ರಾಜಕೀಯ

ಕುಮಾರನಿಂದ ಅವಸಾನ

ಜೆಡಿಎಸ್‌ನ ಇಂದಿನ ದುಸ್ಥಿತಿಗೆ ನನ್ನ ಮಗ ಕುಮಾರ ಸ್ವಾಮಿಯೇ ಕಾರಣ! ಇದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ..

ಕುಮಾರನಿಂದ ಅವಸಾನ
ಮಂಗಳೂರಿನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡ ಎಚ್.ಡಿ ದೇವೇಗೌಡರು.
Published On :

ಮಂಗಳೂರು: ಜೆಡಿಎಸ್‌ನ ಇಂದಿನ ದುಸ್ಥಿತಿಗೆ ನನ್ನ ಮಗ ಕುಮಾರ ಸ್ವಾಮಿಯೇ ಕಾರಣ!

ಇದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ನೋವಿನ ಮಾತು. ಬಲ್ಮಠದಲ್ಲಿ ಬುಧವಾರ ನಡೆದ ಪಕ್ಷದ ಸಮಾವೇಶದಲ್ಲಿ ಅವರು ಗದ್ಗದಿತರಾದರು.

ಕುಮಾರಸ್ವಾಮಿ, ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸದಿದ್ದರೆ ಜೆಡಿಎಸ್‌ಗೆ ಇಂಥ ಗತಿ ಬರುತ್ತಿರಲ್ಲಿಲ್ಲ. ಅಂದು ಸರ್ಕಾರ ರಚಿಸಿ ಪಕ್ಷದ ದುಸ್ಥಿತಿಗೆ ಕಾರಣನಾದ. ಕುಮಾರ ಸ್ವಾಮಿ ಇಂಥ ನಿರ್ಣಯ ಕೈಗೊಳ್ಳುವ ಮುನ್ನ ಒಮ್ಮೆ ನನ್ನೊಂದಿಗೆ ಮಾತನಾಡಿದ್ದರೆ ಎಲ್ಲ ಸರಿಹೋಗುತ್ತಿತ್ತು. ಆದರೆ ಅವನು ಹೇಳಲಿಲ್ಲ. ತಪ್ಪು ನಿರ್ಧಾರ ತೆಗೆದುಕೊಂಡು ಬಿಟ್ಟ. ಆಗಿನಿಂದಲೇ ಪಕ್ಷದ ಅವಸಾನ ಆರಂಭವಾಯಿತು ಎಂದು ವಿಷಾಧಿಸಿದರು.

ನಿಷ್ಠಾವಂತರ ಮಾತು ಕೇಳಿಲ್ಲ
ಕುಮಾರಸ್ವಾಮಿ ಮಾತ್ರವಲ್ಲ. ನನ್ನದೂ ತಪ್ಪಿದೆ. ಪಕ್ಷದ ನಿಷ್ಠಾವಂತರ ಮಾತುಗಳನ್ನು ಕೇಳಲಿಲ್ಲ. ಅವರನ್ನು ವಿಶ್ವಾಸಕ್ಕೂ ತೆಗೆದುಕೊಳ್ಳಲಿಲ್ಲ ಎಂದು ಗದ್ಗದಿತರಾದರು. ಪಕ್ಷ ಬಿಟ್ಟವರು ಹೋಗಲಿ, ಅಧಿಕಾರದ ಆಸೆಯಿಂದ ಹೋಗಿದ್ದಾರೆ. ಇಂಥವರ ಬಗ್ಗೆ ಮಾತನಾಡಲೂ ಇಷ್ಟಪಡಲ್ಲ. ನಿಷ್ಠಾವಂತರನ್ನು ಸೇರಿಸಿಕೊಂಡು ಪಕ್ಷ ಕಟ್ಟುತ್ತೇನೆ ಎಂದರು.

ದೂರುಗಳ ಸುರಿಮಳೆ
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ನಾಯಕರ ವಿರುದ್ಧ ದೂರುಗಳ ಸುರಿಮಳೆಯನ್ನೇ ಹರಿಸಿದರು. ಕಾರ್ಯಕರ್ತರು, ಸ್ಥಳೀಯರ ಅಭಿಪ್ರಾಯ ಕೇಳದೆ ಯಾರು ಯಾರನ್ನೋ ಪಕ್ಷಕ್ಕೆ ಕರೆತರುತ್ತೀರಿ. ಆರ್‌ಎಸ್‌ಎಸ್‌ನವರನ್ನೂ ಕರೆತಂದು ಪಕ್ಷದ ಅಭ್ಯರ್ಥಿಯನ್ನಾಗಿಸುತ್ತೀರಿ ಎಂದು ನೇರವಾಗಿಯೇ ಆರೋಪ ಮಾಡಿದರು. ಇದೆಲ್ಲವನ್ನೂ ಶಾಂತಚಿತ್ತತೆಯಿಂದ ಕೇಳಿಸಿಕೊಂಡ ದೇವೇಗೌಡರು, ಎಲ್ಲವನ್ನೂ ನಿಮ್ಮ ಬಳಿ ಹೇಳಿದ್ದೇನೆ, ಕೇಳಿಸಿಕೊಂಡಿದ್ದೇನೆ, ಎಲ್ಲವನ್ನೂ ಸರಿ ಮಾಡುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.