ThinkEdu 2026: ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ NEP ಸೂಕ್ತವಲ್ಲ- ಸಚಿವ ಎಂ.ಸಿ ಸುಧಾಕರ್; Video
ದೇಶದಲ್ಲಿ NEP-2020 ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಆದರೆ, ಹಿಂದಿನ ಸರ್ಕಾರ ವಾಸ್ತವಾಂಶಗಳನ್ನು ಪರಿಗಣಿಸದೇ ತರಾತುರಿಯಲ್ಲಿ ಈ ನೀತಿಯನ್ನು ಜಾರಿಗೆ ತಂದಿತ್ತು.

ಚೆನ್ನೈ: ರಾಷ್ಟ್ರೀಯ ಶಿಕ್ಷಣ ನೀತಿ–2020 (National Education Policy 2020) ಜಾರಿಗೆ ಸಂಬಂಧಿಸಿದಂತೆ ಪ್ರಾಯೋಗಿಕ ಸವಾಲುಗಳಿದ್ದು, ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ನೀತಿ ಸೂಕ್ತವಲ್ಲ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಹೊಸ ಪಠ್ಯಕ್ರಮ: ಶಿಕ್ಷಣವನ್ನು ಮರುರೂಪಿಸುವುದು’ ಎಂಬ ವಿಷಯದ ಕುರಿತು ನಳಂದ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಸುನೈನಾ ಸಿಂಗ್ ಅವರೊಂದಿಗೆ ನಡೆದ ಸಂವಾದದಲ್ಲಿ ಸುಧಾಕರ್ ಅವರು ಮಾತನಾಡಿದರು.
ದೇಶದಲ್ಲಿ NEP-2020 ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಆದರೆ, ಹಿಂದಿನ ಸರ್ಕಾರ ವಾಸ್ತವಾಂಶಗಳನ್ನು ಪರಿಗಣಿಸದೇ ತರಾತುರಿಯಲ್ಲಿ ಈ ನೀತಿಯನ್ನು ಜಾರಿಗೆ ತಂದಿತ್ತು. ಹೀಗಾಗಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಜ್ಞರ ಸಮಿತಿಯನ್ನು ರಚಿಸಿತು.
ತಜ್ಞರ ಸಮಿತಿ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. NEP-2020 ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಹೆಚ್ಚು ಸೂಕ್ತವಾಗಿದ್ದು, ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತವಲ್ಲ್ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಖಾಸಗಿ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಸ್ವಾಯತ್ತತೆ ಹೊಂದಿದ್ದು, ಸಂಯೋಜಿತ ಕ್ಯಾಂಪಸ್‌ಗಳನ್ನು ನಿರ್ವಹಿಸುತ್ತವೆ, ಈ ರಚನೆಯು ವಿಭಾಗಗಳಲ್ಲಿ ಸುಗಮ ಶೈಕ್ಷಣಿಕ ಚಲನಶೀಲತೆಯನ್ನು ಸಕ್ರಿಯಗೊಳಿಸುತ್ತದೆ. ಆದರೆ, ಸಾರ್ವಜನಿಕ ಸಂಸ್ಥೆಗಳು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದು, ಅಧ್ಯಾಪಕರ ಕೊರತೆ ಹಾಗೂ ಮೂಲಸೌಕರ್ಯ ಅಭಾವ ಎದುರಿಸುತ್ತಿವೆ. ಅಧ್ಯಾಪಕರ ಕೊರತೆಯೇ ಎನ್ಇಪಿ ಜಾರಿಗೆ ಅತಿ ದೊಡ್ಡ ಸವಾಲಾಗಿದೆ.
ಅನೇಕ ಸಂಸ್ಥೆಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು, ಇದು ಸೈಬರ್ ಭದ್ರತೆ ಅಥವಾ ಇತರೆ ಕೋರ್ಸ್ ಆಯ್ಕೆಗಳನ್ನು ನೀಡುವುದು ಕಷ್ಟಕರವಾಗಿಸುತ್ತದೆ .ಆದ್ದರಿಂದ, ಮೂಲಭೂತ ಸಾಮರ್ಥ್ಯಗಳನ್ನು ಬಲಪಡಿಸದೆ, ಸಾರ್ವಜನಿಕ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಎನ್ಇಪಿ ಗುರಿಗಳನ್ನು ಸಾಧಿಸುವುದು ಕಷ್ಟಕರವೆಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



