ರಾಜಕೀಯ

ಟೆಂಡರ್ ಪ್ರಕ್ರಿಯೆ ಮುಗಿವ ಮುನ್ನವೇ ಕಾಮಗಾರಿ: ಈಶ್ವರಪ್ಪ ಆರೋಪ

ಅಂದಾಜು 128 ಕೋಟಿ ಮೊತ್ತದ ತುಂಗಾ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಕ್ಷಣವೇ ಕೆಲಸ ಸ್ಥಗಿತಗೊಳಿಸಬೇಕು ಹಾಗೂ ಲೋಕಾಯುಕ್ತ ತನಿಖೆಗೆ ಆದೇಶಿಸಬೇಕೆಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು...

ಟೆಂಡರ್ ಪ್ರಕ್ರಿಯೆ ಮುಗಿವ ಮುನ್ನವೇ ಕಾಮಗಾರಿ: ಈಶ್ವರಪ್ಪ ಆರೋಪ
ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ
Published On :

ಬೆಂಗಳೂರು: ಅಂದಾಜು 128 ಕೋಟಿ ಮೊತ್ತದ ತುಂಗಾ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತಕ್ಷಣವೇ ಕೆಲಸ ಸ್ಥಗಿತಗೊಳಿಸಬೇಕು ಹಾಗೂ ಲೋಕಾಯುಕ್ತ  ತನಿಖೆಗೆ ಆದೇಶಿಸಬೇಕೆಂದು ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.

ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕ ಮಂಡಲಿ ಸಭೆಯಲ್ಲೂ ತೀರ್ಮಾನ ಆಗಿಲ್ಲ, ಕಾಮಗಾರಿ ನಿರ್ವಹಿಸುವ ಸಂಬಂಧ ಒಪ್ಪಂದವೂ ಆಗಿಲ್ಲ ಜತೆಗೆ ಕಾಮಗಾರಿ ಗುತ್ತಿಗೆ ನೀಡುವ ಆದೇಶವೂ ಆಗಿಲ್ಲ. ಇಲಾಖೆ ಕರೆದಿದ್ದ ಟೆಂಡರ್ ಮೊತ್ತಕ್ಕಿಂತ ಶೇ.20 ರಷ್ಟು ಹೆಚ್ಚಿನ ದರ ಉಲ್ಲೇಖಿಸಿದ್ದಾರೆ. ಈ  ಬಗ್ಗೆ ಸಮಾಲೋಚನೆಯೂ ಆಗಿಲ್ಲ. ಆದರೂ ರಾಮಲಿಂಗಂ ಕನ್‍ಸ್ಟ್ರಕ್ಷನ್ ಕಂಪೆನಿ ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಈ  ರೀತಿಯೂ ಗೋಲ್‍ಮಾಲ್ ನಡೆಯುತ್ತಿರುವುದು ಅಚ್ಚರಿ ತಂದಿದೆ ಎಂದರು.

ಕಾಮಗಾರಿ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಕೆಲಸಗಳ ಗುಣಮಟ್ಟ ಪರಿಶೀಲಿಸಿ ಅದಕ್ಕೆ ಪೂರಕವಾದ ಛಾಯಾಚಿತ್ರಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಈಶ್ವರಪ್ಪ ಅವರು  ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ಕಾಮಗಾರಿ ಕೈಗೊಂಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. 30 ಜೆಸಿಬಿ ಬಳಸಿ ಜಂಗಲ್  ತೆರವುಗೊಳಿಸಿದ್ದಾರೆ. ಏರಿ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಸಂಪೂರ್ಣ ಕಾನೂನು ಬಾಹಿರ ಕಾಮಗಾರಿಯಾಗಿದೆ ಎಂದು ದೂರಿದರು. ನಾಲೆಯ ಎಡ, ಬಲದಂಡೆಯ 60  ಕಿ.ಮೀ.ಉದ್ದದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಎಲ್ಲಾ ಹಂತದಲ್ಲೂ ಎಲ್ಲವೂ ಒಂದೇ ದಿನದಲ್ಲಿ ಅನುಮೋದನೆ ಪಡೆಯುತ್ತದೆ ಸತ್ಯಾಂಶ ಹೊರಬರಲು ಲೋಕಾಯುಕ್ತ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.