ThinkEdu 2026: ಯೋಗ ಭಾರತದಲ್ಲಿ ಹುಟ್ಟಿದ್ದು, ಹೀಗಾಗಿ ನಮಗೆ IIYM, IIYT ಗಳೂ ಬೇಕು; ಸ್ವಾಮಿ ಶುದ್ಧಿದಾನಂದ; Video
ಚಂದೋಪನಿಷತ್ತು ಉದಾಹರಣೆಯನ್ನು ಉಲ್ಲೇಖಿಸಿದ ಡಾ. ಸುಧಾ ಶೇಷಯ್ಯನ್ ಅವರು ಶಿಕ್ಷಣದ ಎರಡು ರೂಪಗಳನ್ನು ವಿವರಿಸಿದರು: ಪರವಿದ್ಯೆ - ದೈವಸಾಕ್ಷಾತ್ಕಾರಕ್ಕೆ ದಾರಿ ತೋರಿಸುವ ವಿದ್ಯೆ; ಅಪರವಿದ್ಯೆ - ಇತರೆ ಎಲ್ಲಾ ವಿಧದ ಜ್ಞಾನವನ್ನು ಒಳಗೊಂಡ ವಿದ್ಯೆ.

ಚೆನ್ನೈ: ಇಂದಿನ ಜಗತ್ತಿನಲ್ಲಿ ಶಿಕ್ಷಣವು ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದೆ, ಮಾನಸಿಕ ಧೈರ್ಯ ಮತ್ತು ಆತ್ಮಜಾಗೃತಿಗೂ ಒತ್ತು ನೀಡಬೇಕು ಎಂಬ ಅಭಿಪ್ರಾಯವು ThinkEdu Conclave ಎರಡನೇ ದಿನದ ಮೊದಲ ಅಧಿವೇಶನದಲ್ಲಿ ವ್ಯಕ್ತವಾಯಿತು. ‘Educating the Mind, Empowering the Heart’ ಎಂಬ ಶೀರ್ಷಿಕೆಯಡಿ ನಡೆದ ಅಧಿವೇಶನದಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ.
ಡಾ ಸುಧಾ ಶೇಷಯ್ಯನ್ (ಹಿಂದಿನ ಕುಲಪತಿ, The Tamil Nadu Dr MGR Medical University) ಅವರೊಂದಿಗೆ ನಡೆದ ಸಂವಾದದಲ್ಲಿ ಸ್ವಾಮಿ ಶುದ್ಧಿದಾನಂದ (ಅಧ್ಯಕ್ಷರು, ಅದ್ವೈತ ಆಶ್ರಮ) ಮೌಲ್ಯಗಳು ಮತ್ತು ಆತ್ಮಜಾಗೃತಿ ಸಮತೋಲನ ಹೊಂದಿದ ವ್ಯಕ್ತಿತ್ವ ರೂಪುಗೊಳ್ಳಲು ಅತ್ಯಂತ ಮುಖ್ಯವೆಂದು ಪ್ರತಿಪಾದಿಸಿದರು.
ಚಾಂದೋಗ್ಯ ಉಪನಿಷತ್ತಿನ ಉದಾಹರಣೆಯನ್ನು ಉಲ್ಲೇಖಿಸಿದ ಡಾ. ಸುಧಾ ಶೇಷಯ್ಯನ್ ಅವರು ಶಿಕ್ಷಣದ ಎರಡು ರೂಪಗಳನ್ನು ವಿವರಿಸಿದರು: ಪರವಿದ್ಯೆ — ದೈವಸಾಕ್ಷಾತ್ಕಾರಕ್ಕೆ ದಾರಿ ತೋರಿಸುವ ವಿದ್ಯೆ; ಅಪರವಿದ್ಯೆ — ಇತರೆ ಎಲ್ಲಾ ವಿಧದ ಜ್ಞಾನವನ್ನು ಒಳಗೊಂಡ ವಿದ್ಯೆ.
ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ಶುದ್ಧಿದಾನಂದರು, ಯೋಗವನ್ನು ಮುಖ್ಯ ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸಬೇಕೆಂದು ಸಲಹೆ ನೀಡಿದರು.
ಕೇವಲ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT) ಮಾತ್ರವಲ್ಲ, ಭಾರತೀಯ ಯೋಗ ಮತ್ತು ತಂತ್ರಜ್ಞಾನ ಸಂಸ್ಥೆ (IIYT)ಗಳನ್ನೂ ಸ್ಥಾಪಿಸುವ ಬಗ್ಗೆ ಯೋಚಿಸಬೇಕು. ಕೇನಲ IIM ಗಳಷ್ಟೇ ಅಲ್ಲ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಯೋಗಾ ಅಂಡ್ ಮ್ಯಾನೇಜ್ಮೆಂಟ್ (IIYM) ಇರಬೇಕು ಎಂದು ಹೇಳಿದರು. ಯೋಗ ಭಾರತದಲ್ಲೇ ಹುಟ್ಟಿದ್ದಾಗಿರುವುದರಿಂದ, ಈ ದೃಷ್ಟಿಕೋನವನ್ನು ಭಾರತೀಯರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದರು.
ಯೋಗವು ವ್ಯಕ್ತಿಗೆ ತನ್ನ ಮನಸ್ಸನ್ನು ಅರ್ಥಮಾಡಿಕೊಂಡು ಏಕಾಗ್ರತೆಯಿಂದ ಇರಿಸಿಕೊಳ್ಳಲು ಅತ್ಯಂತ ಪರಿಣಾಮಕಾರಿ ಸಾಧನಗಳಲ್ಲಿ ಒಂದಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



