ಕೇರಳದಲ್ಲಿ ದಿಢೀರ್ ಪ್ರವಾಹ: ಈಜಲು ಹೋದವರು ನೀರುಪಾಲು; 5 ಸಾವು, ಒಬ್ಬರು ನಾಪತ್ತೆ! Video
ಕೆಟ್ಟಂಗಲ್, ಆನಕುಂಡ್, ಬಾಲವಾಡಿಪ್ಪಾಡಿ ಹಾಗೂ ಕೊಯಿಪ್ರ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಜನರು ತೆರಳಿದ್ದರು. ಒಲರವಟ್ಟಂ ಕಾಲುವೆಯಿಂದ ಟಿಕೆ ಕಾಲನಿವರೆಗೆ ನದಿಯ ವಿವಿಧ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ..

ಮಲಪ್ಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರ್‌ನ ಪೂಕ್ಕೊಟ್ಟುಂಬಾಡಂ ಸಮೀಪದ ಟಿಕೆ ಕಾಲನಿಯಲ್ಲಿ ಕೊಟ್ಟಪುಳ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹದಲ್ಲಿ ಐವರು ಮೃತಪಟ್ಟಿದ್ದು, ಓರ್ವ ಮಹಿಳೆ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾಗಿರುವ ಮಹಿಳೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮೃತರನ್ನು ಕೊಟ್ಟಕ್ಕಲ್‌ನ ಎಡರಿಕೋಡ್ ನಿವಾಸಿ ಹಾಗೂ ಮಂಗಾಡನ್ ಬಸ್ ಮಾಲೀಕ ಅನಸ್ ಮಂಗಾಡನ್ (31), ತಿರೂರ್ ನಿವಾಸಿ ಮುಹಮ್ಮದ್‌ಕುಟ್ಟಿ (65), ಕರುವಾರಕುಂಡ್‌ನ ತರಿಶ್ ನಿವಾಸಿ ಶ್ರಾಂಬಿಕ್ಕಲ್ ರಹೀಮ್ (35), ವಂಡೂರಿನ ಕೊಟ್ಟಕ್ಕುನ್ನು ನಿವಾಸಿ ಸಜ್ಜಾದ್ (23) ಹಾಗೂ ವಂಡೂರಿನ ಚೆಟ್ಟಿಯಾರಮ್ಮಲ್ ನಿವಾಸಿ ಕರುಪ್ಪತ್ ರಫೀಕ್ (41) ಎಂದು ಗುರುತಿಸಲಾಗಿದೆ. ಟಿಕೆ ಕಾಲನಿ ನಿವಾಸಿ ಸಜಿತಾ ಎಂಬ ಮಹಿಳೆ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.
ಮೂಲಗಳ ಪ್ರಕಾರ ರಹೀಮ್ ಅವರು ಕಾಳಿಕಾವು–ತಿರೂರ್ ಮಾರ್ಗದಲ್ಲಿ ಸಂಚರಿಸುವ ಆರ್‌ಟಿಸಿ ಬಸ್‌ನ ಕಂಡಕ್ಟರ್ ಆಗಿದ್ದರು. ಭಾನುವಾರ ರಾತ್ರಿ ಅನಸ್ ಹಾಗೂ ಮುಹಮ್ಮದ್‌ಕುಟ್ಟಿ ಅವರ ಮೃತದೇಹಗಳು ಪತ್ತೆಯಾಗಿದ್ದವು. ಸೋಮವಾರ ಬೆಳಗ್ಗೆ ರಹೀಮ್, ಸಜ್ಜಾದ್ ಹಾಗೂ ರಫೀಕ್ ಅವರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಪೊಟ್ಟಿಕ್ಕಲ್ಲುವಿನ ಮುಟ್ಟಿಕ್ಕುಂಡ್ ಹಾಗೂ ಆಂಥೋಣಿಕ್ಕಾಡ್‌ನ ಅಸಂಪ್ಷನ್ ಶಾಲೆಯ ಹಿಂಭಾಗದಲ್ಲಿ ಶೋಧ ಕಾರ್ಯಾಚರಣೆ ವೇಳೆ ಮೃತದೇಹಗಳು ಪತ್ತೆಯಾಗಿವೆ.
ಪ್ರವಾಸಕ್ಕೆ ಬಂದು, ಈಜುತ್ತಿದ್ದ ವೇಳೆ ದುರಂತ
ಮೃತರೆಲ್ಲರೂ ಭಾನುವಾರದ ರಜಾ ದಿನ ನದಿಯ ಸುತ್ತಮುತ್ತ ಪ್ರವಾಸಕ್ಕೆ ಬಂದಿದ್ದರು. ಕೆಟ್ಟಂಗಲ್, ಆನಕುಂಡ್, ಬಾಲವಾಡಿಪ್ಪಾಡಿ ಹಾಗೂ ಕೊಯಿಪ್ರ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಜನರು ತೆರಳಿದ್ದರು. ಒಲರವಟ್ಟಂ ಕಾಲುವೆಯಿಂದ ಟಿಕೆ ಕಾಲನಿವರೆಗೆ ನದಿಯ ವಿವಿಧ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. ಈ ವೇಳೆ ಹಲವರು ನದಿಗೆ ಇಳಿದಿದ್ದರು ಎನ್ನಲಾಗಿದೆ.
ಸಂಜೆ 5ರ ಸುಮಾರಿಗೆ ದಿಢೀರ್ ಪ್ರವಾಹ
ಭಾನುವಾರ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಸಂಜೆ 5ರ ಸುಮಾರಿಗೆ ಕೊಟ್ಟಪುಳ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ನೀರಿನ ಮಟ್ಟ ಏಕಾಏಕಿ ಏರಿಕೆಯಾಗುತ್ತಿದ್ದಂತೆ ನದಿಯಲ್ಲಿದ್ದ ಹಾಗೂ ನದಿ ತೀರದಲ್ಲಿದ್ದ ಹಲವರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆ.
ಕೆಲವರು ಮರದ ಕೊಂಬೆಗಳು ಹಾಗೂ ಬಂಡೆಗಳ ಮೇಲೆ ಹತ್ತಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ಕಾರ್ಯಾಚರಣೆ ನಡೆಸಿ, ಮರ ಹಾಗೂ ಬಂಡೆಗಳ ಮೇಲೆ ಆಶ್ರಯ ಪಡೆದಿದ್ದ ಸುಮಾರು 30 ಮಂದಿಯನ್ನು ರಕ್ಷಿಸಿದ್ದಾರೆ. ಇನ್ನೂ ಹಲವು ಮಂದಿ ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದರು.
ಕತ್ತಲಿನಿಂದಾಗಿ ಶೋಧ ಕಾರ್ಯಕ್ಕೆ ಬ್ರೇಕ್
ಭಾನುವಾರ ರಾತ್ರಿ ಸುಮಾರು 9.30ರ ವೇಳೆಗೆ ಕತ್ತಲು ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಬೆಳಗ್ಗೆ 6 ಗಂಟೆಗೆ ಮತ್ತೆ ಶೋಧ ಕಾರ್ಯ ಆರಂಭಿಸಲಾಯಿತು. ಪ್ರವಾಹದಲ್ಲಿ ನಾಪತ್ತೆಯಾಗಿರುವ ಸಜಿತಾ ಅವರಿಗಾಗಿ ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



