಣುತ್ತಿರುವುದು ಕಾಂಗ್ರೆಸ್ ಅಧ:ಪತನದ ಸೂಚನೆಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


