ರಾಜಕೀಯ

'ಇಂದಿನ ರೌಡಿಗಳೇ ಮುಂದಿನ ಬಿಜೆಪಿ ಮುಖಂಡರು; ಎಷ್ಟೇ ಆದರೂ ದೇಶಕ್ಕೆ ಗೋಡ್ಸೆಯಂತಹ ಭಯೋತ್ಪಾದಕನನ್ನು ನೀಡಿದ ಸಂತತಿ ಅಲ್ಲವೇ?'

ರೌಡಿಗಳು ರಾಜಕಿಯಕ್ಕೆ ಪ್ರವೇಶ ಪಡೆಯುತ್ತಿರುವ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಈ ನಡುವೆ ಇಂದಿನ ರೌಡಿಗಳೇ ಮುಂದಿನ ಕರ್ನಾಟಕ ಬಿಜೆಪಿಯ ಮುಖಂಡರು ಎಂದು ಕಾಂಗ್ರೆಸ್ ಮುಖಂಡಎಚ್.ಸಿ ಮಹಾದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

'ಇಂದಿನ ರೌಡಿಗಳೇ ಮುಂದಿನ ಬಿಜೆಪಿ ಮುಖಂಡರು; ಎಷ್ಟೇ ಆದರೂ ದೇಶಕ್ಕೆ ಗೋಡ್ಸೆಯಂತಹ ಭಯೋತ್ಪಾದಕನನ್ನು ನೀಡಿದ ಸಂತತಿ ಅಲ್ಲವೇ?'
ಬಿಜೆಪಿ ನಾಯಕರ ಜೊತೆ ರೌಡಿ ಸುನೀಲ
Published On :

ಬೆಂಗಳೂರು: ರೌಡಿಗಳು ರಾಜಕಿಯಕ್ಕೆ ಪ್ರವೇಶ ಪಡೆಯುತ್ತಿರುವ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಈ ನಡುವೆ ಇಂದಿನ ರೌಡಿಗಳೇ ಮುಂದಿನ ಕರ್ನಾಟಕ ಬಿಜೆಪಿಯ ಮುಖಂಡರು ಎಂದು ಕಾಂಗ್ರೆಸ್ ಮುಖಂಡಎಚ್.ಸಿ ಮಹಾದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಎಚ್.ಸಿ ಮಹಾದೇವಪ್ಪ ಬಿಜೆಪಿಗೆ ತಿವಿದಿದ್ದಾರೆ. ಚುನಾವಣೆ ಹೊತ್ತಲ್ಲಿ ಏನೇನೋ ಸಮರ್ಥನೆ ಕೊಟ್ಟು 30-40 ಕೊಲೆ ಮಾಡಿದಂತಹ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಬಿಜೆಪಿ, ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಂಡು ಇವರೇ ನೋಡಿ ನಮ್ಮ ದೇಶದ ನಿಜವಾದ ದೇಶಪ್ರೇಮಿಗಳು ಎನ್ನುತ್ತಾರಾ ಎಂಬ ಆತಂಕ ನನ್ನದು ಎಂದಿದ್ದಾರೆ.

ಅದರಲ್ಲೂ ಬಿಜೆಪಿಯ  ಸಿ ಟಿ ರವಿ ಬೇರೆ ಇಸ್ಲಾಮಾಬಾದ್ ನಲ್ಲಿ ನಮ್ಮ ಧ್ವಜ ಹಾರಿಸುತ್ತೇವೆ ಎಂದು ಆಗಾಗ್ಗೆ ಹೇಳುವುದನ್ನು ನೋಡಿದರೆ ಮೇಲಿನ ಮಾತು ವಾಸ್ತವಕ್ಕೆ ಹತ್ತಿರವಿದೆಯೇನೋ ಅನಿಸುತ್ತದೆ ಎಷ್ಟೇ ಆದರೂ ಗೋಡ್ಸೆಯಂತಹ ದೇಶಕ್ಕೆ ಮೊದಲ ಭಯೋತ್ಪಾದಕನನ್ನು ನೀಡಿದ ಸಂತತಿ ಅಲ್ಲವೇ? ಇವರಿಂದ ಇನ್ನೇನು ನಿರೀಕ್ಷಿಸಬಹುದು ಎಂದು ಮಹಾದೇವಪ್ಪ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.